Karnataka election 2023: ಮೂಡಿಗೆರೆಗೂ ಮುತ್ತಿದ ಕುಟುಂಬ ರಾಜಕಾರಣ!

By Kannadaprabha News  |  First Published Apr 17, 2023, 2:29 PM IST

ಕುಟುಂಬ ರಾಜಕಾರಣ,- ಇದು, ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೂ ಬೇರು ಬಿಟ್ಟಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆ ಹೊರತಾಗಿಲ್ಲ. ಜಿಲ್ಲೆಯ ತರೀಕೆರೆ, ಕಡೂರು, ಬೀರೂರು, ಶೃಂಗೇರಿ ಕ್ಷೇತ್ರದಲ್ಲಿ ಪ್ರಯೋಗ ಮಾಡಲಾಗಿದ್ದ ಕುಟುಂಬ ರಾಜಕಾರಣ, ಇದೇ ಮೊದಲ ಬಾರಿಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲೂ ಕಾಣಿಸಿಕೊಂಡಿದೆ.


ಆರ್‌. ತಾರಾನಾಥ್‌

ಚಿಕ್ಕಮಗಳೂರು (ಏ.17) :

Latest Videos

undefined

ಕುಟುಂಬ ರಾಜಕಾರಣ,- ಇದು, ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೂ ಬೇರು ಬಿಟ್ಟಿದೆ. ಇದರಿಂದ ಚಿಕ್ಕಮಗಳೂರು ಜಿಲ್ಲೆ ಹೊರತಾಗಿಲ್ಲ. ಜಿಲ್ಲೆಯ ತರೀಕೆರೆ, ಕಡೂರು, ಬೀರೂರು, ಶೃಂಗೇರಿ ಕ್ಷೇತ್ರದಲ್ಲಿ ಪ್ರಯೋಗ ಮಾಡಲಾಗಿದ್ದ ಕುಟುಂಬ ರಾಜಕಾರಣ, ಇದೇ ಮೊದಲ ಬಾರಿಗೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲೂ ಕಾಣಿಸಿಕೊಂಡಿದೆ.

ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರು ಈ ಬಾರಿ ಇದೇ ಮೊದಲ ಬಾರಿಗೆ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುವ ಮೂಲಕ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಹರಿಬಿಟ್ಟ ಹೆಚ್.ಡಿ. ಕುಮಾರಸ್ವಾಮಿ: ಮೋದಿ, ಅಮಿತ್‌ ಶಾಗೆ ಟಾಂಗ್

ಮೊದಲ ಎಲೆಕ್ಷನ್‌ :

1952ರಲ್ಲಿ ದೇಶದಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ತರೀಕೆರೆ ವಿಧಾನಸಭಾ ಕ್ಷೇತ್ರದ ಫಲಿತಾಂಶ ಕುರಿತು ಪರಾಭವಗೊಂಡಿದ್ದ ಅಭ್ಯರ್ಥಿ ಟಿ.ಸಿ. ಬಸಪ್ಪ ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು.

ಈ ಪ್ರಕರಣ ಸುಪ್ರಿಂಕೋರ್ಚ್‌ ಅಂಗಳದಲ್ಲೂ ಸದ್ದು ಮಾಡಿತು. ಇಲ್ಲಿಂದ ತೀರ್ಪು ಹೊರ ಬಂದು ಟಿ.ಸಿ. ಬಸಪ್ಪ ಅವರಿಗೆ ನ್ಯಾಯ ಸಿಗುವಷ್ಟರಲ್ಲಿ ಅವರು ನಿಧನರಾಗಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಟಿ.ಸಿ.ಬಸಪ್ಪ ಅವರ ಸಹೋದರ ಟಿ.ಸಿ. ಶಾಂತಪ್ಪ ಅವರು ಸ್ಪರ್ಧೆ ಮಾಡಿದ್ದರು. ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತು ನ್ಯಾಯಾಲಯದ ಮೆಟ್ಟಿಲು ಏರಿದ, 1952ರ ಮೊದಲ ಅವಧಿಯಲ್ಲೇ ಉಪ ಚುನಾವಣೆ ನಡೆದ ತರೀಕೆರೆ ಕ್ಷೇತ್ರದಲ್ಲಿ ಮತ್ತೊಂದು ದಾಖಲೆ.ಕುಟುಂಬ ರಾಜಕಾರಣಕ್ಕೆ ಮುನ್ನುಡಿ ಬರೆದಿರುವುದು. ಅಂದರೆ, ಟಿ.ಸಿ. ಬಸಪ್ಪ ಅವರ ಸಹೋದರ ಟಿ.ಸಿ. ಶಾಂತಪ್ಪ ಸ್ಪರ್ಧೆ ಮಾಡಿರುವುದು.

ಬಯಲು ಸೀಮೆಯಲ್ಲಿ ಸಕ್ಸಸ್‌:

ಬೀರೂರು ಹಾಗೂ ಕಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕುಟುಂಬ ರಾಜಕಾರಣ ಯಶಸ್ವಿಯಾಗಿದೆ. ಬೀರೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಎಸ್‌.ಆರ್‌. ಲಕ್ಷ್ಮ ಯ್ಯ ಅವರ ಪುತ್ರ ಎಸ್‌.ಎಲ್‌.ಧರ್ಮೇಗೌಡ ಅವರು 2004ರಲ್ಲಿ ಮೊದಲ ಬಾರಿಗೆ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಆಶೀರ್ವಾದದಿಂದ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಎಸ್‌.ಎಲ್‌. ಧರ್ಮೇಗೌಡ ಹಾಗೂ ಅವರ ಸಹೋದರ ಎಸ್‌.ಎಲ್‌. ಭೋಜೇಗೌಡ ಅವರು ವಿಧಾನಪರಿಷತ್‌ ಸದಸ್ಯರಾದರು. ಇಂದಿಗೂ ಕೂಡ ಜೆಡಿಎಸ್‌ನಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರ ನಿಕಟವರ್ತಿಗಳಲ್ಲಿ ಎಸ್‌.ಎಲ್‌. ಭೋಜೇಗೌಡ ಸಹ ಓರ್ವರಾಗಿದ್ದಾರೆ.

ಕಡೂರು ವಿಧಾನಸಭಾ ಕ್ಷೇತ್ರದಲ್ಲೂ ಕುಟುಂಬ ರಾಜಕಾರಣ ನಡೆದುಕೊಂಡು ಬಂದಿದೆ. ಕಡೂರಿನ ಕೆ.ಎಚ್‌. ಮುದಿಯಪ್ಪ ಅವರು ಮೈಸೂರು ರಾಜ್ಯದ ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದರು. ಅವರ ಪುತ್ರ ಕೆ.ಎಂ. ಕೃಷ್ಣಮೂರ್ತಿ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದರು. ಅವರು 1994ರಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡರು.

ಕೆ.ಎಂ. ಕೃಷ್ಣಮೂರ್ತಿ ಅವರ ನಿಧನದ ನಂತರ ಕಡೂರು ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೆ.ಎಂ. ಕೆಂಪರಾಜ್‌ ಸ್ಪರ್ಧೆ ಮಾಡಿದ್ದರು. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಆ ನಂತರದಲ್ಲಿ ಅವರಿಗೆ ರಾಜಕೀಯ ಭವಿಷ್ಯದಲ್ಲಿ ಒಳ್ಳೆಯ ದಿನಗಳು ಬರಲೇ ಇಲ್ಲ.

ಶೃಂಗೇರಿಯಲ್ಲಿ ವಿಫಲ:

ಮಲೆನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಎಚ್‌.ಜಿ. ಗೋವಿಂದೇಗೌಡ ಅವರು ಶೃಂಗೇರಿ ಕ್ಷೇತ್ರದಲ್ಲಿ ಮೂರು ಬಾರಿ ಜಯಗಳಿದ್ದರು. ಅವರ ನಿಧನದ ನಂತರದಲ್ಲಿ ಅವರ ಪುತ್ರ ಎಚ್‌.ಜಿ. ವೆಂಕಟೇಶ್‌ 2018 ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಗೆಲುವು ಸಾಧ್ಯವಾಗಲಿಲ್ಲ. ಹಾಗಾಗಿ ಅವರು 2023ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡಲು ಆಸಕ್ತಿ ತೋರಲಿಲ್ಲ.

ಮೂಡಿಗೆರೆ ಏನಾಗುತ್ತೆ ?

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಅಸ್ತ್ರ ಪ್ರಯೋಗ ಮಾಡಲಾಗಿದೆ. ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಮೋಟಮ್ಮ ಅವರು ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಅಂತ್ಯವಾಯ್ತು 4 ದಶಕಗಳ ಕುಟುಂಬ ರಾಜಕಾರಣ!

ಚುನಾವಣಾ ಅಖಾಡದಲ್ಲಿ ಎಂಟ್ರಿ ಕೊಟ್ಟಿರುವ ನಯನಾ ಮೋಟಮ್ಮ ಅವರ ಮುಂದಿನ ರಾಜಕೀಯ ಭವಿಷ್ಯಕ್ಕೆ ಇದೊಂದು ಪ್ರಮುಖ ಕಾಲಘಟ್ಟ. ಕಡೂರು ಕ್ಷೇತ್ರದಲ್ಲಿ 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೊನೆಯಾಗಿದ್ದ ಕುಟುಂಬ ರಾಜಕಾರಣಕ್ಕೆ ಜಿಲ್ಲೆಯಲ್ಲಿ ಈಗ ಮತ್ತೆ ಮರುಜೀವ ಬರುತ್ತಾ ಕಾದು ನೋಡಬೇಕಾಗಿದೆ.

click me!