Udupi: ಥೀಮ್‌ ಪಾರ್ಕ್, ಫುಡ್‌ ಝೋನ್‌, ಮತ್ಸ್ಯ ಕ್ಯಾಂಟೀನ್‌: ಪ್ರಣಾಳಿಕೆ ಬಿಡುಗಡೆ ಮಾಡಿದ ಯಶ್ಪಾಲ್

By Govindaraj S  |  First Published May 4, 2023, 1:20 PM IST

ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ-2023ರ ಬಿಡುಗಡೆ ಕಾರ್ಯಕ್ರಮ ಶಾಸಕರಾದ ಕೆ. ರಘುಪತಿ ಭಟ್ ರವರು ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಬಿಡುಗಡೆ ಮಾಡಿದರು. ಪ್ರಣಾಳಿಕೆಯ ಕುರಿತು ಮಾಹಿತಿ ನೀಡಿದ ಉಡುಪಿ ಕ್ಷೇತ್ರದ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿದರು.


ಉಡುಪಿ (ಮೇ.04): ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ-2023ರ ಬಿಡುಗಡೆ ಕಾರ್ಯಕ್ರಮ ಶಾಸಕರಾದ ಕೆ. ರಘುಪತಿ ಭಟ್ ರವರು ಜಿಲ್ಲಾ ಮಾಧ್ಯಮ ಕೇಂದ್ರದಲ್ಲಿ ಬಿಡುಗಡೆ ಮಾಡಿದರು. ಪ್ರಣಾಳಿಕೆಯ ಕುರಿತು ಮಾಹಿತಿ ನೀಡಿದ ಉಡುಪಿ ಕ್ಷೇತ್ರದ ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿಗೊಂದು ಸುಸಜ್ಜಿತ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಉಡುಪಿ ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ, ಕಲ್ಪಂಕ ಜಂಕ್ಷನ್ ನಲ್ಲಿ 70 ಮೀಟರ್ ವ್ಯಾಸವುಳ್ಳ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ.ಈಗಾಗಲೇ ಪ್ರಾರಂಭವಾದ 13 ಜಂಕ್ಷನ್ ನಲ್ಲಿ ಸ್ಟಾರ್ಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ ಎಂದರು.

ಉಡುಪಿ ನಗರದ ಹಳೆಯ ಒಳಚರಂಡಿ ವ್ಯವಸ್ಥೆಯ ಪುನನಿರ್ಮಾಣ, ನೂತನ STP ಹಾಗೂ ಚೆಂಬರ್ಗಳ ಒಟ್ಟಿಗೆ ಉಡುಪಿ ನಗರದ 35 ವಾರ್ಡ್ನಲ್ಲಿ ವೈಜ್ಞಾನಿಕ ರೀತಿಯಲ್ಲಿ ಒಳ ಚರಂಡಿ ವ್ಯವಸ್ಥೆ, ಬ್ರಹ್ಮಾವರದಲ್ಲಿ 100 ಬೆಡ್ಗಳ ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಾಣ, ಬ್ರಹ್ಮಾವರದ ವಾರಂಬಳ್ಳಿ ಈಗಾಗಲೇ ಮೀಸಲಿಟ್ಟ 5 ಎಕರೆ ಜಾಗದಲ್ಲಿ ಈಗಾಗಲೇ ಮಂಜೂರಾತಿ ಪಡೆದ ESI ಆಸ್ಪತ್ರೆ ನಿರ್ಮಾಣ, ಬ್ರಹ್ಮಾವರ ಪುರಸಭೆ ರಚನೆ, ಬ್ರಹ್ಮಾವರದಲ್ಲಿ ಕೃಷಿ ಕಾಲೇಜ್ ಸ್ಥಾಪನೆ, ಮಲ್ಪೆ ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

Tap to resize

Latest Videos

undefined

ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ

ಬ್ರಹ್ಮಾವರದಿಂದ ಹೆಬ್ರಿಗೆ ಹೋಗುವ ಚತುಷ್ಪಥ ರಸ್ತೆ ನಿರ್ಮಾಣ ಕರ್ಜೆ ತನಕ ಆಗಿದ್ದು ಅದನ್ನು ಹೆಬ್ರಿ ತನಕ ವಿಸ್ತರಿಸುವುದು, ಮಲ್ಪೆಯಲ್ಲಿ ಮಧ್ವಾಚಾರ್ಯ ಥೀಮ್ ಪಾರ್ಕ್ ನಿರ್ಮಾಣ, ಮಣಿಪಾಲದಲ್ಲಿ ವಿಶೇಷ ಆಹಾರ ವಲಯ ನಿರ್ಮಾಣ, ಮಣಿಪಾಲದ ಮಣ್ಣಪಳ್ಳದಲ್ಲಿ ಉದ್ಯಾನವನ ನಿರ್ಮಾಣ, ಅಮೃತ್ ಸಿಟಿ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ಉಡುಪಿ ಡಿಜಿಟಲ್ ಇನ್ಫ್ರಾಸ್ಟಕ್ಟರ್ ಡೆವಲಪ್ಮೆಂಟ್ (1 Deck)ಖಾಸಗಿ ವಲಯದ ಸಹಕಾರದೊಂದಿಗೆ ಅನುಷ್ಠಾನಗೊಳಿಸುವುದು, ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಕೈಗಾರಿಕಾ ವಲಯ ನಿರ್ಮಾಣ – ಇದರಿಂದ ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಮಾಡಿ ಕೊಡುವುದು.

ಆತ್ಮನಿರ್ಬರ ಯೋಜನೆಯಡಿಯಲ್ಲಿ ಯುವಕರಿಗೆ ಉದ್ಯೋಗ ಖಾತ್ರಿ, ಕರಾವಳಿಗೆ ವಿಶೇಷ ಅನುದಾನ ನೀಡಿ ಪ್ರವಾಸೋದ್ಯಮ ಬೆಳೆಸಿ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ, ಉಡುಪಿ ನಗರಸಭೆಗೆ ನೂತನ ಕಟ್ಟಡ ಸರಕಾರ ಉಚಿತವಾಗಿ ನೀಡಿರುವ ಹಳೆ ತಾಲೂಕು ಆಫೀಸ್ ಇದ್ದ0.96 ಎಕ್ರೆ ಜಾಗದಲ್ಲಿ 45ಕೋಟಿ ವೆಚ್ಚದಲ್ಲಿ ನಿರ್ಮಾಣ ಈಗಾಗಲೇ ಪಾರಂಪರಿಕ ಕ್ಷೇತ್ರಗಳ ಕಾರಿಡಾರ್ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಅಂತರ್ಜಲ ವೃದ್ಧಿಗೆ ಸೂಕ್ತ ಕ್ರಮ. ನದಿ ದಂಡೆಗಳ ಸಂರಕ್ಷಣೆ, ಉಡುಪಿಯಲ್ಲಿ ಸ್ವ-ಸಹಾಯ ಸಂಘಗಳ ಕೇಂದ್ರ ಸ್ಥಾಪನೆ, ಉಡುಪಿ ಮತ್ತು ಬ್ರಹ್ಮಾವರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣಗಳ ನಿರ್ಮಾಣ ಹಾಗೂ ಕ್ರಿಕೆಟ್ ಅಕಾಡೆಮಿ ಸ್ಥಾಪನೆ ಮಾಡಲಾಗುವುದು ಎಂದರು.

ವಿಶ್ವ ಪ್ರಸಿದ್ಧ ಉಡುಪಿ ಕೈಮಗ್ಗ ಸೀರೆ ನೇಕಾರಿಕೆಯನ್ನು ಪುನರುಜ್ಜಿವನ ಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ನೇಕಾರ ಯುವಕ ಯುವತಿಯರಿಗೆ ಈ ವೃತ್ತಿಗೆ ಸರಕಾರದಿಂದ ದೊರಕುವ ಸೌಲಭ್ಯತೆಗಳನ್ನು ಒದಗಿಸಿ ಕೊಡುವುದು. ಮಾಹಿತಿ ತಂತ್ರಜ್ಞಾನದ ಉದ್ಯಮದ ಮೂಲಕ ವಿದ್ಯಾವಂತ ಯುವಕ/ ಯುವತಿಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಐ.ಟಿ ಪಾರ್ಕ್ ಮತ್ತು ಜವಳಿಪಾರ್ಕ್ ನಿರ್ಮಾಣ ಮಾಡುವುದು. ಧಾರ್ಮಿಕ ಕ್ಷೇತ್ರಗಳ ಮತ್ತು ಬೀಚ್ ಸಂಪರ್ಕ ಕಾರಿಡಾರ್ ಅಭಿವೃದ್ಧಿಗೊಳಿಸುವುದು, ಉಡುಪಿ ನಗರ ಭಾಗದ ದಾರಿದೀಪಗಳನ್ನು ಸಂಪೂರ್ಣವಾಗಿ (20000) LEDಕರಣ ಗೊಳಿಸುವುದು ಮತ್ತು ಸ್ಮಾರ್ಟ್ ಸ್ಟೀಟ್ ಮಾದರಿಯಲ್ಲಿ ದಾರಿದೀಪದ ನಿರ್ವಹಣಾ ವ್ಯವಸ್ಥೆ, ಉಡುಪಿ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ಸುಸಜ್ಜಿತ ಬಯಲು ರಂಗ ಮಂದಿರ ನಿರ್ಮಾಣ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎಸ್ ಸಿ ಮತ್ತು ಎಸ್ ಟಿ ವರ್ಗಗಳಿಗೆ ವಾರ್ಷಿಕ ಒಂದು ಲಕ್ಷದ ಅರೋಗ್ಯ ವಿಮಾ ಯೋಜನೆ ಈಗಾಗಲೇ ಜಾರಿಯಲ್ಲಿದ್ದು ಮುಂದಿನ ಅವಧಿಯಲ್ಲಿಯೂ ಅದನ್ನು ವಿಸ್ತರಿಸಲಾಗುವುದು ಎಂದರು.

ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಅಗಲೀಕರಿಸಿ ಅಭಿವೃದ್ಧಿಪಡಿಸುವುದು, ಕುಡಿಯುವ ನೀರಿನ ಸರಬರಾಜು ನಿರ್ವಹಣೆಗೆ ವಿಶೇಷ ಆದ್ಯತೆ, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ದ 10 ಸರಕಾರಿ ಶಾಲೆಗಳನ್ನು ಗುರುತಿಸಿ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದು ಮತ್ತು ಶಾಲಾ ಸಂಪನ್ಮೂಲಗಳ ಸಮರ್ಪಕ ಬಳಕೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜಂಟಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಹಾಕಿ ಕೊಳ್ಳುವುದು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನ ಗೊಳಿಸುವುದು (ಫರ್ನಿಚರ್ ಹಬ್). ಕ್ಷೇತ್ರದಲ್ಲಿ ಸಹಕಾರಿ ಸೌಧ ನಿರ್ಮಾಣ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಹಕಾರಿ ತರಬೇತಿ ಕೇಂದ್ರ ಸ್ಥಾಪನೆ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ನಿರ್ಮಾಣ. ಶಬರಿಮಲೆಯಲ್ಲಿ ಕರ್ನಾಟಕ ಭವನ ನಿರ್ಮಾಣ, ಶಬರಿಮಲೆ ಯಾತ್ರಿಗಳಿಗೆ ಉಡುಪಿಯಿಂದ ವಿಶೇಷ ರೈಲು ಸಂಚಾರಕ್ಕೆ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮೂಲಕ ಕೊಡವೂರು, ಸುಬ್ರಹ್ಮಣ್ಯ ನಗರ ಮತ್ತು ಪರ್ಕಳದ ಸಣ್ಣಕ್ಕಿ ಬೆಟ್ಟುವಿನಲ್ಲಿ ಲಭ್ಯವಿರುವ ಸರಕಾರಿ ನಿವೇಶನಗಳಲ್ಲಿ 400 ಮನೆಗಳ ನಿರ್ಮಾಣ, ಕ್ಷೇತ್ರದ ವಿವಿಧ ಭಾಗಗಳಲ್ಲಿ ತಾಜಾ ಮೀನಿನ ಊಟದ ಮತ್ಸ ಕ್ಯಾಂಟೀನ್ ವಿಶೇಷ ವಾಗಿ ಶಾಲಾ/ ಕಾಲೇಜಿನ ವಿದ್ಯಾರ್ಥಿಗಳು/ ಕೂಲಿ ಕಾರ್ಮಿಕ ರಿಗೆ ವಿಶೇಷ ದರದಲ್ಲಿ ಊಟ ನೀಡುವುದು, ಉಡುಪಿಯಲ್ಲಿ ಪೌಷ್ಠಿಕಾಂಶ ಆರೋಗ್ಯ ಕೇಂದ್ರ ಸ್ಥಾಪನೆ, ಸರಕಾರಿ ಬಸ್ ಗಳಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಡಿಮ್ಸ್ ಫಾರೆಸ್ಟ್ ನಿರ್ಭಂಧ ಸಡಿಲಗೊಳಿಸಿ ಎರಹಿತ ಜಾಗದಲ್ಲಿ 94% ಅರ್ಜಿಯನ್ನು ಶಾಸಕರಾದ ಅಕ್ರಮ-ಸಕ್ರಮಗೊಳಿಸಲಾಗುವುದು. 3ತಿಂಗಳೊಳಗೆ ವಾರಾಹಿ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ಸೀತಾನದಿಗೆ ನಿರಂತರವಾಗಿ ನೀರು ಹಾಯಿಸಿ ಜೀವ ತುಂಬುವುದು. ಹಿಂದಿನ ಬಾರಿಯ ಪ್ರಣಾಳಿಕೆಯಲ್ಲಿ ಎಲ್ಲಾ ಭರವಸೆಗಳನ್ನು 90 ಪ್ರತಿಷತಃ ಈಡೇರಿಸಿದ್ದೇವೆ. ಪೂರ್ಣಗೊಳದ ಯೋಜನೆಗಳನ್ನು ಈ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪೌಢ ಮತ್ತು ಕಾಲೇಜುಗಳಲ್ಲಿ ಹಿಂದುಳಿದ ವರ್ಗ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ವಸತಿಗೃಹಗಳ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.

ಮೀನುಗಾರಿಕಾ ಸಮುದಾಯಕ್ಕೆ ಪ್ರತ್ಯೇಕ ಪ್ರಣಾಳಿಕೆ: ಮೀನುಗಾರಿಕಾ ಸಮುದಾಯಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ದಪಡಿಸಿದ್ದು ಅದರಂತೆ ಡೆಲಿವರಿ ಪಾಯಿಂಟ್ ನಲ್ಲಿ ಕರರಹಿತ ಡೀಸೆಲ್ ನೀಡುವುದು ಮೀನುಗಾರರ ಪ್ರಮುಖ ಬೇಡಿಕೆ ಆಗಿತ್ತು. 2019 ಜುಲೈ ತಿಂಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶಾಸಕ ರಘುಪತಿ ಭಟ್ ಅವರು ಮೀನುಗಾರರ ನಿಯೋಗ ದೊಂದಿಗೆ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬೇಡಿಕೆಯ ಅವಶ್ಯಕತೆಯನ್ನು ಮನವರಿಕೆ ಮಾಡಿದಾಗ ಮನವಿಯನ್ನು ಪುರಸ್ಕರಿಸಿದ ಮುಖ್ಯಮಂತ್ರಿಗಳು ಡೆಲಿವರಿ ಪಾಯಿಂಟ್ ನಲ್ಲಿ ಕರ ರಹಿತ ಡೀಸೆಲ್ ನೀಡಲು ಆದೇಶಿಸಿದರು. ಇದೊಂದು ಇತಿಹಾಸಿಕ ನಿರ್ಣಯ ಆಗಿತ್ತು, 2013 ರಲ್ಲಿ ಇದ್ದ ಒಂದೂವರೆ ಲಕ್ಷ ಕಿಲೋ ಲೀಟರ್ ಡೀಸೆಲ್ ಅನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಏನು ಹೆಚ್ಚು ಮಾಡಿರಲಿಲ್ಲ, ಕಳೆದ ಸಾಲಿನ ಬಜೆಟ್ನಲ್ಲಿ ಬಿಜೆಪಿ ನೇತೃತ್ವದ ಬೊಮ್ಮಾಯಿ ಸರಕಾರ 2 ಲಕ್ಷ ಕಿಲೋ ಲೀಟರ್ಗೆ ಹೆಚ್ಚಿಸುವ ಮೂಲಕ ಮೀನುಗಾರರಿಗೆ ಹೆಚ್ಚಿನ ಸಹಾಯ ರಘುಪತಿ ಭಟ್ ಮೂಲಕ ಆಗಿದೆ

ಬಂದರಿನ ಸ್ವಚ್ಛತೆಯ ದೃಷ್ಟಿಯಿಂದ ಸಮರ್ಪಕ ಚರಂಡಿ ವ್ಯವಸ್ಥೆ, ಬಂದರಿನಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಮೀನುಗಾರರ ಸಂಘಕ್ಕೆ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಕ್ಕಾಗಿ ಸ್ಥಳಾವಕಾಶ ಮಾಡಿಕೊಡುವುದು (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದು, ಮೀನುಗಾರಿಕಾ ಯಾಂತ್ರಿಕ ಬೋಟುಗಳಿಗೆ ದಿನಕ್ಕೆ 400 ಲೀಟರ್ ಡೀಸೆಲ್ ಸಬ್ಸಿಡಿ ಮತ್ತು ಮಾಸಿಕ ಡೀಸೆಲ್ ಕೋಟವನ್ನು ವಾರ್ಷಿಕ ಡೀಸೆಲ್ ಕೋಟವಾಗಿ ಪರಿವರ್ತನೆ, ನಾಡ ದೋಣಿ ಮೀನುಗಾರರಿಗೆ ನಿರಂತರವಾಗಿ ತಿಂಗಳಿಗೆ 500 ಲೀಟರ್ ಸೀಮೆ ಎಣ್ಣೆ ವರ್ಷದ ಹನ್ನೆರಡು ತಿಂಗಳು ನೀಡುವುದು, ಕೃಷಿ ಕ್ಷೇತ್ರಕ್ಕೆ ಇರುವ ಸೌಲಭ್ಯವನ್ನು ಮೀನುಗಾರಿಕಾ ಕ್ಷೇತ್ರಕ್ಕೆ ವಿಸ್ತರಣೆ ನಾಡ ದೋಣಿ ಮೀನುಗಾರರ ದೋಣಿಗಳು ತಂಗುದಾಣಕ್ಕೆ 3ನೇ ಹಂತದ ಬಳಿ ಜಟ್ಟಿ ನಿರ್ಮಾಣ, ಅಂತರಾಷ್ಟ್ರೀಯ ಮಟ್ಟದ ಫಿಶ್ ಅಕ್ಟೇರಿಯಂ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಎಂದರು.

ಒಣ ಮೀನುಗಾರಿಕೆ ಮಾಡುವ ಮಹಿಳಾ ಮೀನುಗಾರರಿಗೆ ಅವರು ಈಗಾಗಲೇ ಉಪಯೋಗಿಸುತ್ತಿರುವ ಜಾಗವನ್ನು 30 ವರ್ಷ ದೀರ್ಘ ಗುತ್ತಿಗೆ ವಿಸ್ತರಣೆ, ಮೀನುಗಾರಿಕೆ ಬಂದರು ಇದರ ಸಚಿತ ನಿರ್ವಹಣೆ ಮತ್ತು ಪ್ರವೇಶ ಶುಲ್ಕವನ್ನು ಮೀನುಗಾರರ ಸಂಘಕ್ಕೆ ಬಿಟ್ಟು ಕೊಡುವುದು ಹಳೆಯ ಟೆಂಡರ್ ಮಾದರಿಯನ್ನು ರದ್ದುಗೊಳಿಸುವುದು ಮಲ್ಪೆಯಲ್ಲಿ ಇರುವ ಉಡುಪಿ ಕೊಚ್ಚಿನ್ ಶಿಪ್ಯಾರ್ಡ್(ಟೆಬ್ಮಾ ವಿಚಾರದಲ್ಲಿ ಮೀನುಗಾರರ ಸಂಘಗಳ ನಿರ್ಣಯಕ್ಕೆ ಬದ್ಧರಾಗಿ ಇರುವುದು ಮೀನುಗಾರ ಮಹಿಳೆಯರಿಗೆ 0% ಬಡ್ಡಿ ಯಲ್ಲಿ 5 ಲಕ್ಷದಿಂದ 20 ಲಕ್ಷದವರೆಗೆ ಗುಂಪು ಸಾಲ ನೀಡುವುದು ಮೀನುಗಾರರಿಗೆ ಮತ್ಸಾಶ್ರಯ ಮನೆ ನಿರ್ಮಾಣಕ್ಕೆ ಸಹಾಯದನ 1.2ಲಕ್ಷದಿಂದ 5ಲಕ್ಷಕ್ಕೆ ಏರಿಕೆ ಮಹಿಳಾ ಮೀನುಗಾರರಿಗೆ ಮತ್ತ್ವವಾಹಿನಿ ವಾಹನ ಸೌಲಭ್ಯ, ವಿಶೇಷ ಯೋಜನೆಗಳಡಿಯಲ್ಲಿ ಮೀನುಮಾರುಕಟ್ಟೆಗಳ ಅಭಿವೃದ್ಧಿ, ಮೀನುಗಾರ ಸಹಕಾರ ಸಂಘಗಳಿಗೆ ವಿಶೇಷ ಪ್ರೋತ್ಸಾಹಧನ, ಮಲ್ಪೆಯಿಂದ ಬೇಂಗ್ರೆಯ ವರೆಗೆ ನದಿದಂಡೆ ಯೋಜನೆ ಹಾಗೂ ಹಂಗಾರುಕಟ್ಟೆ ಬಂದರು ಅಭಿವೃದ್ಧಿ, ಬ್ರೇಕ್ ವಾಟರ್ ನಿರ್ಮಾಣ, ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ತುರ್ತು ಸೀ-ಆ್ಯಂಬುಲೆನ್ಸ್ ಸೇವೆ, ಮೇಕ್ ಇನ್ ಇಂಡಿಯಾ ಯೋಜನೆಯಡಿ ನಾಡದೋಣಿಗಳಿಗೆ OBM Engine ಖರೀದಿಗೆ ಸಹಾಯಧನ ನೀಡುವುದು, ಸಂಘಟಿತ ಮೀನುಗಾರ ಕಾರ್ಮಿಕರಿಗೆ ಕೇಂದ್ರ ಬಂದರಿನಲ್ಲಿ ತೆರೆಯುವುದು. ಆರೋಗ್ಯ, ಬಂದರಿನಲ್ಲಿ ಮಹಿಳಾ ಮೀನುಗಾರರಿಗೆ ವಿಶ್ರಾಂತಿ ಕೊಠಡಿ ನಿರ್ಮಾಣ ಸೇರಿದೆ ಎಂದರು.

ಕಾಂಗ್ರೆಸ್ ಪಕ್ಷ ಎಸ್‌ಡಿಪಿಐ-ಪಿಎಫ್ಐ ಕಪಿಮುಷ್ಟಿಯಲ್ಲಿದೆ: ಸಿಎಂ ಬೊಮ್ಮಾಯಿ

ಮೀನುಗಾರಿಕಾ ವಿಶೇಷ ಕೈಗಾರಿಕಾ ವಲಯ ನಿರ್ಮಾಣ, ಮಲ್ಪೆ ಕಡಲ ತೀರದಲ್ಲಿ ಹಕ್ಕು ಪತ್ರಗಳನ್ನು ನೀಡಲು ಬಾಕಿ ಇರುವ ಮನೆಗಳನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡುವುದು, ಮೀನುಗಾರಿಕಾ ಸಂಸ್ಕರಣಾ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಗೊಳಿಸಲು ಮೀನುಗಾರಿಕಾ ಉತ್ಪನ್ನಗಳ ಘಟಕಗಳನ್ನು ನಿರ್ಮಾಣ ಮಾಡಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು, ಕ್ಷೇತ್ರದ ವಿವಿಧ ಭಾಗಗಳಲ್ಲಿ ತಾಜಾ ಮೀನಿನ ಊಟದ Matsya Canteen ವಿಶೇಷ ವಾಗಿ ಶಾಲಾ/ಕಾಲೇಜಿನ ವಿದ್ಯಾರ್ಥಿಗಳು/ ಕೂಲಿ ಕಾರ್ಮಿಕರಿಗೆ ವಿಶೇಷ ದರದಲ್ಲಿ ಊಟ ನೀಡುವುದು, ಹಳೇ ಬೋಟ್ಗಳ ಮರು ನಿರ್ಮಾಣಕ್ಕೆ ಮತ್ಸ ಸಂಪದ ಯೋಜನೆಯಡಿಯಲ್ಲಿ ಸಹಾಯಧನ ನೀಡುವುದು, ಸಹಕಾರಿ ಸಂಘಗಳ ಸಹಭಾಗಿತ್ವದಲ್ಲಿ ಮಲ್ಪೆ ಬಂದರಿನಲ್ಲಿ ಡ್ರೆಜ್ಜಿಂಗ್ ಯಂತ್ರಗಳ ಖರೀದಿಗೆ ಸಹಾಯಧನ ನೀಡುವುದು ಸೇರಿದೆ ಎಂದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಜಿಲ್ಲಾ ಬಿಜೆಪಿ ವಕ್ತಾರರಾದ ರಾಘವೇಂದ್ರ ಕಿಣಿ, ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್. ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!