Karnataka election: ಸಿಂಗಾಪುರಕ್ಕೆ ಹಾರಿದ ಹೆಚ್‌ಡಿ ಕುಮಾರಸ್ವಾಮಿ: ಅತಂತ್ರ ಸ್ಥಿತಿ ಬಂದರೆ ಅಧಿಕಾರ ಹಿಡಿಯುವ ತಂತ್ರ

Published : May 11, 2023, 02:07 PM IST
Karnataka election: ಸಿಂಗಾಪುರಕ್ಕೆ ಹಾರಿದ ಹೆಚ್‌ಡಿ ಕುಮಾರಸ್ವಾಮಿ: ಅತಂತ್ರ ಸ್ಥಿತಿ ಬಂದರೆ ಅಧಿಕಾರ ಹಿಡಿಯುವ ತಂತ್ರ

ಸಾರಾಂಶ

ರಾಜ್ಯದಲ್ಲಿ ಅತಂತ್ರ ಸ್ಥಿತಿ ಬಂದರೆ ಸರ್ಕಾರ ರಚನೆ ಚರ್ಚೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಮತದಾನ ಪೂರ್ಣಗೊಂಡ ಕೂಡಲೇ ಸಿಂಗಾಪುರಕ್ಕೆ ಹಾರಿದ್ದಾರೆ.

ಬೆಂಗಳೂರು (ಮೇ 11): ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ಸ್ಥಿತಿ ಬಂದರೆ ಸರ್ಕಾರ ರಚನೆ ಚರ್ಚೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಮತದಾನ ಪೂರ್ಣಗೊಂಡ ಕೂಡಲೇ ಸಿಂಗಾಪುರಕ್ಕೆ ಹಾರಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಯಶಸ್ವಿಯಾಗಿ ಮತದಾನ ನಡೆದಿದೆ. ಇನ್ನೇನು 3 ದಿನಗಳಲ್ಲಿ ಫಲಿತಾಂಶ ಹೊರ ಬೀಳಲಿದೆ. ಹೀಗಾಗಿ ಮತದಾನ ಮುಕ್ತಾಯವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್.​ಡಿ. ಕುಮಾರಸ್ವಾಮಿ ರಿಲ್ಯಾಕ್ಸ್‌ ಮಾಡಲು ವಿದೇಶಕ್ಕೆ ಹಾರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಮಧ್ಯರಾತ್ರಿ ತಮ್ಮ ಆಪ್ತರೊಂದಿಗೆ ಬೆಂಗಳೂರಿನಿಂದ ಸಿಂಗಾಪುರಕ್ಕೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಅಲ್ಲಿ ರಿಲ್ಯಾಕ್ಸ್‌ ಮಾಡಿ ಕೆಲವು ಮುಖ್ಯ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ. ಜೊತೆಗೆ, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳೂ ಕೂಡ ಕುಮಾರಸ್ವಾಮಿ ನಡೆಯ ಬಗ್ಗೆ ಕಣ್ಣಿಟ್ಟಿವೆ.

ಮೀಸಲಾತಿ ಹಂಚಿಕೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023)  ಘೋಷಣೆಗೂ 3 ತಿಂಗಳ ಮುನ್ನವೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಹೆಚ್​.ಡಿ. ಕುಮಾರಸ್ವಾಮಿ (HD Kumaraswamy) ದಣಿವರಿಯದೇ ಕೆಲಸ ಮಾಡಿ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಶ್ರಾಂತಿ ಪಡೆಯಲು ಮುಂದಾಗಿದ್ದಾರೆ. ಹೀಗಾಗಿ, ಮತದಾನ ಮುಕ್ತಾಯಗೊಂಡ ಕೂಡಲೇ ಫಲಿತಾಂಶ ಬರುವುದರೊಳಗೆ ಮೂರು ದಿನ ರಿಲ್ಯಾಕ್ಸ್‌ ಮಾಡಲು ಹಾಗೂ ಅತಂತ್ರ ಸ್ಥಿತಿ ಬಂದರೆ ತಾವೇ ಅಧಿಕಾರಕ್ಕೆ ಬರುಬೇಕು ಎಂದು ಚರ್ಚೆ ನಡೆಸಲು ತೀವ್ರ ತಮ್ಮ ಆಪ್ತರೊಂದಿಗೆ ಸಿಂಗಾಪೂರ್​ಗೆ ತೆರಳಿದ್ದಾರೆ. 

ಫಲಿತಾಂಶದ ದಿನ ವಾಪಸ್: ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ವಿಧಾನಸಭೆಯ ಫಲಿತಾಂಶ ಪ್ರಕಟವಾಗುವ ಮೇ 13ರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್‌ ಬೆಲಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ವಿವಿಧ ಖಾಸಗಿ ಸಂಸ್ಥೆಗಳಿಂದ ಮತದಾನೋತ್ತರ ಸಮೀಕ್ಷೆಗಳು ಹೊರ ಬಿದ್ದಿದ್ದು, ಅದರಲ್ಲಿ ಜೆಡಿಎಸ್‌ 30 ಸ್ಥಾನಗಳನ್ನು ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅತಂತ್ರ ಸ್ಥಿತಿ ಬರಲಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಅತಂತ್ರ ಸ್ಥಿತಿ ಬಂದಲ್ಲಿ ಯಾರೊಂದಿಗೆ ಕೈ ಜೋಡಿಸಬೇಕು ಎಂಬುದನ್ನು ಕೂಡ ಸಿಂಗಾಪುರದಲ್ಲಿ ಚರ್ಚೆ ಮಾಡಲಿದ್ದಾರೆ. ಆದರೆ, ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿ ಇದ್ದರೆ, ಇಲ್ಲವೋ ಎಂಬುದು ಮಾತ್ರ ಸವರೇ ಹೇಳಬೇಕಿದೆ.

'ಹೈಕಮಾಂಡ್ ನನ್ನನ್ನ ಸಿಎಂ ಮಾಡಿದ್ರೆ ಬೇಡ ಅನ್ನೋಕೆ ಆಗುತ್ತಾ..?'

ಜೆಡಿಎಸ್‌ ಅಭ್ಯರ್ಥಿಗಳೊಂದಿಗೆ ನಿರಂತರ ಸಂಪರ್ಕ:
ಇನ್ನು ರಾಜ್ಯದಲ್ಲಿ ಜೆಡಿಎಸ್‌ ಪಕ್ಷಕ್ಕೆ 20 ರಿಂದ 30 ಸ್ಥಾನಗಳು ಬರಲಿವೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಒಂದು ವೇಳೆ ಕಾಂಗ್ರೆಸ್‌ ಅಥವಾ ಬಿಜೆಪಿಗೆ ಕೆಲವು ಸೀಟುಗಳು ಮಾತ್ರ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕೆಲವು ಜೆಡಿಎಸ್‌ ಅಭ್ಯರ್ಥಿಗಳನ್ನು ಕರೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಜೆಡಿಎಸ್‌ನಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳೊಂದಿಗೆ ಕುಮಾರಸ್ವಾಮಿ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಅವರು ಸರ್ಕಾರ ರಚನೆಯ ಸಂದರ್ಭದಲ್ಲಿ ಆಪರೇಷನ್‌ಗೆ ಒಳಗಾಗದಂತೆ ತೀವ್ರ ನಿಗಾವಹಿಸುತ್ತಿದ್ದಾರೆ. ಜೊತೆಗೆ, ಜೆಡಿಎಸ್‌ ಅಧ್ಯಕ್ಷರು ಮತ್ತು ಕೆಲ ನಾಯಕರಿಗೂ ಗೆಲ್ಲುವ ಅಭ್ಯರ್ಥಿಗಳನ್ನು ಕಾಯ್ದುಕೊಳ್ಳುವಂತೆ ನಿಗಾವಹಿಸಲು ಸೂಚನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?