ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಏ.27ರಂದು ಶಿವಮೊಗ್ಗಕ್ಕೆ ಬರಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಶಿವಮೊಗ್ಗ (ಏ.27) : ಎಐಸಿಸಿ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಏ.27ರಂದು ಶಿವಮೊಗ್ಗಕ್ಕೆ ಬರಲಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಹುಲ್ ಗಾಂಧಿ(Rahul gandhi) ಅವರು ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣ(Shivamogga airport)ಕ್ಕೆ ಬರಲಿದ್ದಾರೆ. ರಾಜ್ಯದಲ್ಲಿ ಪ್ರವಾಸ ಮಾಡುತ್ತಿರುವ ಪ್ರಿಯಾಂಕ ಗಾಂಧಿ (Priyanka gandhi)ಅವರು ಹೆಲಿಕಾಪ್ಟರ್ ಮೂಲಕ ವಿಮಾನ ನಿಲ್ದಾಣ ಸೇರಲಿದ್ದಾರೆ. ಈ ಇಬ್ಬರೂ ಮಧ್ಯಾಹ್ನ ಸುಮಾರು 12.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. 45 ನಿಮಿಷ ಕಾಲ ಜಿಲ್ಲಾ ಕಾಂಗ್ರೆಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಉಡುಪಿ ಜಿಲ್ಲೆ ಕಾಪುಗೆ ತೆರಳುವರು ಎಂದು ಮಾಹಿತಿ ನೀಡಿದರು.
ಭದ್ರತೆ ದೃಷ್ಟಿಯಿಂದ ಕಾರ್ಯಕರ್ತರು ಅವರನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಪಕ್ಷದ ಮುಖಂಡರು ಜೊತೆಗೆ ಇರುತ್ತಾರೆ. ಕಾಂಗ್ರೆಸ್ ಪರ ಇಡೀ ಜಿಲ್ಲೆಯಲ್ಲಿ ಪೂರಕವಾದ ವಾತಾವರಣವಿದೆ. ಬಿಜೆಪಿಯ ವಿರುದ್ಧದ ಗಾಳಿ ಬೀಸುತ್ತಿದೆ. ಎಲ್ಲಾ ಏಳೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಪಕ್ಷ ಬಿಟ್ಟು ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷಾಂತರ ಎನ್ನುವುದು ರಾಜಕಾರಣದ ಒಂದು ಭಾಗವಾಗಿದೆ. ಬಿಜೆಪಿಯಿಂದ ಕಾಂಗ್ರೆಸ್ಸಿಗೂ ಹಲವರು ಬಂದಿದ್ದಾರೆ ಎಂದರು.
ಕೆಬಿಪಿ ಜೆಡಿಎಸ್ ಹೋಗಿದ್ದರಿಂದ ನಷ್ಟವಿಲ್ಲ:
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮತ್ತು ಅವರ ಬೆಂಬಲಿಗರು ಪಕ್ಷ ಸೇರಿದ್ದಾರೆ ಅಷ್ಟೆ. ಇದು ಅಂತಹ ಬಹುದೊಡ್ಡ ಪರಿಣಾಮವೇನೂ ಬೀರುವುದಿಲ್ಲ. ಅವರು ಕಳೆದ ಬಾರಿ 35 ಸಾವಿರ ಮತ ಪಡೆದಿದ್ದು, ಪಕ್ಷದಿಂದ ಹೊರತು ಅವರ ಸ್ವಂತ ಬಲದಿಂದಲ್ಲ. ಹೀಗಾಗಿ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಯಾರೇ ಬಿಟ್ಟು ಹೋದರೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮ ಹಾಕಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಹುಲ್ ಗಾಂಧಿ ಮದ್ವೆಯಾಗ್ತಿದ್ದಾರಾ? ಕೈ ನಾಯಕನ ಪುತ್ರಿ ಮದ್ವೆ ಕಾಗದದಲ್ಲಿ ರಾಗಾ ಫೋಟೋ
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಚ್.ಎಂ. ಚಂದ್ರಶೇಖರ್, ಚಂದ್ರಭೂಪಾಲ್, ಎಚ್.ಪಿ ಗಿರೀಶ್, ಎಸ್.ಪಿ. ಶೇಷಾದ್ರಿ, ಸುರೇಶ್ ಶೆಟ್ಟಿ, ಚಂದನ್ ಸೇರಿದಂತೆ ಹಲವರಿದ್ದರು.