ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಟೀ ಕುಡಿಯೋದಕ್ಕೆ ಅಂತಾ ಹೊರಗಡೆ ಬಂದು ಕೂತಾಗ, ನನ್ನ ಭೇಟಿಯಾಗಿದ್ರಿ. ಸುತ್ತ ನಿಂತಿದ್ದ ನಾಲ್ಕೈದು ಕಾಂಗ್ರೆಸ್ ಶಾಸಕರಿಗೆ ಸಿಸಿ ಪಾಟೀಲ ಉತ್ತಮ ಕೆಲಸ ಮಾಡುವ ಸಚಿವ ಅಂತಾ ಹೇಳಿದ್ರಿ. ಹೇಳಿದ್ರೋ ಇಲ್ಲೋ? ಮತ್ತೆ ಈಗ್ಯಾಕೆ ಕೆಲಸ ಮಾಡ್ತಿಲ್ಲ ಅಂತಾ ಹೇಳ್ಕೊಂಡು ತಿರುಗಾಡ್ತೀರಿ? ಎಂದು ಸಚಿವ ಸಿಸಿ ಪಾಟೀಲ್ ಸಿದ್ದರಾಮಯ್ಯರನ್ನ ಪ್ರಶ್ನಿಸಿದರು.
ಗದಗ (ಮಾ.11) : ಲೋಕೋಪಯೋಗಿ ಸಚಿವರ ತವರು ಕ್ಷೇತ್ರದಲ್ಲೇ ರಸ್ತೆ ಸರಿಯಾಗಿಲ್ಲ ಅಂತಾ ಟೀಕಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಚಿವ ಸಿಸಿ ಪಾಟೀಲ, ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ..
ನರಗುಂದ ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶ(BJP Vijayasankalpa convention)ದಲ್ಲಿ ಮಾತ್ನಾಡಿದ ಸಚಿವ ಸಿಸಿ ಪಾಟೀಲ(CC Patil), ಇತ್ತೀಚೆಗೆ ನರಗುಂದಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ(Siddaramaiah) ಪ್ರಜಾಧ್ವನಿ(Prajadhwani) ಕಾರ್ಯಕ್ರಮದಲ್ಲಿ ರಸ್ತೆ ವಿಚಾರವಾಗಿ ಟೀಕಿಸಿದ್ರು.
undefined
ರೋಣದಿಂದ ಬರುವ ಮಾರ್ಗ ಮಧ್ಯ ಮಲ್ಲಾಪುರ ಬಳಿ ಐದು ಕಿಮೀ ಕೆಟ್ಟಿದೆ.. ಅದನ್ನ ನಾನು ಒಪ್ಪುತ್ತೇನೆ.. ಆದ್ರೆ ಇಲ್ಲಿ ಬಂದು ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲೇ ರಸ್ತೆ ಚೆನ್ನಾಗಿಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ..
ಕೊಡಗಿಗೆ ಮತ್ತೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ: ಬರಲಿ ನೋಡೋಣ ಎಂದು ಈಶ್ವರಪ್ಪ ಸವಾಲು!
ಕಾಂಗ್ರೆಸ್ ಅಭ್ಯರ್ಥಿ ಪ್ರಚಾರಕ್ಕೆ ಮತ್ತೇ ನರಗುಂದಕ್ಕೆ ಬರುತ್ತೀರಿ.. ಐದಾರು ಕಿಲೋ ಮೀಟರ್ ಹಾಳಾಗಿರುವ ರಸ್ತೆಯೂ ಆಗ ರಿಪೇರಿಯಾಗಿರುತ್ತೆ.. ರಸ್ತೆ ಚಿತ್ರಣವನ್ನ ನಿಮ್ಮ ಮುಂದೆ ಇಡ್ತೀವಿ.. ಆತ್ಮಸಾಕ್ಷಿ ಇದ್ರೆ PWD ಸಚಿವರು ಕೆಲಸ ಮಾಡಿದ್ದಾರೆ ಅಂತಾ ಹೇಳ್ಬೇಕು.
ಬೆಳಗಾವಿ ಅಧಿವೇಶನ ಸೇರಿ ಮೂರು ಅಧಿವೇಶನ ನಡೆದ್ವು. ಒಂದು ಅಧಿವೇಶನದಲ್ಲೂ 40 ಪರ್ಸೆಂಟ್ ಕಮಿಷನ್ ಆರೋಪದ ಬಗ್ಗೆ ಮಾತ್ನಾಡಲಿಲ್ಲ.. ಹೊರಗೆ ಬಂದು ಮಾಧ್ಯಮದ ಮುಂದೆ 40 ಪರ್ಸೆಂಟ್ ಅಂತಾ ಆರೋಪ ಮಾಡ್ತೀರಿ ಅಂತಾ ಸಿದ್ದರಾಮಯ್ಯ ಅವರನ್ನ ಮಾತಿನಲ್ಲೇ ಕುಟುಕಿದ್ರು
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನನ್ನ ಕೆಲಸದ ಬಗ್ಗೆ ಹೊಗಳಿದ್ರಿ..!
ಬೆಳಗಾವಿ ಅಧಿವೇಶನ(Belgavi assembly session) ಸಂದರ್ಭದಲ್ಲಿ ಟೀ ಕುಡಿಯೋದಕ್ಕೆ ಅಂತಾ ಹೊರಗಡೆ ಬಂದು ಕೂತಾಗ, ನನ್ನ ಭೇಟಿಯಾಗಿದ್ರಿ.. ಸುತ್ತ ನಿಂತಿದ್ದ ನಾಲ್ಕೈದು ಕಾಂಗ್ರೆಸ್ ಶಾಸಕರಿಗೆ ಸಿಸಿ ಪಾಟೀಲ ಉತ್ತಮ ಕೆಲಸ ಮಾಡುವ ಸಚಿವ ಅಂತಾ ಹೇಳಿದ್ರಿ. ಹೇಳಿದ್ರೋ ಇಲ್ಲೋ ಅಂತಾ ಚಾಮುಂಡಿ ತಾಯಿ ಆಣೆ ಮಾಡಿ ಹೇಳಿ ಅಂತಾ ಸವಾಲು ಹಾಕಿದ್ರು.. ಒಳ್ಳೆಯ ಕೆಲಸ ಮಾಡುವ ಸಚಿವ ಅಂತಾ ನಿಮ್ಮ ಶಾಸಕರ ಎದುರಿಗೆ ಹೇಳಿದ್ರಿ.. ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸಿಸಿ ಪಾಟೀಲ ಉತ್ತಮ ಕೆಲಸ ಮಾಡಿದ್ದಾನೆ ಅಂತಾ ಹೇಳಿದ್ರೋ ಇಲ್ವೋ ಅಂತಾ ಚಾಮುಂಡಿ ತಾಯಿ ಆಣೆ ಮಾಡಿ ಹೇಳಿ ನೀವು ಅಂತಾ ಸಿದ್ದರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದ್ರು..
ಮಾಜಿ ಶಾಸಕ ಬಿಆರ್ ಯಾವಗಲ್ ಅವರ ಅಣತಿಯಂತೆ ನೀವು ಮಾತ್ನಾಡಿದ್ದೀರಿ ಅಂತಾ ಆರೋಪಿಸಿದ ಸಚಿವರು, ಸಿಸಿ ಪಾಟೀಲರನ್ನ ಬಯ್ಯದೆ ಹೋದ್ರೆ ವೋಟ್ ಬರಲ್ಲ ಅಂತಾ ಅವ್ರು ಹೇಳಿರುತ್ತಾರೆ. ಯಾವಗಲ್ ಅವರ ಮಾತು ಕೇಳಿ, ಸ್ಟೇಜ್ ಮೇಲೆ ಬಂದ್ಕೂಡ್ಲೆ ಸಿಸಿ ಪಾಟೀಲ ಹಾಗೇ ಹೀಗೆ ಅಂತಾ ಸಿದ್ದರಾಮಯ್ಯ ಮಾತ್ನಾಡಿದ್ದಾರೆ ಅಂತಾ ಸಿಸಿ ಪಾಟೀಲ ಹೇಳಿದ್ರು.
ಪದೇಪದೆ ರಾಜ್ಯಕ್ಕೆ ಭೇಟಿ ನೀಡುವ ಮೋದಿದು ಚುನಾವಣೆ ಗಿಮಿಕ್: ಒಂದುಸಲವೂ ಜನರ ಸಮಸ್ಯೆ ಕೇಳಲಿಲ್ಲ
ಬೊಮ್ಮಾಯಿ ಅವರ ಆಶೀರ್ವಾದದಿಂದ ಮತ ಕ್ಷೇತ್ರ ಅಭಿವೃದ್ಧಿಯಾಗಿದೆ.. ಮಾಜಿ ಸಚಿವ ಯಾವಗಲ್, ಕ್ಷೇತ್ರದಲ್ಲಿ ಗುಣಮಟ್ಟದ ಕೆಲಸ ಆಗಿಲ್ಲ ಅಂತಾ ಟೀಕಿಸಿದ್ದಾರೆ.. ಮಾಧ್ಯಮದವರನ್ನ ಕರೆದುಕೊಂಡು ಹೋಗಿ ಕಳಪೆಗುಣಮಟ್ಟದ ಕೆಲಸ ತೋರಿಸಿ, ಆಗಿಲ್ಲ ಅಂದ್ರೆ ಸರಿ ಪಡೆಸುತ್ತೇವೆ. ಕಾಲಿಪೀಲಿ ರಾಜಕಾರಣಕ್ಕಾಗಿ ಟೀಕಿಸೋದಲ್ಲ ಎಂದ್ರು. ಈ ಚುನಾವಣೆಯನ್ನೂ ನಾವು ನೀವು ಎದುರಿಸೋಣ.. ಟಿಕೆಟ್ ನಿಮಗೇ ಸಿಗಲಿ ಅಂತಾ ಆಶಿಸುತ್ತೇನೆ. ಅಭಿವೃದ್ಧಿ ಪರವಾಗಿ ಜನ ಇದ್ದಾರೋ ಇಲ್ಲವೋ ಅಂತಾ ತೀರ್ಮಾನವಾಗ್ಲಿ ಅಂತಾ ಹೇಳಿದ್ರು..