ಒಂದೇ ಕುಟುಂಬದ ಅಭಿವೃದ್ಧಿ ಸಾಕಾ?: ದಳಪತಿಗಳ ವಿರುದ್ಧ ಮತ್ತೆ ಗುಡುಗಿದ ಸುಮಲತಾ

By Kannadaprabha NewsFirst Published Apr 27, 2023, 2:40 AM IST
Highlights

ನೀವು ಕೊಡುವ ಒಂದು ಮತದಿಂದ ಕೇವಲ ಒಂದು ಕುಟುಂಬದ ಅಭಿವೃದ್ಧಿಯಾದರೆ ಸಾಕಾ ಅಥವಾ ಎಲ್ಲ ಕುಟುಂಬಗಳ ಅಭಿವೃದ್ಧಿ ಆಗಬೇಕಾ, ನೀವೇ ತೀರ್ಮಾನ ಮಾಡಿ ಎಂದು ಸಂಸದೆ ಸುಮಲತಾ ಅಂಬರೀಶ್‌ ದಳಪತಿಗಳ ವಿರುದ್ಧ ಮತ್ತೆ ಗುಡುಗಿದರು. 

ಮಂಡ್ಯ (ಏ.27): ನೀವು ಕೊಡುವ ಒಂದು ಮತದಿಂದ ಕೇವಲ ಒಂದು ಕುಟುಂಬದ ಅಭಿವೃದ್ಧಿಯಾದರೆ ಸಾಕಾ ಅಥವಾ ಎಲ್ಲ ಕುಟುಂಬಗಳ ಅಭಿವೃದ್ಧಿ ಆಗಬೇಕಾ, ನೀವೇ ತೀರ್ಮಾನ ಮಾಡಿ ಎಂದು ಸಂಸದೆ ಸುಮಲತಾ ಅಂಬರೀಶ್‌ ದಳಪತಿಗಳ ವಿರುದ್ಧ ಮತ್ತೆ ಗುಡುಗಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನಲ್ಲಿ ನಡೆದ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಬಿಜೆಪಿ ಪರ ಪ್ರಚಾರ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ ಬಾರಿ ಏಳಕ್ಕೆ ಏಳೂ ಜೆಡಿಎಸ್‌ ಶಾಸಕರನ್ನು ಗೆಲ್ಲಿಸಿದಿರಿ. ಆದರೆ, ಜಿಲ್ಲೆ ಅಭಿವೃದ್ಧಿ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಪ್ರತಿ ಕುಟುಂಬದ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಜನರು ಚಿಂತನೆ ನಡೆಸಬೇಕು. ನಿಮ್ಮ ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಬಿಜೆಪಿಯನ್ನು ಬೆಂಬಲಿಸುವುದು ಅಗತ್ಯ ಎಂದು ಹೇಳಿದರು.

ಎರಡೂ ಪಕ್ಷಗಳ ಸರ್ಕಾರದ ಅವಧಿಯಲ್ಲಿ ಮೈಷುಗರ್‌ ಆರಂಭ ಆಗಲಿಲ್ಲ, ಅಷ್ಟೇ ಏಕೆ ಪಾಂಡುಪುರದ ಸಕ್ಕರೆ ಕಾರ್ಖಾನೆಯೂ ನಿಂತುಹೋಗಿತ್ತು. ಅವುಗಳ ಚಾಲನೆಗೆ ಸಂಸದೆ ಸುಮಲತಾ ಬರಬೇಕಾಯಿತು. ಡಬಲ್‌ ಎಂಜಿನ್‌ ಸರ್ಕಾರದ ನೆರವಿನಿಂದ ಈ ಕಾರ‍್ಯಗಳನ್ನು ಮಾಡಿದ್ದೇವೆ ಎಂದರು. ಒಂದು ಕಾಲದಲ್ಲಿ ಅಭೂತಪೂರ್ವವಾಗಿ ಅಭಿವೃದ್ಧಿಯ ಪಥದಲ್ಲಿದ್ದ ಮಂಡ್ಯ ಜಿಲ್ಲೆ ಕಳೆದ ಎಂಟ್ಹತ್ತು ವರ್ಷಗಳಿಂದ ತೀರಾ ಹಿಂದುಳಿದಿದೆ. ಆಳುವ ಸರ್ಕಾರಗಳು ಅಭಿವೃದ್ಧಿಯನ್ನು ಮರೆತಿವೆ. ತಾವು ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆಯೇ ಹೊರತು ಜಿಲ್ಲೆಯ ಅಭಿವೃದ್ಧಿಗೆ ಕಾಯಕಲ್ಪ ನೀಡಲಿಲ್ಲ ಎಂದು ಆರೋಪಿಸಿದರು.

Latest Videos

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌ ಮಾತನಾಡಿ, ಮಂಡ್ಯ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಯೋಗಿ ಆದಿತ್ಯನಾಥ್‌ ಅವರ ಆಗಮನದಿಂದ ಜಿಲ್ಲೆಯಲ್ಲಿ ಬಿಜೆಪಿ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

ಜೆಡಿಎಸ್‌ಗೆ ಸ್ವ ಅಭಿವೃದ್ಧಿ ಮುಖ್ಯ: ಚುನಾವಣೆಯಲ್ಲಿ ನೀವು ಹಾಕುವ ಮತದಿಂದ ಒಂದು ಕುಂಟುಂಬ ಅಭಿವೃದ್ಧಿಯಾಗುತ್ತದೆಯೇ ಹೊರತು ನಿಮ್ಮ ಕುಟುಂಬ ಮಾತ್ರ ಬದಲಾವಣೆಗೆ ಕಾಯುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್‌ ದಳಪತಿಗಳ ವಿರುದ್ಧ ಟೀಕಿಸಿದರು. ಪಟ್ಟಣದ ಸೋಮೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ನಡೆದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ,

ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ: ಎಚ್‌.ಡಿ.ಕುಮಾರಸ್ವಾಮಿ

ನಿಮ್ಮ ಪಕ್ಷಕ್ಕೆ ದುಡಿದು ಬೆಳೆದಂತಹ ಕಾರ್ಯಕರ್ತರಿಗೆ ನೀವು ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ಮತ ಹಾಕಿದ ಜನರನ್ನು ಬಳಸಿಕೊಂಡು ನಿಮ್ಮ ಕುಟುಂಬವನ್ನು ಬೆಳೆಸಿಕೊಳ್ಳುತ್ತಿದ್ದೀರಿ. ಈ ಬಗ್ಗೆ ಜನರಿಗೆ ಮಾಡಿದ ವಂಚನೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸ್ವಾಮಿ, ನಾಗರತ್ನ ಎಸ್‌.ಪಿ.ಸ್ವಾಮಿ, ತಾಲೂಕು ಘಟಕದ ಅಧ್ಯಕ್ಷ ಬಿ.ಕೆ.ಸತೀಶ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋಧಮ್ಮ, ಜಿಪಂ ಮಾಜಿ ಸದಸ್ಯರಾದ ಕೃಷ್ಣೇಗೌಡ, ಬೋರಯ್ಯ, ಮುಖಂಡರಾದ ಮಹದೇವು, ಜಿ.ಸಿ. ಮಹೇಂದ್ರ, ಡಾಬಾ ಕಿಟ್ಟಿ, ಶಂಕರ್‌, ಸೇರಿದಂತೆ ವಿವಿಧ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.

click me!