ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್‌ ಕಣ್ಣೀರಧಾರೆ!

Published : May 07, 2023, 12:46 PM IST
ಡಿಕೆಶಿ ಪರ ಮತಯಾಚನೆ ವೇಳೆ ಸಂಸದ ಡಿ.ಕೆ.ಸುರೇಶ್‌ ಕಣ್ಣೀರಧಾರೆ!

ಸಾರಾಂಶ

ಕನ​ಕ​ಪುರ ಕ್ಷೇತ್ರ​ದಲ್ಲಿ​ರುವ ಸ್ವ ಗ್ರಾಮ ದೊಡ್ಡಾ​ಲ​ಹ​ಳ್ಳಿ​ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.​ಶಿ​ವ​ಕು​ಮಾರ್‌ ಪರ ಚುನಾ​ವಣಾ ಪ್ರಚಾ​ರದ ವೇಳೆ ಸಂಸದ ಡಿ.ಕೆ.​ಸು​ರೇಶ್‌ ಭಾವು​ಕ​ರಾಗಿ ಕಣ್ಣೀ​ರಿಟ್ಟರು.  

ಕನಕಪುರ (ಮೇ.07): ಕನ​ಕ​ಪುರ ಕ್ಷೇತ್ರ​ದಲ್ಲಿ​ರುವ ಸ್ವ ಗ್ರಾಮ ದೊಡ್ಡಾ​ಲ​ಹ​ಳ್ಳಿ​ಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.​ಶಿ​ವ​ಕು​ಮಾರ್‌ ಪರ ಚುನಾ​ವಣಾ ಪ್ರಚಾ​ರದ ವೇಳೆ ಸಂಸದ ಡಿ.ಕೆ.​ಸು​ರೇಶ್‌ ಭಾವು​ಕ​ರಾಗಿ ಕಣ್ಣೀ​ರಿಟ್ಟರು. ಈ ತಾಲೂಕಿನ ರೈತರ, ಯುವಕರ, ಮಹಿಳೆಯರ ಜನ ಸಾಮಾನ್ಯರ ಅಭಿವೃದ್ಧಿಗಾಗಿ ಚಿಂತನೆ ನಡೆಸುತ್ತಾ ನಿದ್ದೆ, ಊಟ ಇಲ್ಲದೆ ಡಿ.ಕೆ.​ಶಿ​ವ​ಕು​ಮಾರ್‌ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರಿಗೆ ಶಕ್ತಿ ತುಂಬುವಂತಹ ಕೆಲಸವನ್ನು ನಮ್ಮ ತಾಲೂಕಿನ ಜನತೆ ಮಾಡಬೇಕಾಗಿದೆ ಎಂದು ಸುರೇಶ್‌ ಭಾವುಕರಾಗಿ ನುಡಿದರು. ಕಳೆದ ಮೂವತೈದು ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಕೆಲಸ ಮಾಡಿರುವ ಡಿ.ಕೆ. ಶಿವಕುಮಾರ್‌ ಅವ​ರನ್ನು ಈ ಬಾರಿ ಕ್ಷೇತ್ರದ ಜನತೆ ಭಾರೀ ಬಹುಮತದಿಂದ ಆಯ್ಕೆ ಮಾಡು​ವಂತೆ ಮನವಿ ಮಾಡಿದರು.

ಈ ರಾಜ್ಯದ ಅಭಿವೃದ್ಧಿಗಾಗಿ ಕನಸನ್ನು ಇಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಬಿಜೆಪಿ ಪಕ್ಷದವರು ಏನೆಲ್ಲಾ ತೊಂದರೆ ಕೊಟ್ಟರು ಸಹಿಸಿಕೊಂಡು ಕೇವಲ ಎರಡು ಗಂಟೆಗಳ ಕಾಲ ನಿದ್ರೆ ಮಾಡುತ್ತಾ ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿರುವ ಡಿ.ಕೆ.ಶಿವಕುಮಾರ್‌ ಅವರ ಗೌರವ, ಘನತೆ ಉಳಿಸುವುದು ಈ ಕ್ಷೇತ್ರದ ಜನರ ಕೈಯಲ್ಲಿದೆ ಎಂದರು. ರಾಜ್ಯದಲ್ಲಿ ಭ್ರಷ್ಟ,ಭಂಡ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೂಗೆಯುವ ಕಾಲ ಬಂದಿದೆ. ರೈತರ, ಯುವಕರ,ಮಹಿಳೆಯರ ಪರವಾದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಛಲದಿಂದ ಡಿಕೆಶಿಯವರು ಗಡ್ಡ ಬಿಟ್ಟಿರುವುದನ್ನು ಅಣಕಿಸುವ ಬಿಜೆಪಿ ನಾಯಕರಿಗೆ ಮೇ 10ರಂದು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕುವ ಮೂಲಕ ಈ ಕ್ಷೇತ್ರದ ಜನ ಉತ್ತರ ನೀಡುವಂತೆ ಬಾವುಕರಾಗಿ ನುಡಿದರು.

ನನ್ನನ್ನು ಸೋಲಿಸಲು ಇದೇನು ಗುಜರಾತ್‌ ಅಲ್ಲ: ಜಗದೀಶ್‌ ಶೆಟ್ಟರ್‌ ಕಿಡಿ

ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವಂತೆ ತಾಲ್ಲೂಕಿನ ಪ್ರತಿಯೊಬ್ಬ ಜನತೆ ತಮ್ಮ ಬಂಧು-ಬಳಗ ಸೇರಿದಂತೆ ನಿಮ್ಮ ಮನೆಯ ಮಗನ ಚುನಾವಣೆ ಎಂದು ಭಾವಿಸಿ ಮತಹಾಕಿಸುವ ಮೂಲಕ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಬಹುಮತದಿಂದ ಜಯ ಗಳಿಸಿ ವಿರೋದಿಗಳಿಗೆ ತಕ್ಕ ಉತ್ತರ ನೀಡುವಂತೆ ಸು​ರೇಶ್‌ ಮನವಿ ಮಾಡಿದರು. ಪ್ರಚಾರದ ವೇಳೆ ಪಕ್ಷದ ಮುಖಂಡರು ಹಾಗು ನೂರಾರು ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್‌ ಪಕ್ಷ ಹಾಗೂ ಶಿವಕುಮಾರ್‌ ರವರ ಪರವಾಗಿ ಘೋಷಣೆಗಳನ್ನು ಮೊಳ​ಗಿ​ಸಿ​ದ​ರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಶ್ರೀರಾಮ ಸೇನೆಯನ್ನು ಏಕೆ ಬ್ಯಾನ್‌ ಮಾಡ​ಲಾ​ಗಿದೆ: ಬಿಜೆಪಿ ಆಡ​ಳಿತ ಇರುವ ಮೂರು ರಾಜ್ಯ​ಗ​ಳಲ್ಲಿ ಯಾವ ಕಾರ​ಣ​ಕ್ಕಾಗಿ ಶ್ರೀ ರಾಮ ಸೇನೆ ಬ್ಯಾನ್‌ ಮಾಡಲಾಗಿದೆ ಎಂಬುದನ್ನು ಹೇಳಲಿ ಎಂದು ಬಿಜೆಪಿ ನಾಯ​ಕ​ರಿಗೆ ಸಂಸದ ಡಿ.ಕೆ.​ಸು​ರೇಶ್‌ ಸವಾಲು ಹಾಕಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಉತ್ತರ ಪ್ರದೇ​ಶ ಸೇರಿ ಮೂರು ರಾಜ್ಯ​ಗ​ಳಲ್ಲಿ ಶ್ರೀ ರಾಮ​ಸೇನೆ ಬ್ಯಾನ್‌ ಮಾಡಿ​ದ್ದಾರೆ. ಯಾವ ಕಾರ​ಣಕ್ಕೆ ಬ್ಯಾನ್‌ ಮಾಡಿ​ದ್ದಾ​ರೆಂದು ಅಲ್ಲಿನ ಮುಖ್ಯಮಂತ್ರಿಗಳು ಹೇಳ​ಬೇಕು. ಚುನಾ​ವ​ಣೆ​ಯಲ್ಲಿ ಗೆಲ್ಲಲು ಆಗು​ವು​ದಿಲ್ಲ ಎಂಬ ಕಾರ​ಣಕ್ಕೆ ಧರ್ಮದ ಹೆಸ​ರಿ​ನಲ್ಲಿ ಅಡ್ಡ ಬರು​ವುದು ಒಳ್ಳೆ​ಯ​ದಲ್ಲ. ನಾವು ಹಿಂದೂ​ಗಳು, ಹಿಂದು​ತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆ​ಯ​ಬೇ​ಕಿಲ್ಲ. ನಾವೂ ಕೂಡಾ ದೇವ​ಸ್ಥಾ​ನಕ್ಕೆ ಹೋಗಿ ದೇವರು ಮಾಡು​ತ್ತೀವಿ. ಆದರೆ, ಪ್ರಚಾರ ಮಾಡಿ​ಕೊಂಡು ರಾಮ - ಹನು​ಮನ ಪೂಜೆ ಮಾಡು​ವು​ದಿಲ್ಲ. ವೋಟಿ​ಗಾಗಿ ಪೂಜೆ ಮಾಡು​ವ​ವ​ರಿಗೆ ಜನರೇ ಉತ್ತರ ಕೊಡು​ತ್ತಾರೆ ಎಂದು ಹೇಳಿ​ದರು.

ಬಿಜೆಪಿಯಿಂದ ಜಾತಿ ಎತ್ತಿ ಕಟ್ಟುವ ಕೆಲಸ, ದ್ವೇಷದ ವಾತಾವರಣ ಸೃಷ್ಟಿ: ಸಿದ್ದು

ಕನ​ಕ​ಪು​ರ​ದಲ್ಲಿ ಭಯದ ವಾತಾ​ವ​ರಣವಿದೆ ಎಂಬ ಬಿ.ಎಲ್‌.ಸಂತೋಷ್‌ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಸುರೇಶ್‌, ಸಂತೋಷ್‌ಗೆ ನಾನೇ ಎಲ್ಲ ರೀತಿಯ ರಕ್ಷಣೆ ಕೊಡು​ತ್ತೇನೆ. ಅವರೇ ಮನೆ ಮನೆಗೆ ಬಂದು ಮತ ಕೇಳಲಿ. ಅದಕ್ಕೆ ಬಿಎಸ್‌ಎಫ್‌ನ ರಕ್ಷಣೆ ಅವ​ಶ್ಯ​ಕತೆ ಇಲ್ಲ. ನಾನು ಒಂದು ಮಾತು ಹೇಳಿ​ದರೆ ಸಾಕು ಅವ​ರಿಗೆ ರಕ್ಷಣೆ ಸಿಗು​ತ್ತದೆ ಎಂದು ತಿರು​ಗೇಟು ನೀಡಿ​ದರು. ಕಾಂಗ್ರೆಸ್‌ ಪಕ್ಷ ಆಂಜನೇ​ಯನ ಬಾಲಕ್ಕೆ ಬೆಂಕಿ ಇಟ್ಟಿ​ದ್ದಾರೆ. ಅದು ಕಾಂಗ್ರೆಸ್‌ ಅನ್ನು ಸುಡು​ತ್ತದೆ ಎಂದು ಅಶೋಕ್‌ ನೀಡಿ​ರುವ ಹೇಳಿ​ಕೆಗೆ ಆರ್‌.ಅ​ಶೋಕ್‌ 40 ಪರ್ಸೆಂಟ್‌ ಸರ್ಕಾ​ರದ ಭ್ರಷ್ಟಸಚಿವ ಎಂದು ಸುರೇಶ್‌ ಕಟು​ವಾಗಿ ಟೀಕಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!