ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್‌ ನಿತ್ಯ ಅವಮಾನ: ಲೆಹರ್‌ ಸಿಂಗ್‌

Published : May 05, 2023, 10:14 AM IST
ಮಲ್ಲಿಕಾರ್ಜುನ ಖರ್ಗೆಗೆ ರಾಹುಲ್‌ ನಿತ್ಯ ಅವಮಾನ: ಲೆಹರ್‌ ಸಿಂಗ್‌

ಸಾರಾಂಶ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಪ್ರತಿದಿನ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಹೇಳಿದ್ದಾರೆ.

ಬೆಂಗಳೂರು (ಮೇ.05): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಪ್ರತಿದಿನ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಹೇಳಿದ್ದಾರೆ. ರಾಜಸ್ಥಾನ ಬಿಜೆಪಿ ಶಾಸಕ ಮದನ್‌ ದಿವಲಾರ್‌ ಅವರು ಹೇಳಿಕೆಗೆ ಪ್ರಧಾನಿ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇವಾಲಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ರಾಹುಲ್‌ ಗಾಂಧಿ ಚೇಲಾಗಳು ತಮ್ಮ ಸ್ಥಾನಗಳನ್ನು ತ್ಯಜಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವರದೇ ತಂಡವನ್ನು ಆರಿಸಲು ಅವಕಾಶ ನೀಡಿದ್ದಾರೆಯೇ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ. ಖರ್ಗೆ ಅವರಿಗೆ ಕಾಂಗ್ರೆಸ್‌ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆಯೇ ಎನ್ನುವುದನ್ನು ಪ್ರಾಮಾಣಿಕವಾಗಿ ಹೇಳಲಿ’ ಎಂದು ಟೀಕಿಸಿದ್ದಾರೆ.

‘ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದೇ ನೆಹರೂ-ಗಾಂಧಿ ಕುಟುಂಬ ಅವರ ಹಿಂದೆ ಅಡಗಿಕೊಳ್ಳಲು ಮತ್ತು ತಮ್ಮ ವೈಯಕ್ತಿಕ ಉಳಿವಿಗಾಗಿ ಕಾಂಗ್ರೆಸ್‌ ಕುಟುಂಬ ದಲಿತ ನಾಯಕರನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ನಲ್ಲಿ ಖರ್ಗೆಯವರ ಸ್ಥಾನಮಾನ ಕೇವಲ ಹೆಸರಿಗಷ್ಟೇ ಎಂದು ಸಾಬೀತುಪಡಿಸಲು ರಣದೀಪ್‌ ಸುರ್ಜೇವಾಲಾ, ಪವನ್‌ ಖೇರಾ, ಜೈರಾಮ್‌ ರಮೇಶ್‌ ಅವರಂತಹ ಕಾಂಗ್ರೆಸ್‌ ವಕ್ತಾರರು ತಾವು ಏನು ಮಾತನಾಡಬೇಕು ಎನ್ನುವ ನಿರ್ದೇಶನವನ್ನು ರಾಹುಲ್‌ಗಾಂಧಿಯಿಂದ ಪಡೆದುಕೊಳ್ಳುತ್ತಾರೋ ಅಥವಾ ಖರ್ಗೆಯವರಿಂದಲೋ’ ಎಂದು ಪ್ರಕಟಣೆ ಮೂಲಕ ಪ್ರಶ್ನಿಸಿದ್ದಾರೆ.

ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ, ಬಣಕಾರ ನಡುವೆ ಜಿದ್ದಾಜಿದ್ದಿ: ಅಭ್ಯರ್ಥಿಗಳು ಅವರೇ, ಪಕ್ಷ ಮಾತ್ರ ಬೇರೆ!

ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ: ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜಾತಿ, ಧರ್ಮಗಳ ಮಧ್ಯೆ ಒಡಕು ಮೂಡಿಸುವ ಮೂಲಕ ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಇನ್ನಾದರೂ ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ದೇಶಕ್ಕೆ ಉಳಿಗಾಲವಿಲ್ಲ. ಡಬಲ್‌ ಎಂಜಿನ್‌ ಸರ್ಕಾರದ ಎಲ್ಲ ಇಂಜಿನ್‌ಗಳು ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದರು. ನಗರದ ಸಿಪಿಎಸ್‌ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶರಣಬಸಪ್ಪಗೌಡ ದರ್ಶನಾಪೂರ್‌ ಪರ ಚುನಾವಣೆ ಪ್ರಚಾರದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಬೀದ​ರ್‌ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿರುವ ಓಲ್ಡ್‌ ಸಿಟಿ ಮತದಾರರು

ಈ ಕ್ಷೇತ್ರಕ್ಕೆ ದರ್ಶನಾಪೂರ್‌ ಅವರ ಮನೆತನದ ಕೊಡುಗೆ ಅಪಾರ. ನೀವೆಲ್ಲ ಮತದಾರರು ದರ್ಶನಾಪೂರ್‌ ಅವರನ್ನು ಅತ್ಯಂತ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಾರ್ಯದರ್ಶಿ ಸ್ವಾಮಿನಾಥನ್‌, ಶ್ರೀಧರ್‌ ಬಾಬು, ಮಾಜಿ ಸಂಸದ ವಿಶ್ವನಾಥ್‌, ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲಿಕಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ ಆರಬೋಳ, ಶರಣಪ್ಪ ಸಲಾದಪೂರ, ಶಂಕ್ರಣ್ಣ ವಣಿಕ್ಯಾಳ, ಸುರೇಂದ್ರ ಪಾಟೀಲ್‌, ಡಾ. ಮಲ್ಲನಗೌಡ ಉಕ್ಕಿನಾಳ, ಅಮೀನ್‌ರೆಡ್ಡಿ ಪಾಟೀಲ್‌, ಗುರುನಾಥ್‌ರೆಡ್ಡಿ ಹಳಿಸಗರ್‌, ವಿನೋದ್‌ ಪಾಟೀಲ್‌, ಸಲೀಂ ಸಂಗ್ರಾಮ್‌, ಶಿವಮಾಂತು ಚಂದಾಪುರ್‌, ನೀಲಕಂಠ ಬಡಿಗೇರ್‌, ತಿಮ್ಮಯ್ಯ ಪುರ್ಲೆ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್