ಕಾಂಗ್ರೆಸ್‌ ನೀಡಿದ್ದ ಅನುದಾನ ಇಳಿಸಿದ್ದು ಎಚ್‌ಡಿಕೆ: ಜಮೀರ್‌ ಅಹಮದ್‌ ಖಾನ್‌

By Kannadaprabha NewsFirst Published Apr 29, 2023, 8:22 PM IST
Highlights

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3150 ಕೋಟಿ ರು. ಅನುದಾನ ನೀಡಿ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದ್ದರು. ಆದರೆ ಈ ಅನುದಾನ ಇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಆರೋಪಿಸಿದರು. 

ಮಧುಗಿರಿ (ಏ.29): ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ 3150 ಕೋಟಿ ರು. ಅನುದಾನ ನೀಡಿ ಸಮುದಾಯಗಳ ಅಭಿವೃದ್ಧಿಗೆ ಪೂರಕವಾಗಿದ್ದರು. ಆದರೆ ಈ ಅನುದಾನ ಇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಕಾರಣ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಆರೋಪಿಸಿದರು. ಇಲ್ಲಿನ ದಂಡೂರುಬಾಗಿಲು ಸಮೀಪ ಗುರುವಾರ ಸಂಜೆ ಏರ್ಪಟಾಗಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಅಲ್ಪಸಂಕ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ 400 ಕೋಟ ರು. ಇದ್ದ ಅನುದಾನವನ್ನು 3150 ಕೋಟಿಗೆ ಹೆಚ್ಚಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಈ ನಿಮ್ಮ ಮನೆ ಮಗ ಜಮೀರ್‌ ಮೇಲೆ ನಂಬಿಕೆ ಇಟ್ಟು 4 ಖಾತೆ ನೀಡಿತ್ತು. ಆದರೆ ಕುಮಾರಸ್ವಾಮಿ ಅಧಿಕಾರ ಹಿಡಿದಾಗ ಹಜ್‌ಮತು ವಕ್‌್ಪ ಸಚಿವರನ್ನಾಗಿ ಮಾಡಿದರು. ಕಳೆದ ಚುನಾವಣೆಯಲ್ಲಿ 38 ಸ್ಥಾನ ಗಳಿಸಿದ್ದ ಜೆಡಿಎಸ್‌ ಪಕ್ಷದಿಂದ ಸಿಎಂ ಆಗಿದ್ದ ಕುಮಾರಸ್ವಾಮಿ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ 3150 ಕೋಟಿ ರು. ಅನುದಾನವನ್ನು 1800 ಕೋಟಿಗೆ ಇಳಿಸಿದರು. ನಂತರ ಅಧಿಕಾರ ಹಿಡಿದ ಬೆಜಿಪಿಯವರು 1000 ಕೋಟಿ ರು.ಗೆ ಇಳಿಸಲು ಇದೇ ಕುಮಾರಸ್ವಾಮಿ ಕಾರಣ. ಇವರಿಗೆ ನಾವು ಮತ ಕೊಡಬೇಕೆ? ಬೇಂಗಳೂರಲ್ಲಿದ್ದರೂ ಹಜ್‌ ಕಾರ್ಯಕ್ರಮಕ್ಕೆ ಬರಲಿಲ್ಲ. ಇಬ್ರಾಹಿಂಗೆ ಹಲವು ಹುದ್ದೆ ನೀಡಿ ಗೌರವಿಸಿದ್ದು ಕಾಂಗ್ರೆಸ್‌ ಎಂದರು.

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ: ಜಮೀರ್‌ ಅಹಮದ್‌ ಖಾನ್‌

ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಮಾತನಾಡಿ, ದೇಶದ ಪಿತಾಮಹ ಗಾಂಧಿ ಕೊಂದಿದ್ದು ಯಾರು? ನಾವುಗಳು ಗಾಂಧಿ ಹಿಂದೂತ್ವ ವಾದ ಪ್ರತಿಪಾದಕರು. ಬಿಜೆಪಿಯವರು ಗೂಡ್ಸೆ ಹಿಂದುತ್ವವಾದ ಪರಿಪಾಲಕರು. ಈ ದೇಶಕ್ಕೆ ಇವರು ಮಾರಕ. ಜನರ ಭಾವನೆ ಕೆರಳಿಸುವ ಸರ್ಕಾರ ಬೇಕೆ? ಗುಜರಾತ್‌ ರಾಜ್ಯಕ್ಕೆ ಪ್ರವೇಶಿಸದಂತೆ ನ್ಯಾಯಲಯ ಸೂಚಿಸಿದ ವ್ಯಕ್ತಿ ಇಂದು ಕೇಂದ್ರದ ಗೃಹ ಸಚಿವ. ಬಿಜೆಪಿ ಪಕ್ಷ ಸಂಘಟಿತರಾಗಲು ಜೆಡಿಎಸ್‌ ಪಕ್ಷವೇ ಮೂಲ ಕಾರಣ. ಆ ಪಕ್ಷಕ್ಕೆ ಬಿ ಟೀಂ ಆಗಿದೆ ಎಂದು ದೂರಿದರು.

ಕಾರ್ಯಕ್ರಮದಲ್ಲಿ ನಿಖಿತ್‌ ಮೌರ್ಯ, ವಿಧಾನ ಪರಿಷತ್‌ ಸದಸ್ಯ ಆರ್‌.ರಾಜೇಂದ್ರ, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎನ್‌.ಗಂಗಣ್ಣ, ಶೌಕತ್‌, ಅಯೂಬ್‌, ಜಿ.ಪಂ.ಮಾಜಿ ಸದಸ್ಯ ಚೌಡಪ್ಪ, ಪುರಸಭೆ ಸದಸ್ಯೆ ನಸೀಮಾ ಭಾನು, ಶಾಹೀನಾ ಕೌಸರ್‌, ರಾಜ್ಯ ವಕ್ಫ್ ಬೋರ್ಡ್‌ ನಿರ್ದೇಶಕ ಅನವರ್‌ಭಾಷ, ಗ್ರಾಮ ಪಂಚಾಯತ್‌ ಸದಸ್ಯೆ ರಿಯಾ ಬಾನು, ಆಡಿಟರ್‌ ಸುಲ್ತಾನ್‌, ಸಿಕಂದರ್‌, ಬಾಬು ಫಕ್ರುದ್ದೀನ್‌, ಮುಸಲ್ಮಾನ ಬಂಧುಗಳು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ನನ್ನನ್ನು ಸೋಲಿ​ಸಲು ಕಾಂಗ್ರೆಸ್‌-ಬಿಜೆಪಿ ಷಡ್ಯಂತ್ರ: ನಿಖಿಲ್‌ ಕುಮಾ​ರ​ಸ್ವಾಮಿ

ಜೆಡಿಎಸ್‌ಗೆ ಹೋದ ಇಬ್ರಾಹಿಂಗೆ ಎಂಎಲ್‌ಸಿ ಮಾಡಲಿಲ್ಲ. 50ಲಕ್ಷ ರು. ಹಣ ಪಡೆದು ಶರವಣನನ್ನು ಎಂಎಲ್‌ಸಿ ಮಾಡಿದ್ದು ಇದೇ ಎಚ್‌.ಡಿ ಕುಮಾರಸ್ವಾಮಿ. ಆದ್ದರಿಂದ ಬಡವರ ಪರವಾಗಿ ಕೆಲಸ ಮಾಡುವ ಕಾಂಗ್ರೆಸ್‌ ಪಕ್ಷ ಬೆಂಬಲಿಸಿ. ಜೆಡಿಎಸ್‌ಗೆ ಮತ ನೀಡಿದರೆ ಪರೋಕ್ಷವಾಗಿ ಬಿಜೆಪಿ ಗೆಲ್ಲಿಸಿದಂತೆ.
-ಜಮೀರ್‌ ಖಾನ್‌, ಮಾಜಿ ಸಚಿವ

click me!