Ticket fight: ಕಾಫಿನಾಡು ಮೂಡಿಗೆರೆಯಲ್ಲಿ ಮುಗಿಯದ ಬಿಜೆಪಿ ಬಣ ರಾಜಕೀಯ!

By Ravi Janekal  |  First Published Mar 28, 2023, 10:37 PM IST

ಚಿಕ್ಕಮಗಳೂರು ಬಿಜೆಪಿ ಪಾಳಯದಲ್ಲಿ ಬಣ ರಾಜಕೀಯ ಮುಗಿಯುವ ಲಕ್ಷಗಳು ಕಾಣುತ್ತಿಲ್ಲ. ವಿಧಾನಸಭಾ ಚುನಾವಣೆ ಬರುತ್ತಿದ್ದಂತೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಪರ-ವಿರೋಧ ಭುಗಿಲೆದ್ದಿದೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

 ಚಿಕ್ಕಮಗಳೂರು (ಮಾ.28) : ಕಾಫಿನಾಡು ಮೂಡಿಗೆರೆಯಲ್ಲಿ ಬಿಜೆಪಿ ಟಿಕೆಟ್ ದಂಗಲ್ ಮುಗಿಯುವಂತೆ ಕಾಣುತ್ತಿಲ್ಲ. ಒಬ್ಬರಾದ ಮೇಲೊಬ್ಬರು ಸಿ.ಟಿ.ರವಿ(CT Ravi) ಮನೆಗೆ ಬಂದು  ದುಂಬಾಲು ಬೀಳ್ತಿದ್ದಾರೆ. ಒಂದು ಗುಂಪು ಕುಮಾರಸ್ವಾಮಿ(MP Kumaraswamy)ಗೆ ಟಿಕೆಟ್ ಬೇಡ್ವೇ ಬೇಡ ಅಂದ್ರೆ, ಮತ್ತೊಂದು ಗುಂಪು ಅವರಿಗೆ ಕೊಟ್ರಷ್ಟೆ ಬಿಜೆಪಿ ಗೆಲ್ಲೋದು ಬೇರೆ ಯಾರಿಗೆ ಕೊಟ್ರು ಬಿಜೆಪಿ ಸೋಲುತ್ತೆ ಅಂತ ಅವ್ರೆ ಷರಾ ಬರೆದಿದ್ದಾರೆ. 

Latest Videos

undefined

ಆದ್ರೆ, ಒಂದೊಂದು ಗುಂಪು ಬಂದಾಗ್ಲು ಸಿ.ಟಿ.ರವಿ ಯಾರೇ ಅಭ್ಯರ್ಥಿಯಾದ್ರು ಬಿಜೆಪಿ ಗೆಲ್ಲಿಸುತ್ತೇವೆಂದು ವಚನ ತೆಗೆದುಕೊಂಡು ಕಳಿಸ್ತಿದ್ದಾರೆ. ಒಂದು ವಾರ ವಿರೋಧದವ್ರು, ಮತ್ತೊಂದು ವಾರ ಪರ ಇರುವವರ ಮನವಿ ಸಲ್ಲಿಸುತ್ತಿದ್ದಾರೆ.

ಆಟೋ ನಿಲ್ದಾಣ ನಿರ್ಮಾಣ ವಿವಾದ : ಬಿಜೆಪಿ ಬಣಗಳ ನಡುವೆ ಬಡಿದಾಟ

ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮೂಡಿಗೆರೆ ಕ್ಷೇತ್ರ(Mudigere assembly constituency)ದ ಶಾಸಕ ಎಂ.ಪಿ ಕುಮಾರಸ್ವಾಮಿ ಪರ ವಿರೋಧ ಶಕ್ತಿ ಪ್ರದರ್ಶನ ಇನ್ನು ನಿಂತಿಲ್ಲ.ಮೂಡಿಗೆರೆಯಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯಂದು ಆರಂಭವಾದ ಪರ ವಿರೋಧ ಜಗಳ ತಣ್ಣಗೆ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಮತ್ತೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಇಂದು ನೂರಾರು ಬೆಂಬಲಿಗರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ನಿವಾಸಕ್ಕೆ ಆಗಮಿಸಿ ಅಹವಾಲು ಸಲ್ಲಿಸಿದರು.

ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಸಿ.ಟಿ.ರವಿ ನಿವಾಸಕ್ಕೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಕುಮಾರಸ್ವಾಮಿ ಬೆಂಬಲಿಗರು  ಪ್ರಧಾನಿ ನರೇಂದ್ರಮೋದಿ(Narendra Modi), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj bommai), ಯಡಿಯೂರಪ್ಪ(BS Yadiyurappa), ಸಿ.ಟಿ.ರವಿ ಅವರಿಗೆ ಜೈಕಾರ ಕೂಗಿ ಕುಮಾರ ಸ್ವಾಮಿ ಪರ ಬಲ ಪ್ರದರ್ಶನ ಮಾಡಿದರು.

ಕಳೆದ ಶನಿವಾರ ಕುಮಾರಸ್ವಾಮಿ ವಿರೋಧಿ ಬಣಸಹ ದೊಡ್ಡ ಸಂಖ್ಯೆಯಲ್ಲಿ ಸಿ.ಟಿ.ರವಿ ನಿವಾಸಕ್ಕೆ ಭೇಟಿ ನೀಡಿ ಹಾಲಿ ಶಾಸಕ ಕುಮಾರಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡಬಾರದು  ಎಂದು ಒತ್ತಾಯಿಸಿತ್ತು.ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಬೆಂಬಲಿಗರು ಇಂದು ಸಿ.ಟಿ.ರವಿ ಅವರನ್ನು ಭೇಟಿ ಮಾಡಿತು. ಮೂಡಿಗೆರೆಯಲ್ಲಿ ಬಿಜೆಪಿ ಉಳಿಯಬೇಕೆಂದರೆ ಕುಮಾರಸ್ವಾಮಿ ಅವರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.

ಎಂಪಿಕೆ ನಮಗೆ ಬೇಕೇ ಬೇಕು ಎಂದು ಘೋಷಣೆ ಕೂಗಿದರಲ್ಲದೆ, ಶಾಸಕರು ಕ್ಷೇತ್ರದಲ್ಲಿ ಉತ್ತಮ ರೀತಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲಾ ಕಾರ್ಯಕರ್ತರು ಹಾಗೂ ಮತದಾರರು ಅವರ ಬೆನ್ನಿಗಿದ್ದಾರೆ. ಅವರ ವಿರುದ್ಧ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಕೆಲಸವು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಮತ್ತೆ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಸಿ.ಟಿ.ರವಿ ಅವರಿಗೆ ಕಾರ್ಯಕರ್ತರು ಭರವಸೆ ನೀಡಿದರು.

ರವಿ ನಿವಾಸಕ್ಕೆ ಕುಮಾರಸ್ವಾಮಿ

ಸ್ವಲ್ಪ ಸಮಯದ ನಂತರ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸಹ ಸಿ.ಟಿ.ರವಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸಿ.ಟಿ.ರವಿ ಅವರು ಕುಮಾರ ಸ್ವಾಮಿ ಸೇರಿದಂತೆ ಕೆಲವು ಪ್ರಮುಖರೊಂದಿಗೆ ಹತ್ತುನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿದರು.ನಂತರ ಮಾತನಾಡಿದ ರವಿ, ನಿಮ್ಮ ಅಭಿಪ್ರಾಯವನ್ನು ಪಕ್ಷದ ಸಂಸದೀಯ ಮಂಡಳಿ ಗಮನಕ್ಕೆ ತರುತ್ತೇನೆ. ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಎಲ್ಲರೂ ಅದಕ್ಕೆ ಬದ್ಧರಾಗಿರಿ, ಯಾರನ್ನೇ ಕಣಕ್ಕಿಳಿಸಿದರು ಗೆಲ್ಲಿಸಿ ತನ್ನಿ ಎಂದು ಕೋರಿದರು.

 

ಬಿಜೆಪಿ, ಕಾಂಗ್ರೆಸ್ ಆಯ್ತು ಇದೀಗ ಮೂಡಿಗೆರೆ ಜೆಡಿಎಸ್‌ನಲ್ಲೂ ಬಂಡಾಯದ ಕಾವು!

ಬಣರಾಜಕೀಯ-ಅಸಮಾಧಾನ

ಮೂಡಿಗೆರೆ ಬಿಜೆಪಿಯಲ್ಲಿ ಬಣರಾಜಕೀಯ ತಾರಕ್ಕೇರುತ್ತಿರುವ ಬಗ್ಗೆ ಕಾರ್ಯಕರ್ತರಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಬಹಿರಂಗವಾಗಿ ಈ ರೀತಿ ಪರ, ವಿರೋಧ ಭಾವನೆ ವ್ಯಕ್ತಪೊಡಿಸುವುದರಿಂದ ವಿರೋಧಿಗಳಿಗೆ ನಮ್ಮ ದೌರ್ಬಲ್ಯಗಳನ್ನು ತೋರ್ಪಡಿಸಿದಂತಾಗುತ್ತದೆ. ಬಣ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಮುಖಂಡರುಗಳ ವಿರುದ್ಧ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದೆ..

click me!