ಸಮಾಜವನ್ನು ಒಡೆಯುವ ಶಕ್ತಿಗಳಿಂದ ರಾಜ್ಯವನ್ನು ರಕ್ಷಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು. ರಾಜ್ಯದ ಸದೃಢ ಭವಿಷ್ಯಕ್ಕೆ ಕಾಂಗ್ರೆಸ್ ಆಶಾಕಿರಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ದೊಡ್ಡಬಳ್ಳಾಪುರ (ಮೇ.04): ಸಮಾಜವನ್ನು ಒಡೆಯುವ ಶಕ್ತಿಗಳಿಂದ ರಾಜ್ಯವನ್ನು ರಕ್ಷಿಸಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬೇಕು. ರಾಜ್ಯದ ಸದೃಢ ಭವಿಷ್ಯಕ್ಕೆ ಕಾಂಗ್ರೆಸ್ ಆಶಾಕಿರಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಟಿ.ವೆಂಕಟರಮಣಯ್ಯ ಪರ ಮತಯಾಚನೆ ರೋಡ್ ಶೋ ನಡೆಸಿದ ಅವರು, ಜಯಚಾಮರಾಜ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಕೆಲವರು ಜಿಲ್ಲಾ ಪಂಚಾಯತಿ ಸದಸ್ಯರಾದರೆ ಸಾಕು, ಅವರಿಗೆ ಕೋಡುಗಳು ಬಂದು ಬಿಡುತ್ತವೆ. ಜನರ ಕೈಗೆ ಸಿಗುವುದಿಲ್ಲ. ಆದರೆ, ವೆಂಕಟರಮಣಯ್ಯ ಎರಡು ಬಾರಿ ಶಾಸಕನಾದರೂ ಸದಾ ನಿಮ್ಮ ಜೊತೆಯಾಗಿ ಇದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿಯಂತೆ ನಿಮ್ಮ ಜೊತೆಗೆ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ನಮ್ಮ ಜೊತೆ ಕಿತ್ತಾಡಿ ಅನುದಾನ ಬಿಡುಗಡೆಗೆ ಶ್ರಮಿಸಿದ್ದಾರೆ. ನೀವು ನೀಡಿದ ಮತಕ್ಕೆ ತಕ್ಕಂತೆ ನಡೆದುಕೊಂಡಿರುವ ವ್ಯಕ್ತಿಯನ್ನು ಬೆಂಬಲಿಸಬೇಕಿದೆ ಎಂದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡುವ ಒಂದೊಂದು ಮತವೂ ತಮಗೆ, ಸಿದ್ದರಾಮಯ್ಯ ಅವರಿಗೆ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟಂತೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಆಭ್ಯರ್ಥಿಗೆ ಮತ ನೀಡುವ ಮೂಲಕ ಅತಿ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕು ಎಂದರು.
undefined
ಶಾಸಕ ಎಸ್.ಆರ್.ವಿಶ್ವನಾಥ್ ಒಬ್ಬ ರೌಡಿ: ಎಚ್.ಡಿ.ಕುಮಾರಸ್ವಾಮಿ
ಕಾಂಗ್ರೆಸ್ ಪಕ್ಷ ಕನಿಷ್ಠ 140 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ರಚನೆ ಮಾಡಲಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನತೆ ಜೂನ್ ತಿಂಗಳಿನಿಂದ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರು, ಮಹಿಳೆಯರಿಗೆ ಉಚಿತ ಬಸ್ ಸಂಚಾರ ವ್ಯವಸ್ಥೆ, ಯುವ ನಿಧಿ ಅಡಿಯಲ್ಲಿ ಪದವೀಧರರು, ಡಿಪೊ್ಲಮಾ ಮಾಡಿದವರಿಗೆ ಆರ್ಥಿಕ ನೆರವು, ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ, ಆಶಾ ಕಾರ‍್ಯಕರ್ತೆಯರ ಗೌರವಧನ ಹೆಚ್ಚಳ ಸೇರಿ ಪಕ್ಷ ಹಲವು ಯೋಜನೆಗಳನ್ನು ಜಾರಿಗೆ ತರಲಿದೆ ಎಂದರು.
ಮತ ಹಾಕಿಸಲು 5000+ ಬಸ್, ಮಿನಿಬಸ್ ಬುಕಿಂಗ್: ಮೇ 9ರಂದು ರಾಜ್ಯದಲ್ಲಿ ದುಪ್ಪಟ್ಟು ಬಸ್ ಸಂಚಾರ
ವಿಧಾನ ಪರಿಷತ್ ಸದಸ್ಯ ಎಸ್.ರವಿ, ಅಭ್ಯರ್ಥಿ ಟಿ. ವೆಂಕಟರಮಣಯ್ಯ, ಪಕ್ಷದ ಮುಖಂಡರಾದ ಭೈರೇಗೌಡ, ಜಿ.ಲಕ್ಷ್ಮೀಪತಿ, ಕೆ.ಪಿ.ಜಗನ್ನಾಥ್. ಬಿ.ಜಿ.ಹೇಮಂತರಾಜು, ವೆಂಕಟೇಶ್ ಅಪ್ಪಿ, ಅಂಜನಮೂರ್ತಿ, ಎಚ್.ಎಸ್.ಶಿವಶಂಕರ್, ಶಿವಣ್ಣ ಎಂ, ಶಿವರಾಜ್, ಸುಬ್ರಮಣಿ, ಶಿವು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.