ರಾಜ್ಯದಲ್ಲಿ ಅವಸಾನದತ್ತ ಕಾಂಗ್ರೆಸ್‌: ನಳಿನ್‌ ಕುಮಾರ್‌ ಕಟೀಲ್‌

By Kannadaprabha NewsFirst Published May 7, 2023, 12:51 PM IST
Highlights

ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್‌ ರಾಜ್ಯದಲ್ಲಿ ಅವಸಾನದತ್ತ ಹೋಗುತ್ತಿದೆÜ. ಅದು ಪುತ್ತೂರಿನಿಂದಲೇ ಆರಂಭವಾಗಲಿದೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಪುತ್ತೂರು (ಮೇ.7) : ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್‌ ರಾಜ್ಯದಲ್ಲಿ ಅವಸಾನದತ್ತ ಹೋಗುತ್ತಿದೆÜ. ಅದು ಪುತ್ತೂರಿನಿಂದಲೇ ಆರಂಭವಾಗಲಿದೆ ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಪುತ್ತೂರಿನಲ್ಲಿ ಶನಿವಾರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರೋಡ್‌ ಶೋ ಸಮಾರೋಪದಲ್ಲಿ ಮಾತನಾಡಿದ ಅವರು, ಅಯೋಧ್ಯೆ ರಾಮನ ನಾಡಿನಿಂದ ಹನುಮನ ನಾಡು ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿದ್ದಾರೆ. ಅವರ ಆಶೀರ್ವಾದ ಆಂಜನೇಯನ ಭಕ್ತರಿಗೆ ಸಿಗಲಿದೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಮಾರ್ಗದರ್ಶನ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪುತ್ತೂರಿನಿಂದ ಬಿಜೆಪಿ ವಿಜಯಯಾತ್ರೆ ಆರಂಭವಾಗಲಿದೆ. ಅದಕ್ಕಾಗಿ ಯುಪಿಯಲ್ಲಿ ಉಗ್ರರ ಹುಟ್ಟಡಗಿಸಿದ, ಬುಲ್ಡೋಜರ್‌ ಬಾಬಾ ಖ್ಯಾತಿಯ ಯೋಗಿಯನ್ನು ಕರೆಸಲಾಗಿದೆ. ನೆಟ್ಟಾರು ಹತ್ಯೆ ಬಳಿಕ ಪಿಎಫ್‌ಐ ನಿಷೇಧಿಸಿದ್ದು ಡಬ್ಬಲ್‌ ಎಂಜಿನ್‌ ಸರ್ಕಾರ. ಈ ಬಾರಿ ಕಾಂಗ್ರೆಸ್‌ ಮುಕ್ತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

Latest Videos

ಮಂಗಳೂರಲ್ಲಿ ನೀರಿನ ಸಮಸ್ಯೆಗೆ ಬಿಜೆಪಿ ಆಡಳಿತ ಕಾರಣ: ಕಾಂಗ್ರೆಸ್‌

ಶ್ರೀಮಹಾಲಿಂಗೇಶ್ವರನಿಗೆ ಆರತಿ ಬೆಳಗಿದ ಯೋಗಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ಇದೇ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದಲ್ಲಿ ಪ್ರದಕ್ಷಿಣೆ ಬಂದ ಬಳಿಕ ಶ್ರೀದೇವರ ದರ್ಶನ ಪಡೆದು ಗರ್ಭಗುಡಿ ಮುಂಭಾಗ ದೇವರಿಗೆ ಆರತಿ ಬೆಳಗಿದರು. ನಂತರ ಅವರಿಗೆ ಶ್ರೀದೇವರ ಪ್ರಸಾದ ನೀಡಲಾಯಿತು. ಬಳಿ ಯೋಗಿ ಅವರು ದೇವಳದ ಪ್ರಮುಖರೊಂದಿಗೆ ಫೋಟೋ ತೆಗೆಸಿಕೊಂಡರು. ಈ ವೇಳೆ ಶಾಸಕ ಸಂಜೀವ ಮಠಂದೂರು, ಅಭ್ಯರ್ಥಿ ಆಶಾ ತಿಮ್ಮಪ್ಪ, ಆರ್‌ಎಸ್‌ಎಸ್‌ ಮುಖಂಡ ಡಾ.ಪ್ರಭಾಕರ ಭಟ್‌ ಕಲ್ಲಡ್ಕ, ಮಂಡಲ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಖಂಡ ಚಂದ್ರಶೇಖರ ರಾವ್‌ ಬಪ್ಪಳಿಗೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌, ಸಮಿತಿ ಸದಸ್ಯರು, ದೇವಳದ ವಾಸ್ತು ಎಂಜಿನಿಯರ್‌ ಪಿ.ಜಿ.ಜಗನ್ನಿವಾಸ ರಾವ್‌ ಮತ್ತಿತರರಿದ್ದರು.

2 ಗಂಟೆ ವಿಳಂಬವಾಗಿ ಯೋಗಿ ಆಗಮನ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ರೋಡ್‌ ಶೋ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ 11 ಗಂಟೆಯಿಂದಲೇ ದೇವಾಲಯದ ಮುಂಭಾಗದ ದೇವರ ಮಾರು ಗದ್ದೆಯಲ್ಲಿ ಜನರು ಸೇರಿದ್ದರು. ನಿಗದಿಯಂತೆ ಮಧ್ಯಾಹ್ನ 12 ಗಂಟೆಗೆ ಯೋಗಿ ಅವರು ಆಗಮಿಸುವುದಾಗಿ ತಿಳಿಸಲಾಗಿತ್ತು. ಆದರೆ ಅವರು ಸುಮಾರು 2 ಗಂಟೆ ತಡವಾಗಿ ಆಗಮಿಸಿದರು. 11.45ಕ್ಕೆ ಮೊಟ್ಟೆತಡ್ಕ ಹೆಲಿಪ್ಯಾಡ್‌ಗೆ ಆಗಮಿಸುವ ಬದಲು ಮಧ್ಯಾಹ್ನ 1.45ಕ್ಕೆ ಆಗಮಿಸಿದರು. 2 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ, ಬಳಿಕ 2.20ಕ್ಕೆ ರೋಡ್‌ಶೋ ಆರಂಭಗೊಂಡಿತು. ಯೋಗಿಗಾಗಿ ಉರಿ ಬಿಸಿಲನ್ನೂ ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಕಾದಿದ್ದರು. ಯೋಗಿ ಬರುತ್ತಿದ್ದಂತೆ ಘೋಷಣೆ ಕೂಗಿದರು.

ರೋಡ್‌ ಶೋ ವಿಳಂಬ ಹಿನ್ನೆಲೆಯಲ್ಲಿ ಆಗಮಿಸಿದ ಕಾರ್ಯಕರ್ತರು ದೇವಳದ ಪ್ರಸಾದ ಭೋಜನ ಸ್ವೀಕರಿಸಿದರು.

ಕನ್ನಡದಲ್ಲೇ ಮಾತು ಆರಂಭಿಸಿದ ಯೋಗಿ...

ರೋಡ್‌ ಶೋ ಬಳಿಕ ಕಿಲ್ಲೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪುಟ್ಟಭಾಷಣ ಮಾಡಿದರು.

‘ಪುತ್ತೂರಿನ ಮುತ್ತಿನಂತ ಜನರಿಗೆ ನನ್ನ ಪ್ರೀತಿಯ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಯೋಗಿ ಆದಿತ್ಯನಾಥ್‌, ಪುತ್ತೂರಿನ ನಿಮ್ಮೆಲ್ಲರಿಗೂ ಹೃದಯದ ಅಭಿನಂದನೆಗಳು. ನಾನು ಮರ್ಯಾದಾ ಪುರುಷೋತ್ತಮ ರಾಮನ ಜನ್ಮಭೂಮಿಯಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ. ಸಾವಿರ ವರ್ಷದ ಹಿಂದೆ ರಾಮನ ವನವಾಸದ ಸಮಯದಲ್ಲಿ ರಾಮನ ಅಂತಿಮ ದಿನದ ವರೆಗೆ ರಾಮನ ಜೊತೆಗಿದ್ದವನು ಹನುಮಂತ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ನಡೆಯುತ್ತಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಕೂಡಾ ಅಂಜನೇಯನ ದೇವಸ್ಥಾನ ಮಾಡುತ್ತಿದೆ ಎಂದರು.

ಯುಪಿ ಸಿಎಂ ಯೋಗಿಗೆ 'ಪುತ್ತಿಲ' ಸ್ವಾಗತ: ಚುನಾವಣಾಧಿಕಾರಿಗೆ ದೂರು ನೀಡಿದ ಬಿಜೆಪಿ!

ಮಂಡಿ ಸೆಸ್‌ ರದ್ದತಿಗೆ ಯೋಗಿಗೆ ಕ್ಯಾಂಪ್ಕೋ ಮನವಿ

ಕರ್ನಾಟಕದಂತೆ ಉತ್ತರ ಪ್ರದೇಶದಲ್ಲೂ ಅಡಕೆ ಮೇಲಿನ ಮಂಡಿ ತೆರಿಗೆ ರದ್ದುಗೊಳಿಸುವಂತೆ ಸಿಎಂ ಯೋಗಿ ಆದಿತ್ಯನಾಥ್‌ಗೆ ಕ್ಯಾಂಪ್ಕೋ ಮನವಿ ಸಲ್ಲಿಸಿದೆ. ಕರ್ನಾಟಕದಲ್ಲಿ ಅಡಕೆಗೆ ಶೇ.1.50ರಷ್ಟುಮಂಡಿ ಸೆಸ್‌ ಇದೆ. ಅದನ್ನು ಇಲ್ಲಿನ ಸರ್ಕಾರ ತೆಗೆದುಹಾಕಿದ್ದು, ಇದರಿಂದ ಅಡಕೆ ಬೆಳೆಗಾರರಿಗೆ ಬಹಳಷ್ಟುನೆರವಾಗಿದೆ. ಸರ್ಕಾರದ ಬೊಕ್ಕಸಕ್ಕೂ ನೇರ ತೆರಿಗೆ ಹರಿದುಬರುತ್ತಿದೆ. ಅಡಕೆ ಧಾರಣೆ ಏರಿಕೆಗೂ ಕಾರಣವಾಗಿದೆ. ಇದೇ ರೀತಿ ಉತ್ತರ ಪ್ರದೇಶದಲ್ಲೂ ಶೇ.1.50ರಷ್ಟುಮಂಡಿ ತೆರಿಗೆ ಇದ್ದು, ಇದರಿಂದಾಗಿ ಅಡಕೆ ಮಾರಾಟಕ್ಕೆ ದಲ್ಲಾಳಿ ಕಾಟ ಶುರುವಾಗಿದ್ದು, ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿದೆ. ಹಾಗಾಗಿ ಬೆಳೆಗಾರರ ಹಿತದೃಷ್ಟಿಯಿಂದ ಅಲ್ಲಿಯೂ ಕರ್ನಾಟಕದ ರೀತಿಯಲ್ಲಿ ಮಂಡಿ ತೆರಿಗೆ ರದ್ದುಪಡಿಸಬೇಕು ಎಂದು ಕ್ಯಾಂಪ್ಕೋ ಪರವಾಗಿ ನಿರ್ದೇಶಕ ಸಂಜೀವ ಮಠಂದೂರು ಅವರು ಯೋಗಿ ಆದಿತ್ಯನಾಥ್‌ಗೆ ಮನವಿ ಸಲ್ಲಿಸಿದರು.

click me!