Narendra Modi: ನಾಳೆ ಗುಮ್ಮಟನಗರಕ್ಕೆ ಪ್ರಧಾನಿ ಮೋದಿ, ಎಲ್ಲೆಡೆ ಭಾರೀ ಭದ್ರತೆ!

By Ravi Janekal  |  First Published Apr 28, 2023, 3:14 PM IST

ನಾಳೆ ಗುಮ್ಮಟನಗರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.  ಜಿಲ್ಲೆಯ 8 ಕ್ಷೇತ್ರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಒಂದು ಕ್ಷೇತ್ರ.. ಒಟ್ಟು 9 ಮತಕ್ಷೇತ್ರ ಗುರಿಯಾಗಿಸಿಕೊಂಡು ಮೋದಿ ಸಮಾವೇಶ ಆಯೋಜನೆ ಮಾಡಲಾಗಿರುವ ಹಿನ್ನೆಲೆ ಲಕ್ಷಾಂತರ ಜನರು ಹರಿದು ಬರುವ ಸಾಧ್ಯತೆ ಇದೆ.


ವಿಜಯಪುರ (ಏ.28) : ನಾಳೆ ಗುಮ್ಮಟನಗರಿಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ.  ಜಿಲ್ಲೆಯ 8 ಕ್ಷೇತ್ರ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಒಂದು ಕ್ಷೇತ್ರ.. ಒಟ್ಟು 9 ಮತಕ್ಷೇತ್ರ ಗುರಿಯಾಗಿಸಿಕೊಂಡು ಮೋದಿ ಸಮಾವೇಶ ಆಯೋಜನೆ ಮಾಡಲಾಗಿರುವ ಹಿನ್ನೆಲೆ ಲಕ್ಷಾಂತರ ಜನರು ಹರಿದು ಬರುವ ಸಾಧ್ಯತೆ ಇದೆ.

ನಗರದ ಸೈನಿಕ ಶಾಲೆಯಲ್ಲಿ ಬಿಜೆಪಿ  ಸಮಾವೇಶ ನಡೆಯಲಿದೆ. ಶ್ರೀ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ನಡೆದ ಸ್ಥಳದಲ್ಲೆ ಮೋದಿ ಸಮಾವೇಶ ಆಯೋಜಿಸಲಾಗಿದೆ.  ಈ ವಿಚಾರ ತಿಳಿದು ಪುಳಕಿತರಾಗಿರಯವ ಪ್ರಧಾನಿ ಮೋದಿ. ಈ ಸಮಾವೇಶಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆಯಿದೆ.  ಅದಕ್ಕಾಗಿ 12 ಏಕರೆಯಲ್ಲಿ ಹಾಕಲಾದ ಶಾಮಿಯಾನ, 40×60 ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಇನ್ನು ಈ ಸಮಾವೇಶದಲ್ಲಿ 80 ಸಾವಿರ ಆಸನದ ವ್ಯವಸ್ಥೆ ಇದ್ದು, 20 ಸಾವಿರ ಆಸನಗಳನ್ನ ಮೀಸಲಿಟ್ಟಿರುವ ಆಯೋಜಕರು. ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ತೈಲವರ್ಣದ ಭಾವಚಿತ್ರ ಗಿಫ್ಟ್ ನೀಡಲಿರುವ ಬಿಜೆಪಿ ನಾಯಕರು.

Latest Videos

undefined

ರಾಜ್ಯಕ್ಕೆ ಮೋದಿ ನೂರು ಬಾರಿ ಬಂದ್ರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ- ಸಿದ್ದರಾಮಯ್ಯ

ಪ್ರಧಾನಿಗೆ ಖಡಕ್ ರೊಟ್ಟಿ ಊಟ:

ಸಮಾವೇಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಖಡಕ್ ಜೋಳದ ರೊಟ್ಟಿ, ಶೇಂಗಾ ಸಿಹಿ ಹೋಳಿಗೆ, ಕೊಲ್ಹಾರದ ಕೆನೆ ಮೊಸರು, ಶೇಂಗಾ ಚಟ್ನಿ, ಉಸುಳಿ, ಪುಲ್ಕಾ, ಗುಜರಾತ್ ದಾಲ್ ಊಟದ ರುಚಿ ಸವಿಯಲಿದ್ದಾರೆ. ಊಟದ ವ್ಯವಸ್ಥೆ ಮಾಡಲಾಗಿರುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಕಾರ್ಯಕ್ರಮದ ಉಸ್ತುವಾರಿ ಶಿವರುದ್ರ ಬಾಗಲಕೋಟ ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆ ಹಿಂಭಾಗ ಪಾರ್ಕಿಂಗ್:

ಬಿಜೆಪಿ ಸಮಾವೇಶಕ್ಕೆ ಲಕ್ಷಾಂತರ ಜನರು ಬರಲಿದ್ದು ಎಲ್ಲರಿಗೂ ತೊಂದರೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರದ ಜಿಲ್ಲಾಸ್ಪತ್ರೆಯ ಹಿಂಬದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ

ಮೋದಿ ಆಗಮನ ಹಿನ್ನೆಲೆ ಭಾರೀ ಭದ್ರತೆ:

ಗುಮ್ಮಟನಗರಿಗೆ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಭಾರಿ ಬಿಗಿ ಭದ್ರತೆ ಮಾಡಲಾಗಿದೆ. ಈಗಾಗಲೇ ಬಿಡುಬಿಟ್ಟಿರುವ ಪೊಲೀಸರು. ಸೈನಿಕ ಶಾಲೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಸ್ಪಿ ಆನಂದಕುಮಾರ್ ಮಾಹಿತಿ ನೀಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇದಕ್ಕಾಗಿ 5 ಜಿಲ್ಲೆಗಳಿಂದ ಭದ್ರತೆಗೆ ಪೊಲೀಸ್ ಸಿಬ್ಬಂದಿಗ ಕರೆಯಿಸಿಕೊಂಡಿರುವ ವಿಜಯಪುರ ಎಸ್ಪಿ ಡಾ. ಆನಂದಕುಮಾರ್. 5 ಜಿಲ್ಲೆಗಳ ಎಸ್ಪಿಗಳು ಮೋದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. 

ಯಾರಿಗೆ ಬಂದಿದೆ ಅಚ್ಛೇದಿನ್?: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ

5 ಎಸ್ಪಿ, 16 ಡಿವೈಎಸ್ಪಿ, 32 ಸಿಪಿಐ, 70 ಪಿಎಸ್‌ಐ, 157 ಎಎಸ್‌ಐ, 560 ಎಸಿಪಿಸಿ, 140 ಮಹಿಳಾ ಸಿಬ್ಬಂದಿ, 500 ಹೋಮ್ ಗಾರ್ಡ್ ಸಿಬ್ಬಂದಿ ನಿಯೋಜನೆ.

9 ಪ್ಯಾರಾಮಿಲಿಟರಿ ಪಡೆಗಳು, 12 ಕೆಎಸ್‌ಆರ್‌ಪಿ, ಡಿಆರ್ ತುಕಡಿಗಳ, ವಿಶೇಷ ಡಾಗ್ ಸ್ಕಾಡ್ ನಿಯೋಜನೆ. ಮೋದಿ ಕಾರ್ಯಕ್ರಮ ನಡೆಯುವ ವೇದಿಕೆ, ಶಾಮಿಯಾನ ಸುತ್ತಲು ಸಿಸಿಟಿವಿ ಅಳವಡಿಕೆಯಾಗಿದೆ. ಒಟ್ಟಿನಲ್ಲಿ ಮೋದಿ ಸಮಾವೇಶಕ್ಕೆ ಭದ್ರಕೋಟೆ ನಿರ್ಮಿಸಿರುವ ಪೊಲೀಸ್ ಇಲಾಖೆ. ಮೋದಿ ಆಗಮನಕ್ಕೆ ಕಾರ್ಯಕರ್ತರು ಉತ್ಸಾಹದಿಂದ ಕಾಯುತ್ತಿದ್ದಾರೆ. 

click me!