ಬಿಜೆಪಿಗೆ ಮತ ತಂದು ಕೊಡಲ್ವಾ ಕೊಡವ ಅಭಿವೃದ್ಧಿ ನಿಗಮ: ಕೊಡವ ಸಂಘಟನೆಗಳಲ್ಲೇ ಭಿನ್ನರಾಗ!

By Ravi JanekalFirst Published Mar 28, 2023, 10:04 PM IST
Highlights

ಚುನಾವಣಾ ಹೊಸ್ತಿಲಿನಲ್ಲಿ ಸರ್ಕಾರ ಹಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದೆ. ಅದರಲ್ಲಿ ಕೊಡವ ಅಭಿವೃದ್ಧಿ ನಿಗಮವು ಕೂಡ ಒಂದು. ಚುನಾವಣೆ ಘೋಷಣೆಗೆ ಬೆರಳೆಣಿಕೆ ದಿನಗಳಷ್ಟೇ ಇರುವುದರಿಂದ ಬಿಜೆಪಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಆದೇಶ ಹೊರಡಿಸಿರುವುದರ ಹಿಂದೆ ಮತಗಳ ಕ್ರೋಢೀಕರಣದ ಉದ್ದೇಶವೂ ಇದೆ ಎನ್ನಲಾಗಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
 
ಕೊಡಗು (ಮಾ.28): ಚುನಾವಣಾ ಹೊಸ್ತಿಲಿನಲ್ಲಿ ಸರ್ಕಾರ ಹಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದೆ. ಅದರಲ್ಲಿ ಕೊಡವ ಅಭಿವೃದ್ಧಿ ನಿಗಮವು ಕೂಡ ಒಂದು. ಚುನಾವಣೆ ಘೋಷಣೆಗೆ ಬೆರಳೆಣಿಕೆ ದಿನಗಳಷ್ಟೇ ಇರುವುದರಿಂದ ಬಿಜೆಪಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಆದೇಶ ಹೊರಡಿಸಿರುವುದರ ಹಿಂದೆ ಮತಗಳ ಕ್ರೋಢೀಕರಣದ ಉದ್ದೇಶವೂ ಇದೆ ಎನ್ನುವುದು ಸುಳ್ಳಲ್ಲ.

 ಏನೇ ಆಗಲಿ ಕೊಡವ(Kodava)ರ ಬಹುದಿನಗಳ ಬೇಡಿಕೆಯಾಗಿರುವ  ಕೊಡವ ಅಭಿವೃದ್ಧಿ ನಿಗಮ(Kodava Development Corporation)ವನ್ನು ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಇದೇ ತಿಂಗಳ 18 ರಂದು ಕೊಡಗಿಗೆ ಆಗಮಿಸಿದ್ದ ವೇಳೆ ಘೋಷಣೆ ಮಾಡಿದ್ದರು. ನಂತರ ಬೆಂಗಳೂರಿಗೆ ಹೋಗುತ್ತಿದ್ದಂತೆ ಘೋಷಣೆ ಮಾಡಿದ ಎರಡು ದಿನಗಳು ಕಳೆಯುವಷ್ಟರಲ್ಲಿ ಸಿಎಂ ಬೊಮ್ಮಾಯಿಯವರು ಅಧಿಕೃತ ಲಿಖಿತ ಆದೇಶವನ್ನು ಹೊರಡಿಸಿದ್ದರು. ಆದರೆ ಮತಗಳನ್ನು ತಂದು ಕೊಡುತ್ತೆ ಎನ್ನುವ ಬಿಜೆಪಿಯ ಪ್ಲಾನ್ ಅಂದುಕೊಂಡಷ್ಟರ ಮಟ್ಟಿಗೆ ಸಕ್ಸಸ್ ಆಗಲ್ವಾ ಎನ್ನುವ ಪ್ರಶ್ನೆ ಶುರುವಾಗಿದೆ. 

ಉರಿಗೌಡ-ನಂಜೇಗೌಡ ವಿವಾದಕ್ಕೆ ಹೊಸ ತಿರುವು, ಟಿಪ್ಪು ಕೊಂದಿದ್ದು ಕೊಡವರು ಎಂದ ಎನ್.ಯು ನಾಚಪ್ಪ

ಚುನಾವಣೆ(Karnataka assembly election) ಹೊತ್ತಿನಲ್ಲಿ ಯಾವುದೇ ಅನುದಾನ ನೀಡದೆ, ಸಿಬ್ಬಂದಿ ಕಚೇರಿಯೂ ಇಲ್ಲದೆ ಹಲವು ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿದ್ದರ ಹಿಂದೆ ಇದೆಲ್ಲಾ ಚುನಾವಣಾ ಗಿಮಿಕ್(election gimik) ಎಂದು ಸ್ವತಃ ಕೊಡವ ಸಮುದಾಯ(Kodava community)ದ ಹಲವರು ಟೀಕಿಸಿದ್ದರು. ಒಂದೆಡೆ ಯುಕೋ ಸಂಘಟನೆ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರೆ, ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು ನಾಚಪ್ಪ(NU Nachappa) ಇದೊಂದು ರಾಜಕೀಯ ನಾಟಕ ಎಂದು ಟೀಕಿಸಿದ್ದರು. ಇನ್ನು ಮತ್ತೊಂದು ಕೊಡವ ಸಂಘಟನೆಯಾಗಿರುವ  ಯುಕೋ ಸಂಘಟನೆಯ ಅಧ್ಯಕ್ಷ ಮಂಜು ಚಿಣ್ಣಪ್ಪ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿರುವುದರಿಂದ ಕೊಡವ ಅಭಿವೃದ್ಧಿಗೆ ಪೂರಕವಾಗಿದೆ. 

ಇದರಿಂದ ಕೊಡವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದೆವು. ಚುನಾವಣೆ ಹೊಸ್ತಿಲಿನಲ್ಲಿಯೇ ಘೋಷಣೆ ಆಗಿದ್ದರೂ ಅಧಿಕೃತ ಆದೇಶ ಆಗಿರುವುದರಿಂದ ಮುಂದೆ ಬರುವ ಸರ್ಕಾರ ನಿಗಮ ಕಾರ್ಯಾಚರಣೆಗೊಳ್ಳುವಂತೆ ಮಾಡಬೇಕಾಗಿರುವುದು ಅದರ ಜವಾಬ್ದಾರಿ ಎಂದು ಯುಕೋ ಸಂಘಟನೆ ಹೇಳಿದೆ. ಜೊತೆಗೆ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಹಕರಿಸಿದ ಶಾಸಕರಾದ ಕೆ.ಜಿ. ಬೋಪಯ್ಯ(KG Bopaiah), ಮತ್ತು ಅಪ್ಪಚ್ಚು ರಂಜನ್(Appachhu ranjan) ಹಾಗೂ ಸರ್ಕಾರಕ್ಕೆ ಅಭಾರಿಯಾಗಿದ್ದೇವೆ ಎಂದಿದ್ದಾರೆ. ಆದರೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾತ್ರ ಇದು ರಾಜಕೀಯಕ್ಕೆ ಮಾಡಿರುವ ತಂತ್ರ ಅಷ್ಟೇ. ನಮಗೆ ಯಾವುದೇ ಅಭಿವೃದ್ಧಿ ನಿಗಮದ ಅಗತ್ಯ ಇರಲಿಲ್ಲ. 

ಕೊಡವ ಸ್ವಾಯತ್ತ ಲ್ಯಾಂಡ್ ಬೇಡಿಕೆಗೆ ಅಭಿವೃದ್ಧಿ ನಿಗಮ ಕೊಡುಗೆ

ನಮಗೆ ಬೇಕಾಗಿರುವುದು ಕೊಡವ ಸ್ವಾಯತ್ತ ಲ್ಯಾಂಡ್(Kodava Land), ನಮಗೆ ಎಸ್ಟಿ ಟ್ಯಾಗ್ ಬೇಕಾಗಿದೆ. ಕೊಡವ ಸ್ಮಾರಕಗಳು ನಿರ್ಮಾಣವಾಗಬೇಕಾಗಿದೆ. ಜೊತೆಗೆ ನಮ್ಮ ನೆಲ, ಜಲ ಸಂಸ್ಕೃತಿಯನ್ನು ಉಳಿಸಬೇಕಾಗಿದೆ. ಇದ್ಯಾವುದನ್ನೂ ಸರ್ಕಾರ ಪರಿಗಣಿಸದೆ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಮೋಸ ಮಾಡಲು ಹೊರಟಿದ್ದಾರೆ ಎಂದು ದೂರಿದೆ. ಇದುವರೆಗೆ ಒಗ್ಗಟ್ಟಾಗಿದ್ದೇವೆ ಎನ್ನುವಂತೆ ಬಹುತೇಕ ಬಿಜೆಪಿ ಪರವಾಗಿ ಕೊಡವರು ಮತ ಚಲಾಯಿಸುತ್ತಿದ್ದರು. ಆದರೆ ಈ ಬೆಳವಣಿಗೆಗಳನ್ನು ನೋಡಿದರೆ ಅಭಿವೃದ್ಧಿ ನಿಗಮ ಘೋಷಣೆ ಬಳಿಕ ಆಗಿರುವ ಬೆಳವಣಿಗೆಗಳನ್ನು ನೋಡಿದರೆ ಕೊಡವರ ಮತಗಳು ವಿಭಜನೆ ಆಗಿವೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಅದರಲ್ಲೂ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವ ಮತಗಳೇ  ನಿರ್ಣಾಯಕವಾಗಿದ್ದು, ಇದುವರೆಗೆ ಈ ಮತಗಳನ್ನು ನಂಬಿಕೊಂಡಿದ್ದ ಬಿಜೆಪಿ ಅನಾಯಾಸವಾಗಿ ಗೆಲುವು ಸಾಧಿಸುತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಕೊಡವ ಮತಗಳು ವಿಭಜನೆಯಾಗುವಂತೆ ಕಾಣುತಿದ್ದು, ಕೊಡವರ ಮತಗಳನ್ನು ಸಂಪೂರ್ಣ ಹಿಡಿದಿಟ್ಟುಕೊಳ್ಳಲು ಬಿಜೆಪಿ ಮತ್ತೆ ಯಾವ ಪ್ಲಾನ್ ರೂಪಿಸುತ್ತದೆಯೋ ಕಾದು ನೋಡಬೇಕು.

click me!