ಸೈಲ್ ಬೆಂಬಲಿಸಲು ಆನಂದ್ ಆಸ್ನೋಟಿಕರ್ ಹಣ ಪಡೆದ್ರಾ?: ರೂಪಾಲಿ‌ ನಾಯ್ಕ್ ಆರೋಪ

Published : May 08, 2023, 10:35 PM IST
ಸೈಲ್ ಬೆಂಬಲಿಸಲು ಆನಂದ್ ಆಸ್ನೋಟಿಕರ್ ಹಣ ಪಡೆದ್ರಾ?: ರೂಪಾಲಿ‌ ನಾಯ್ಕ್ ಆರೋಪ

ಸಾರಾಂಶ

ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಬ್ಯಾಟ್ ಬೀಸಲು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಣ ಪಡೆದಿದ್ದಾರಾ? ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ಮಾಡಿದ್ದಾರೆ.

ಉತ್ತರ ಕನ್ನಡ (ಮೇ.8): ಕಾರವಾರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಪರ ಬ್ಯಾಟ್ ಬೀಸಲು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹಣ ಪಡೆದಿದ್ದಾರಾ? ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕಿ ರೂಪಾಲಿ ನಾಯ್ಕ್ ಮಾಡಿದ್ದಾರೆ. ಈ ಮೂಲಕ ಬಹಿರಂಗ ಪ್ರಚಾರದ ಕೊನೇ ದಿನ ಆನಂದ್ ಹಾಗೂ ಸತೀಶ್ ಸೈಲ್ ವಿರುದ್ಧ ರೂಪಾಲಿ ನಾಯ್ಕ್ ಕೌಂಟರ್ ಅಟ್ಯಾಕ್ ಮಾಡಿದ್ದು, ಕಾರವಾರ - ಅಂಕೋಲಾ ಕ್ಷೇತ್ರದಲ್ಲಿ ಮಾಜಿ ಹಾಗೂ ಹಾಲಿಗಳ ನಡುವೆ ಜಟಾಪಟಿ ಮುಂದುವರಿದಿದೆ.

ಇಂದು ಪ್ರಚಾರ ನಡೆಸಿದ ಬಳಿಕ ಸಂಜೆ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೂಪಾಲಿ ನಾಯ್ಕ್, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್‌ಗೆ ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಬಹಿರಂಗವಾಗಿ ಬೆಂಬಲ ಸೂಚಿಸಿ, ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದಕ್ಕೆ ಆಸ್ನೋಟಿಕರ್ ವಿರುದ್ಧ ರೂಪಾಲಿ ನಾಯ್ಕ ಗರಂ ಆಗಿದ್ದಾರೆ.

ಆನಂದ ಅಸ್ನೋಟಿಕರ್ ಮನೆಯಲ್ಲಿ ಲಕ್ಷಗಟ್ಟಲೆ ಮೊತ್ತದ ಹಣ ಕಳುವಾಗಿತ್ತು. ಆಸ್ನೋಟಿಕರ್ ಡ್ರೈವರ್ ಎಗರಿಸಿದ ಆ ಹಣ ಎಲ್ಲಿಂದ ಬಂತು ಎಂದು ತನಿಖೆ ಆಗಬೇಕು.‌ ಅಪಾರ ಮೊತ್ತದ ಹಣವನ್ನು ಆನಂದ್ ತನ್ನ ಡ್ರೈವರ್ ಕೈಯಲ್ಲಿ ಯಾಕೆ ಕೊಟ್ರು..? ಆ ಹಣ ಎಲ್ಲಿಂದ ಬಂತು ..? ಎಂದು ತನಿಖೆ ಆಗಬೇಕು. ಸತೀಶ್ ಸೈಲ್, ಆನಂದ್ ಅಸ್ನೋಟಿಕರ್ ಒಂದಾಗಿ ಒಬ್ಬ ಮಹಿಳಾ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ಚುನಾವಣೆಯಲ್ಲಿ ಜನರು ಉತ್ತರಿಸುತ್ತಾರೆ. ಅಭಿವೃದ್ಧಿ ಪರ, ಮೋದಿ ಪರ ಜನರು ಮತ ಚಲಾಯಿಸುತ್ತಾರೆ. ಈ ಬಾರಿ 26 ಸಾವಿರ ಮತಗಳ ಅಂತರದಿಂದ ನಾನು ಗೆಲವು ಸಾಧಿಸುತ್ತೇನೆ ಎಂದು ರೂಪಾಲಿ ವಿಶ್ವಾಸ ವ್ಯಕ್ತಪಡಿಸಿದರು.

Karnataka elections 2023: ಮದುವೆಗೆ ಹರಸಲು ಬಂದವರಿಗೆ ನೂತನ ಜೋಡಿಗಳಿಂದ ಮತದಾ

ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ನಡೆಸುವುದಾಗಿ ರೂಪಾಲಿ ತಮ್ಮ ಪ್ರಣಾಳಿಕೆ‌ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಗೋವಾ ಶಾಸಕ ಪ್ರೇಮೇಂದ್ರ ಶೇಟ್, ನಗರಸಭೆ ಅಧ್ಯಕ್ಷ ನಿತಿನ್‌ ಪಿಕಳೆ‌ ಮುಂತಾದವರು ಭಾಗವಹಿಸಿದ್ದರು

ಹಿಜಾಬ್ ವಿವಾದಕ್ಕೆ ಸೂಕ್ತ ಉತ್ತರ ಕಟ್ಟ ಡ್ಯಾಶಿಂಗ್ ನಾಯಕ ಯಶ್‌ಪಾಲ್ ಸುವರ್ಣ: ಶಿಂಧೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!