
ಮಳವಳ್ಳಿ (ಮೇ.02): ಕೇಂದ್ರ ಸರ್ಕಾರದಿಂದ ಯೋಜನೆಗಳ ಜಾರಿಗೆ ಅಡ್ಡಿಯಾಗುವ ಮೂಲಕ ಅಭಿವೃದ್ಧಿಗೆ ಅವಕಾಶ ನೀಡದೇ ಜನರಿಗೆ ದ್ರೋಹವೆಸಗಿದ್ದಾರೆ ಸಂಸದೆ ಸುಮಲತಾ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಕಿಡಿಕಾರಿದರು. ಪಟ್ಟಣದ ಶಾಂತಿ ಕಾಲೇಜಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತಮ್ಮ ಕುಟುಂಬದ ಅಭಿವೃದ್ಧಿಗೆ ಸೀಮಿತರಾಗಿ ಯಾರನ್ನೂ ಬೆಳೆಸದೆ ರಾಮನಗರ, ಹಾಸನ ಜಿಲ್ಲೆಗಳನ್ನು ಕುಟುಂಬದವರಿಗಾಗಿ ಬಳಕೆ ಮಾಡಿಕೊಂಡಿರುವ ಪಕ್ಷವನ್ನು ಸೋಲಿಸಿ. ಜನರ ಪರವಾಗಿ ನಿಲ್ಲುವ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಕೋರಿದರು.
ಸಂಸದೆ ಎನ್ನುವುದಕ್ಕಿಂತ ಹೆಚ್ಚಾಗಿ ಮಳವಳ್ಳಿಯ ಹುಚ್ಚೇಗೌಡರ ಸೊಸೆ ಎನ್ನುವ ಭಾವನೆಯೇ ಹೆಚ್ಚು ಖುಷಿಯ ವಿಚಾರವಾಗಿದೆ, ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಅತಿ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದೀರಿ, ಅಂಬರೀಶ್ ಅವರ ಮೇಲಿನ ಗೌರವ, ಪ್ರೀತಿ ನಿಮ್ಮೆಲ್ಲರೂ ಒತ್ತಾಯಕ್ಕೆ ನಾಲ್ಕು ವರ್ಷಗಳ ಹಿಂದೆ ಮಣಿದು ಸಾಕಷ್ಟುಸವಾಲು ಮೆಟ್ಟಿನಿಂತು ಗೆದ್ದು ಬಂದಿರುವೆ. ಹೆಣ್ಣು ಹೊರಗಡೆ ಬಂದಾಗ ಎದುರಾಗುವ ಸಮಸ್ಯೆಗಳು ನನಗೆ ಗೊತ್ತು. ಚುನಾವಣೆಯ ಹಾಗೂ ನಂತರ ದಿನಗಳಲ್ಲೂ ನಿರಂತರ ಕಿರುಕುಳ ನೀಡುತ್ತಿರುವವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಗ್ಯಾರಂಟಿ ಕಾರ್ಡ್ ನೀಡಿ ಕಾಂಗ್ರೆಸ್ ಮತಭಿಕ್ಷೆ: ಯಡಿಯೂರಪ್ಪ ಲೇವಡಿ
ಕುಟುಂಬದ ಅಭಿವೃದ್ಧಿಗಾಗಿ ಇರುವವರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಹಾಲು-ನೀರು ಹಗರಣ ಮಾಡಿದ್ದವರ ಪರವಾಗಿ ನಿಂತರು. ಹಾಲು-ನೀರು ಹಗರಣದ ಬಗ್ಗೆ ಜಿಲ್ಲೆಯ ಒಬ್ಬ ಶಾಸಕರೂ ಧ್ವನಿ ಎತ್ತಿಲ್ಲ, ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಒಡೆದರೆ ರೈತರ ಪಾಡೇನು, ಹಾಲು-ನೀರು ಹಗರಣದಿಂದ ಮನ್‌ಮುಲ್ ಮುಚ್ಚಿದರೇ ಸಾವಿರಾರು ಮಹಿಳೆಯರ ಪಾಡೇನು ಎಂದು ಅವರು, ನೀವೇ ದೃಢ ನಿರ್ಧಾರ ಮಾಡಿ ಅತಂತ್ರ, ಕುತಂತ್ರ ಮಾಡುವ ಕುಟುಂಬ ಸರ್ಕಾರ ಬೇಕಾ ಎನ್ನುವ ಮೂಲಕ ತಮ್ಮ ಭಾಷಣದ್ದುದ್ದಕ್ಕೂ ಜೆಡಿಎಸ್ನನ್ನು ಕಟುವಾಗಿ ಟೀಕಿಸಿದರು.
ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಮಾತನಾಡಿ, ಮೀಸಲು ಕ್ಷೇತ್ರದಲ್ಲಿ ಇಪ್ಪತ್ತು ವರ್ಷಗಳಿಂದ ಆಳ್ವಿಕೆ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ, ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ತಾಲೂಕಿನ ಪ್ರಗತಿಗೆ ಬಿಜೆಪಿಯನ್ನು ಬೆಂಬಲಿಸಬೇಕು, ಅಭಿವೃದ್ಧಿಗೆ ವಿರುದ್ಧ ಇರುವ ಕಾಂಗ್ರೆಸ್ ಮತ್ತು ಜೆಡಿಎಸ್ ನನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಗೆಲ್ಲಿಸಬೇಕೆಂದರು.
ಪ್ರಧಾನಿಯ ನಿಂದಿಸುವುದೇ ಕಾಂಗ್ರೆಸ್ ಸಾಧನೆ: ಸಚಿವ ಸುಧಾಕರ್
ಕಾರ್ಯಕ್ರಮದಲ್ಲಿ ಚುನಾವಣಾ ಉಸ್ತುವಾರಿ ಮದ್ದೂರು ಸತೀಶ್, ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎನ್.ಕೃಷ್ಣ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಶೋಧಮ್ಮ, ಪುರಸಭೆ ಸದಸ್ಯ ರವಿ, ಮುಖಂಡರಾದ ಎಚ್.ಆರ್.ಅಶೋಕ್‌ಕುಮಾರ್, ಯಮದೂರು ಸಿದ್ದರಾಜು, ಅಪ್ಪಾಜಿಗೌಡ, ದೋರನಹಳ್ಳಿ ಕುಮಾರಸ್ವಾಮಿ, ಮಧು ಗಂಗಾಧರ್, ಶಾರದಾ ಜಿ.ಮುನಿರಾಜು, ಕನ್ನಹಳ್ಳಿ ಪ್ರಸಾದ್, ಚೌಡೇಗೌಡ, ಮೂರ್ತಿ, ಕ್ಯಾತನಹಳ್ಳಿ ಅಶೋಕ್, ಕೆ.ಸಿ.ನಾಗೇಗೌಡ, ರಾಜಣ್ಣ, ರಾಜೀವ್ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.