ಕಾಂಗ್ರೆಸ್‌ನದ್ದು ಡಕೋಟೋ ಎಂಜಿನ್‌, ಬಿಜೆಪಿಯದ್ದು ಡಬಲ್‌ ಎಂಜಿನ್‌: ಯೋಗಿ ಆದಿತ್ಯನಾಥ್

By Kannadaprabha NewsFirst Published Apr 27, 2023, 2:00 AM IST
Highlights

ಕಾಂಗ್ರೆಸ್‌ನದ್ದು ಡಕೋಟೋ ಎಂಜಿನ್‌. ಬಿಜೆಪಿಯದ್ದು ಡಬಲ್‌ ಎಂಜಿನ್‌. ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ. ಹಾಗಾಗಿ ಪ್ರಗತಿಗೆ ವೇಗ ನೀಡುವ ಡಬಲ್‌ ಎಂಜಿನ್‌ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನರಲ್ಲಿ ಮನವಿ ಮಾಡಿದರು.

ಮಂಡ್ಯ (ಏ.27): ಕಾಂಗ್ರೆಸ್‌ನದ್ದು ಡಕೋಟೋ ಎಂಜಿನ್‌. ಬಿಜೆಪಿಯದ್ದು ಡಬಲ್‌ ಎಂಜಿನ್‌. ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿಯಾಗುತ್ತಿದೆ. ಹಾಗಾಗಿ ಪ್ರಗತಿಗೆ ವೇಗ ನೀಡುವ ಡಬಲ್‌ ಎಂಜಿನ್‌ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜನರಲ್ಲಿ ಮನವಿ ಮಾಡಿದರು.

ಬುಧವಾರ ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್ನಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಟೀಂ ಇಂಡಿಯಾ ರೀತಿ ಕೆಲಸ ಮಾಡುತ್ತಿದ್ದಾರೆ. ಅವರೇ ಟೀಂ ಕ್ಯಾಪ್ಟನ್‌ ಆಗಿದ್ದಾರೆ. ನಮ್ಮ ತಂಡಕ್ಕೆ ಒಳ್ಳೆಯ ಆಟಗಾರರು ಬೇಕು. ಪ್ರಗತಿಯ ಪರ್ವ ಡ​ಬಲ್‌ ಎಂಜಿನ್‌ ಸರ್ಕಾರ​ದಿಂದ ಸಾ​ಧ್ಯ​ವಾ​ಗಿದೆ. ಮೋದಿ ಅ​ವರ ನೇ​ತೃ​ತ್ವದಲ್ಲಿ ನ​ಡೆ​ಯುವ ಡ​ಬಲ್‌ ಎಂಜಿನ್‌ ಸರ್ಕಾರ​ಗಳು ಬ​ಲಿ​ಷ್ಠ​ವಾ​ಗ​ಬೇಕು. ಅ​ದ​ಕ್ಕಾಗಿ ಬಿ​ಜೆಪಿ ಅ​ಭ್ಯರ್ಥಿಗ​ಳನ್ನು ಗೆ​ಲ್ಲಿ​ಸುವ ಮೂ​ಲಕ ಅ​ವ​ರಿಗೆ ಶಕ್ತಿ ತುಂಬ​ಬೇಕು ಎಂದು ಮ​ನವಿ ಮಾ​ಡಿ​ದರು.

Latest Videos

ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ನಿಂದ ಭಯೋತ್ಪಾದಕ ಸಂಘಟನೆಗಳ ತುಷ್ಠೀಕರಣ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಎಸ್‌ಡಿಪಿಐ, ಪಿಎಫ್‌ಐನಂತಹ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲವಾಗಿ ನಿಲ್ಲುತ್ತವೆ. ಅಂತಹ ಸಂಘಟನೆಗಳನ್ನು ತುಷ್ಠೀಕರಣ ಮಾಡುತ್ತವೆ. ಅಲ್ಲದೇ, ಧರ್ಮದ ಹೆ​ಸ​ರಿ​ನಲ್ಲಿ ಅ​ವ​ರಿಗೆ ಮೀ​ಸ​ಲಾತಿಯನ್ನೂ ನೀಡಿದ್ದರು. ಇದು ದೇಶಕ್ಕೆ ಅಪಾಯಕಾರಿಯಾಗಿ ಕಂಡುಬಂದಿದ್ದರಿಂದ ಬಿಜೆಪಿ ಪಿ​ಎಫ್‌ಐ​ನಂತಹ ಸ​ಮಾಜಘಾತುಕ ಶ​ಕ್ತಿ​ಗ​ಳನ್ನು ನಿ​ಷೇ​ಧಿಸಿ​ದೆ. ಕಾಂಗ್ರೆಸ್‌ ಸರ್ಕಾರ​ ಕಾ​ನೂನು ಬಾ​ಹಿ​ರ​ವಾ​ಗಿ ನೀಡಿದ್ದ ಮೀಸಲಾತಿಯನ್ನೂ ನಾವು ತೆ​ಗೆ​ದು​ಹಾ​ಕಿ​ದ್ದೇವೆ ಎಂದು ಸ​ಮರ್ಥಿಸಿ​ಕೊಂಡರು.

ಯಾವ ಪಂಚವಾರ್ಷಿಕ ಯೋಜನೆ ಯಶಸ್ಸು ಕಂಡಿವೆ: 2014ರ ನಂತರ ಭಾರತದ ಸಾಮರ್ಥ್ಯ ದೊಡ್ಡ ಮಟ್ಟದಲ್ಲಿ ಬದಲಾಗಿದೆ. ಕಾಂಗ್ರೆಸ್‌ ಅಭಿವೃದ್ಧಿ ಬಗ್ಗೆ ಭಾಷಣ ಮಾಡುತ್ತದೆ. ಸದಾ ಕಾಲ ಪಂಚ ವಾರ್ಷಿಕ ಯೋಜನೆಗಳ ಬಗ್ಗೆ ಮಾತಾಡುತ್ತದೆ. ಯಾವ ಪಂಚ ವಾರ್ಷಿಕ ಯೋಜನೆ ಯಶಸ್ವಿಯಾಗಿವೆ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಕಾಂಗ್ರೆಸ್‌ ಸರ್ಕಾರ​ದ ಅವಧಿಯಲ್ಲಿ ಪಂಚ​ವಾರ್ಷಿಕ ಯೋ​ಜನೆ ಮಾ​ಡು​ತ್ತಿ​ದ್ದರು. ಗು​ದ್ದಲಿ ಪೂಜೆ ಮಾ​ಡು​ವು​ದಕ್ಕೆ 5 ವರ್ಷ, ಗುಂಡಿ ತೋ​ಡುವುದಕ್ಕೆ 5 ವರ್ಷ. ಇ​ದ​ರಿಂದಾಗಿ ಯೋ​ಜನೆ ನಿಗದಿತ ಸಮಯದಲ್ಲಿ ಪೂರ್ಣವಾ​ಗು​ತ್ತಿ​ರ​ಲಿಲ್ಲ. ಈಗ ಆ ರೀ​ತಿಯ ಪ​ರಿ​ಸ್ಥಿತಿ ಇಲ್ಲ. ಈಗ ಗು​ದ್ದಲಿ ಪೂಜೆ ಮಾ​ಡಿದ ತ​ಕ್ಷ​ಣವೇ ಯಾ​ವಾಗ ಯೋ​ಜನೆ ಪೂರ್ಣವಾ​ಗುತ್ತೆ ಎಂದು ಹೇ​ಳು​ತ್ತೇವೆ. ಪ್ರ​ಧಾ​ನಿಯ​ವರು ಗು​ದ್ದಲಿ ಪೂಜೆ ಮಾಡಿ ಉ​ದ್ಘಾ​ಟ​ನೆ​ಯನ್ನೂ ಮಾ​ಡು​ವಂತಹ ಕಾ​ಲ​ಘ​ಟ್ಟ​ದಲ್ಲಿ ನಾ​ವಿ​ದ್ದೇವೆ ಎಂದು ವಿ​ವ​ರಿ​ಸಿ​ದರು.

ವಿಶ್ವದಲ್ಲಿ ಭಾರತಕ್ಕೆ ಮನ್ನಣೆ: ಭಾರತದ ಪ್ರಧಾನಿಯಾಗಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶ ಅಭಿವೃದ್ಧಿ ಕಾಣುತ್ತಿದೆ. ಅಲ್ಲಿಯವರೆಗೂ ಕಾಂಗ್ರೆಸ್‌ ಜಾರಿಗೊಳಿಸಿದ್ದ ಪಂಚವಾರ್ಷಿಕ ಯೋಜನೆಗಳು ಸಫಲತೆ ಕಂಡಿರಲಿಲ್ಲ. ಮೋದಿ ಪ್ರಧಾನಿ ಆದ ನಂತರವಷ್ಟೇ ವಿಶ್ವದಲ್ಲಿ ಭಾರತಕ್ಕೆ ಮನ್ನಣೆ ಸಿಕ್ತಿದೆ. ಈಗ ಜಿ 20ಅನ್ನು ಮಾ​ಡಿ​ದ್ದೇವೆ. ಅಷ್ಟುನಾವು ಸ​ಬ​ಲೀ​ಕ​ರ​ಣ​ವಾ​ಗಿ​ದ್ದೇ​ವೆ. ಇದು ಭಾ​ರ​ತದ ಶಕ್ತಿ. ಮಾ​ಹಿತಿ ತಂತ್ರ​ಜ್ಞಾ​ನ​ದಲ್ಲಿ ನಂಬರ್‌ ಒನ್‌ ಇ​ದ್ದೇವೆ. ಬೆಂಗ​ಳೂರು ನಂಬರ್‌ ಒನ್‌ ಸ್ಥಾ​ನ​ದ​ಲ್ಲಿ​ದೆ ಎಂ​ದರು. ನಾವು ಏರ್‌ಪೋರ್ಚ್‌, ರೈಲ್ವೆ, ಮಾ​ಹಿತಿ ತಂತ್ರ​ಜ್ಞಾ​ನ​ದಲ್ಲಿ ಹೊಸ ತಂತ್ರ​ಜ್ಞಾನ, ಹೊಸ ಯೋ​ಜ​ನೆ​ ಎ​ಲ್ಲ​ದ​ರಲ್ಲೂ ಮುಂದೆ ಇ​ದ್ದೇವೆ. ಭಾ​ರತ ಕೃಷಿ ಪ್ರ​ಧಾನ ದೇಶ ಎಂದು ಹೇ​ಳ​ಲಾ​ಗು​ತ್ತಿದೆ. ಆ​ದರೆ, ಕಾಂಗ್ರೆಸ್‌ ಅ​ಭಿ​ವೃದ್ಧಿ ಕಾ​ರ್ಯಕ್ರ​ಮ​ವನ್ನು ಕೊ​ಡ​ಲಿಲ್ಲ ಎಂದು ಚಾಟಿ ಬೀ​ಸಿ​ದರು.

ರೈತರನ್ನು ಗೌರವಿಸುವ ಕೆಲಸ: ಕಾಂಗ್ರೆಸ್‌ ಆ​ಡ​ಳಿ​ತಾ​ವ​ಧಿಲ್ಲಿ ಸಾ​ಕಷ್ಟುಜ​ನ ರೈ​ತರು ಆ​ತ್ಮ​ಹತ್ಯೆ ಮಾ​ಡಿ​ಕೊಂಡರು. ರೈತ ಮ​ಹಿ​ಳೆ​ಯ​ರಿಗೆ ಸ್ವಾ​ವ​ಲಂಬಿ ಜೀ​ವನ ನ​ಡೆ​ಸ​ಲಾ​ಗ​ಲಿಲ್ಲ. ರೈ​ತ ಮ​ಕ್ಕ​ಳಿಗೆ ಒ​ಳ್ಳೆಯ ಶಿ​ಕ್ಷಣ ಸಿ​ಗ​ಲಿಲ್ಲ. ಮೋದಿ ರೈತರನ್ನು ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ರೈತರಿಗಾಗಿ ಹಲವಾರು ಯೋಜನೆ ತಂದಿದ್ದಾರೆ. ರಾಜ್ಯದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದಾಗಿ ಪುನರುಚ್ಚರಿಸಿದರು. ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ, ಬೊಮ್ಮಾಯಿ ಇಬ್ಬರು ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದ್ದಾರೆ. 

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಅನುಷ್ಠಾನಕ್ಕೆ ತರಲಾಗಿದೆ. ಡಬಲ್‌ ಎಂಜಿನ್‌ ಸರ್ಕಾರವಿದ್ದಾಗ ಸುರಕ್ಷತೆ, ಸಮೃದ್ಧಿ ಸಾಧ್ಯವಾಗುತ್ತದೆ. ಮೋದಿ ಪರಿಕಲ್ಪನೆಯ ಏಕ ಭಾರತ ಶ್ರೇಷ್ಠ ಭಾರತದ ಆಶಯ ಈಡೇರಬೇಕು ಎಂದು ಕೋರಿದರು. ಉತ್ತರ ಪ್ರದೇಶದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಿಂದ ದೊಡ್ಡ ಪ್ರಗತಿಯಾಗಿದೆ. ಕರ್ಫ್ಯೂ, ದಂಗೆ ಯಾವುದೂ ಅಲ್ಲಿಲ್ಲ. ಇರೋದು ಬರೀ ಅಭಿವೃದ್ಧಿ ಮಾತ್ರ. ಸುರಕ್ಷತೆ ದೃಷ್ಟಿಯಿಂದ ಉತ್ತರ ಪ್ರದೇಶ ಸಾಕಷ್ಟುಸುಧಾರಣೆ ಕಂಡಿದೆ. ಅಲ್ಲಿ ಪಿಎಫ್‌ಐ ಸಂಘಟನೆಯನ್ನು ಬ್ಯಾನ್‌ ಮಾಡಿರುವುದಾಗಿ ತಿಳಿಸಿದರು. 

ನನಗೆ ಆರೋಗ್ಯಕ್ಕಿಂತ ಅಭ್ಯರ್ಥಿಗಳ ಗೆಲುವು ಮುಖ್ಯ: ಎಚ್‌.ಡಿ.ಕುಮಾರಸ್ವಾಮಿ

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನ, ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ್‌ ಸಿಂಹ, ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್‌, ಉಸ್ತುವಾರಿ ಜಗದೀಶ್‌ ಹಿರೇಮನಿ, ಅಭ್ಯರ್ಥಿಗಳಾದ ಕೆ.ಸಿ.ನಾರಾಯಣಗೌಡ, ಅಶೋಕ್‌ ಜಯರಾಂ, ಎಸ್‌. ಸಚ್ಚಿದಾನಂದ, ಎಸ್‌.ಪಿ.ಸ್ವಾಮಿ, ಡಾ. ಎನ್‌.ಎಸ್‌.ಇಂದ್ರೇಶ್‌, ಜಿ.ಮುನಿರಾಜು, ಸುಧಾ ಶಿವರಾಮೇಗೌಡ, ಬಿಜೆಪಿ ರಾಜ್ಯ ಕಾರ‍್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!