ರಾಹುಲ್ ಗಾಂಧಿ ಕೈಲಿ ಅಧಿಕಾರ, ಸೋನಿಯಾ ಬಳಿ ರಿಮೋಟ್ ಇದ್ದಿದ್ರೆ ಕೊರೋನಾ ಸಂಕಷ್ಟಕಾಲದಲ್ಲಿ ದೇಶದ ಜನರಿಗೆ ಸಕಾಲದಲ್ಲಿ ಉಚಿತ ಲಸಿಕೆ ಸಿಗ್ತಿತ್ತಾ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಪ್ರಶ್ನಿಸಿದರು.
ಹಿರಿಯೂರು (ಏ.30) : ರಾಹುಲ್ ಗಾಂಧಿ ಕೈಲಿ ಅಧಿಕಾರ, ಸೋನಿಯಾ ಬಳಿ ರಿಮೋಟ್ ಇದ್ದಿದ್ರೆ ಕೊರೋನಾ ಸಂಕಷ್ಟಕಾಲದಲ್ಲಿ ದೇಶದ ಜನರಿಗೆ ಸಕಾಲದಲ್ಲಿ ಉಚಿತ ಲಸಿಕೆ ಸಿಗ್ತಿತ್ತಾ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಪ್ರಶ್ನಿಸಿದರು.
ಬಿಜೆಪಿ ವತಿಯಿಂದ ನಗರದ ನೆಹರು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇದ್ದುದರಿಂದಲೇ ದೇಶದ ಜನರನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಲಾಯಿತೆಂದರು. ವಿರೋಧ ಪಕ್ಷಗಳು ಪದೇ ಪದೇ ಮೋದಿಯವರನ್ನು ಟಾರ್ಗೆಚ್ ಮಾಡುತ್ತಿವೆ. ಮೋದಿಯವರು ಒಂದು ಶಕ್ತಿಯಾಗಿ ಬೆಳೆದಿದ್ದು ಜಾಗತಿಕ ಮಟ್ಟದ ನಾಯಕರಾಗಿದ್ದಾರೆ.
ಕಾಂಗ್ರೆಸ್ ಕಿತ್ತೊಗೆದು ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ಕಾಂಗ್ರೆಸ್‌ನವರು ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ (Priyanka gandhi)ಕರೆಸಿದ್ದರು. ಪೂರ್ಣಿಮಾ ವಿರುದ್ಧ ಹಿರಿಯೂರಿನಲ್ಲಿ ಪ್ರಚಾರ ಮಾಡಿಸಿದರು. ಅವರ ಮಾತು ಹಿರಿಯೂರಿನಲ್ಲಿ ಕೆಲಸಕ್ಕೆ ಬರೋದಿಲ್ಲ. ಪ್ರಿಯಾಂಕಾ ಗಾಂಧಿಯವರು ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗ್ಯಾರಂಟಿ ಇಲ್ಲ. ಇನ್ನೂ ಅವರು ಕೊಟ್ಟಕಾರ್ಡ್‌ಗೆ ಏನು ಗ್ಯಾರಂಟಿ. ಅವೆಲ್ಲಾ ಸುಳ್ಳು ಭರವಸೆಗಳು. ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇದ್ದಾಗ ರೈತಪರ ಯಾಕೆ ಕೆಲಸ ಮಾಡಲಿಲ್ಲ. ಕಿಸಾನ್ ಸಮ್ಮಾನ್ ಯೋಜನೆ(Kissan samman scheme)ಗೆ ರೈತರ ಪಟ್ಟಿಯನ್ನು ಸಹ ಅವರು ಕೊಟ್ಟಿರಲಿಲ್ಲ. ಬಸವರಾಜ… ಬೊಮ್ಮಾಯಿ(Basavaraj Bommai)ಯವರು ಬಜೆಚ್‌ನಲ್ಲಿ ಘೋಷಿಸಿದ ಯೋಜನೆಗಳನ್ನೇ ಕಾಂಗ್ರೆಸ್ ನಕಲು ಮಾಡಿದೆ. ಕೇಂದ್ರ ಸರ್ಕಾರ ಭದ್ರಾ ಯೋಜನೆಗೆ 5200 ಕೋಟಿ ಕೊಟ್ಟಿದೆ. ನೀರಾವರಿ ಯೋಜನೆಗೆ ನಮ್ಮ ಸರ್ಕಾರ ಸದಾ ಒತ್ತು ನೀಡಿದೆ. ಮೋದಿಯವರ ನೇತೃತ್ವದ ಸರ್ಕಾರದಿಂದ ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಯಿತು. ಗೊಂದಲದ ಗೂಡು ಆಗಿರುವ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಕಮಲ ಅರಳಿಸಿ. ರಾಜ್ಯದಲ್ಲಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಬೇಕು, ಆ ಕೆಲಸ ಇಲ್ಲಿಂದಲೇ ಶುರುವಾಗಲಿ ಎಂದರು.
ಪ್ರಧಾನಿ ಮೋದಿ ವಿಷ ಸರ್ಪವಲ್ಲ, ಕಾಳಿಂಗ ಸರ್ಪ! ಸಚಿವ ಸುಧಾಕರ್
ಮಾಜಿ ಸಂಸದ ಜನಾರ್ಧನ ಸ್ವಾಮಿ, ಜಿಲ್ಲಾಧ್ಯಕ್ಷ ಮುರುಳಿ,ಮಂಡಲ ಅಧ್ಯಕ್ಷ ವಿಶ್ವನಾಥ್, ಡಿ.ಟಿ.ಶ್ರೀನಿವಾಸ್, ಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಉರಿ ಬಿಸಿಲು ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಚುನಾವಣಾ ವೀಕ್ಷಕರು ಹಿರಿಯೂರು ಕ್ರೀಡಾಂಗಣದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಂದಿದ್ದ ಹೆಲಿಕ್ಯಾಪ್ಟರ್ ಸಪಾಸಣೆ ಮಾಡಿದರು.