ಇಂದು ಸಂಜೆ ಹೈಕಮಾಂಡ್ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಲಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಕರೆದಿದ್ದ ಅಭಿಮಾನಿಗಳ ಸಭೆ ಬಳಿಕ ಹುಬ್ಬಳ್ಳಿ ಸೆಂಟ್ರಲ್ ಟಿಕೆಟ್ ಆಕಾಂಕ್ಷಿ ಮಾಜಿ ಉಪಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.
ಹುಬ್ಬಳ್ಳಿ (ಏ.15) : ಇಂದು ಸಂಜೆ ಹೈಕಮಾಂಡ್ ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಲಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಹುಬ್ಬಳ್ಳಿ ಸೆಂಟ್ರಲ್ ಟಿಕೆಟ್ ಆಕಾಂಕ್ಷಿ ಮಾಜಿ ಉಪಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರೆದಿದ್ದ ಅಭಿಮಾನಿಗಳ ಸಭೆ ಬಳಿಕ ಮಾತನಾಡಿದ್ದಾರೆ.
ಸಂಜೆ 6 ಗಂಟೆಯೊಳಗೆ ಹೈಕಮಾಂಡ್ ನಿಂದ ಸುದ್ದಿ ಬರಲಿದೆ. ಈಗಾಗಲೇ ಟಿಕೆಟ್ ಸಿಗುವುದಾಗಿ ಮುಖಂಡರು ಹೇಳಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದ ಜಗದೀಶ್ ಶೆಟ್ಟರ್. ಶೆಟ್ಟರ್ ಹೇಳಿಕೆಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯಿಸಿದ್ದು, ಏನೇ ನಿರ್ಧಾರ ತೆಗೆದುಕೊಂಡರೂ ಅವರೊಂದಿಗೆ ನಾವಿರುತ್ತೇವೆ ಎಂದು ಘೋಷಣೆ ಮಾಡಿದ ಅಭಿಮಾನಿಗಳು.
Jagadish Shettar: ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವು ನೀಡಿ ಭಾವುಕರಾದ ಶೆಟ್ಟರ್!
ಜಗದೀಶ ಶೆಟ್ಟರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಣೆ ವಿಚಾರವಾಗಿ ನಿನ್ನೆ ಶುಕ್ರವಾರ ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಸೆಂಟ್ರಲ್ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾಲಿಕೆಯ ಉಪ ಮೇಯರ್ ಸೇರಿದಂತೆ 16 ಜನ ಬಿಜೆಪಿ ಸದಸ್ಯರು, 50ಕ್ಕೂ ಹೆಚ್ಚು ಪಕ್ಷದ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದರು. ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌ಗೆ ರಾಜೀನಾಮೆ ಪತ್ರ ಕೊಟ್ಟಿರುವ ಪಾಲಿಕೆ ಸದಸ್ಯರು, 3ನೆಯ ಪಟ್ಟಿಯಲ್ಲಿ ಶೆಟ್ಟರ್‌ಗೆ ಟಿಕೆಟ್ ಕೊಡಲೇಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರು. ಇಂದು ಹೈಕಮಾಂಡ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿರುವ ಹಿನ್ನೆಲೆ ಶೆಟ್ಟರ್ ಅವರು ತಮ್ಮ ಬೆಂಬಲಿಗರ ಸಭೆಯನ್ನು ಸ್ವಗೃಹದಲ್ಲಿ ಕರೆದಿದ್ದರು. ಇದೀಗ ಸಂಜೆ ಹೈಕಮಾಂಡ್ ಸಂಜೆ ಏನು ಸುದ್ದಿಕೊಡುತ್ತದೆ ಎಂಬುದರ ಮೇಲೆ ಶೆಟ್ಟರ್ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.