ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು ಗೊತ್ತು: ಜಾರಕಿಹೊಳಿಗೆ ಟಕ್ಕರ್ ಕೊಟ್ಟ ಸವದಿ

Published : Apr 28, 2023, 04:20 AM IST
ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು ಗೊತ್ತು: ಜಾರಕಿಹೊಳಿಗೆ ಟಕ್ಕರ್ ಕೊಟ್ಟ ಸವದಿ

ಸಾರಾಂಶ

ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು, ಎಲ್ಲರಿಗೂ ಜಗಜ್ಜಾಹೀರಾಗಿದೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಲೇವಡಿ ಮಾಡಿದರು. 

ಅಥಣಿ (ಏ.28): ಗಂಡಸ್ತನ ತೋರಿಸಲು ಹೋಗಿ ಮಂತ್ರಿ ಪದವಿ ಕಳೆದುಕೊಂಡಿದ್ದು, ಎಲ್ಲರಿಗೂ ಜಗಜ್ಜಾಹೀರಾಗಿದೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ಲೇವಡಿ ಮಾಡಿದರು. ತಾಲೂಕಿನ ಯಕ್ಕಂಚಿ, ಯಲಿಹಡಲಗಿ ಮತ್ತು ಅಡಹಳ್ಳಿ ಗ್ರಾಮದಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಅವರು ಗಂಡಸ್ತನ ಇದ್ದರೇ ಗೆದ್ದು ಬಾ ಅಂತ ನನಗೆ ಪದೆ, ಪದೇ ಸವಾಲು ಹಾಕುತ್ತಿದ್ದು, ಇದರಲ್ಲಿ ಗಂಡಸ್ತನವೇನು ಬರುತ್ತದೆ? ಜನರ ಮನಸ್ಸನ್ನು ಒಲೈಸಿಕೊಳ್ಳುವುದನ್ನು ಬಿಟ್ಟು ಉಡಾಫೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ನಾನು 20 ವರ್ಷಗಳ ಹಿಂದೆ ಅಥಣಿಯಲ್ಲಿ ಭಾಜಪ ಗ್ರಾಪಂ, ತಾಪಂ, ಜಿಪಂ ಒಬ್ಬರೂ ಚುನಾಯಿತ ಪ್ರತಿನಿಧಿ ಇರದಿದ್ದಾಗ ಪಕ್ಷವನ್ನು ಸಂಘಟಿಸಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಪಕ್ಷ ನನಗೆ ಎಷ್ಟುಅಧಿಕಾರ ಕೊಟ್ಟಿದೆಯೋ ಅದಕ್ಕಿಂತ ಹೆಚ್ಚು ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿದ್ದೇನೆ. 2018ರ ಚುನಾವಣೆಯಲ್ಲಿ ಅನೇಕರು ಶಾಸಕರಾಗಲು ಶ್ರಮಿಸಿದ್ದೇನೆ. ಉಪಚುನಾವಣೆಯಲ್ಲಿ ಉಸ್ತುವಾರಿ ನೀಡಿದಾಗ ನನ್ನ ಅವಶ್ಯಕತೆಯಿತ್ತು. ಆದರೆ, ಟಿಕೆಟ್‌ ನೀಡದೇ ನನಗೆ ಭಾಜಪ ಮೋಸ ಮಾಡಿತು ಎಂದು ಹರಿಹಾಯ್ದರು. ಬಿಜೆಪಿ ನಾಯಕರು ನನಗೆ ಮಾತು ಕೊಟ್ಟಂತೆ ಟಿಕೆಟ್‌ ನೀಡದೇ, ನನಗೆ ಮೋಸ ಮಾಡಿದರು. ಕಾಂಗ್ರೆಸ್‌ ಪಕ್ಷದಿಂದ ನಾನು ಸ್ಪರ್ಧಿಸಿ ನಿಮ್ಮ ಮುಂದೆ ಬಂದಿದ್ದೇನೆ. 

ವಿಷದ ಹಾವು ಎಂದಿದ್ದು ಮೋದಿಯನ್ನಲ್ಲ, ಬಿಜೆಪಿಯನ್ನು: ಮಲ್ಲಿಕಾರ್ಜುನ ಖರ್ಗೆ

ಸ್ವಾಭಿಮಾನಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ನನಗೆ ತಮ್ಮ ಅತ್ಯಮೂಲ್ಯವಾದ ಮತಗಳನ್ನು ನೀಡಿ ನನಗೆ ಸವಾಲು ಹಾಕುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು. ಮುಖಂಡರಾದ ಗಜಾನನ ಮಂಗಸೂಳಿ, ಎಸ್‌.ಕೆ.ಬುಟಾಳೆ, ಶ್ರೀಕಾಂತ ಪೂಜಾರಿ, ಶೇಖರ ನೇಮಗೌಡ, ಸುಶೀಲಕುಮಾರ ಪತ್ತಾರ, ಬಸವರಾಜ ಬುಟಾಳೆ, ಶಿವು ಗುಡ್ಡಾಪುರ, ಅಡಿವೆಪ್ಪ ಕೆಂಚಣ್ಣವರ, ಪರಮಾನಂದ ಅಥಣಿ, ಮಹಾದೇವ ನಾಗನೂರ, ಸಿದರಾಯ ನಾಯಿಕ, ಪರಮಾನಂತ ಅಥಣಿ, ಮಲ್ಲಯ್ಯ ಪೂಜಾರಿ, ಶ್ರೀಶೈಲ ಗೊಂಧಲಿ, ಗುರುದತ್ತ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಬಿಎಸ್‌ವೈಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪನವರು ಹೇಳಿದಂತೆ ನಾನೇನು ಬಿಜೆಪಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಲ್ಲ. ಅವರೇ ನನ್ನನ್ನು ಪಕ್ಷದಿಂದ ಹೊರ ದೂಡಿದ್ದಾರೆ. ಕೊಟ್ಟಮಾತಿನಂತೆ ನನಗೆ ಟಿಕೆಟ್‌ ನೀಡಿದೇ ಮೋಸ ಮಾಡಿದ್ದಾರೆ. ಅಲ್ಲದೆ ಯಡಿಯೂರಪ್ಪನವರು ಬಿಜೆಪಿ ಪಕ್ಷವನ್ನು ತೊರೆದು ಕೆಜೆಪಿ ಪಕ್ಷಕ್ಕೆ ಹೋಗಿ ಬಂದವರು. ಈಗ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಬಿಎಸ್‌ವೈ ಅವರಿಗೆ ಮಾಜಿ ಡಿಸಿಎಂ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಥಣಿ ಮತ ಕ್ಷೇತ್ರದಲ್ಲಿ ಯಾವುದೇ ನಾಯಕರು ಬಂದು ಪ್ರಚಾರ ಮಾಡಲಿ. ನನ್ನ ಮತ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆಂಬ ಆತ್ಮವಿಶ್ವಾಸವಿದೆ. ಮೇ. 13ರವರೆಗೆ ಯಾವ ನಾಯಕರ ಆರೋಪ ಪ್ರತ್ಯಾರೋಪಗಳಿಗೆ ಉತ್ತರಿಸುವುದಿಲ್ಲ. ಚುನಾವಣಾ ಫಲಿತಾಂಶದ ದಿನವೇ ಕ್ಷೇತ್ರದ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದರು.

ಆಣೆ, ಪ್ರಮಾಣ ಮಾಡಲಿ: ಶಾಸಕ ಮಹೇಶ ಕುಮಟಳ್ಳಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಬರುವ ಸಂದರ್ಭದಲ್ಲಿ .50 ಕೋಟಿಗಳನ್ನು ಪಡೆದುಕೊಂಡಿದ್ದಾರೆನ್ನುವ ಆರೋಪ ನಾನು ಎಲ್ಲಿಯೂ ಮಾಡಿಲ್ಲ. ದೇವಸ್ಥಾನಕ್ಕೆ ಹೋಗಿ ಆಣೆ ಪ್ರಮಾಣ ಮಾಡುವ ಅಗತ್ಯ ಇಲ್ಲ, ಹೇಳಿದ ವ್ಯಕ್ತಿ ಅದೇ ಪಕ್ಷದಲ್ಲಿ ಇರುವುದರಿಂದ ಇಬ್ಬರೂ ಕೂಡಿ ದೇವಸ್ಥಾನಕ್ಕೆ ಹೋದರೇ ಇಬ್ಬರಿಗೂ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಮಹೇಶ ಕುಮಟಳ್ಳಿ ಹೇಳಿಕೆಗೆ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ ಸವದಿ ತಿರುಗೇಟು ನೀಡಿದರು.

ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

ಮಾಜಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್‌ ಪಕ್ಷದ ಮುಖಂಡರು ಬಿಜೆಪಿ ಪಕ್ಷವನ್ನು ಸೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್‌ ಪಕ್ಷಕ್ಕೆ ಬಂದ ನಂತರ ಬಿಜೆಪಿಯ ಅನೇಕ ಮುಖಂಡರು ಮತ್ತು ಪುರಸಭೆಯ ಎಲ್ಲ ಸದಸ್ಯರು ಕಾಂಗ್ರೆಸ್‌ ಪಕ್ಷಕ್ಕೆ ಬಂದಿದ್ದಾರೆ. ಒಬ್ಬರು ಅಥವಾ ಇಬ್ಬರು ಪಕ್ಷ ಬಿಟ್ಟು ಹೋಗುವುದರಿಂದ ನಮಗೆ ಅಂತಹ ನಷ್ಟವೆನಿಲ್ಲ. ಮತಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ರಾಜ್ಯದಲ್ಲಿ ಕೂಡ ಕಾಂಗ್ರೆಸ್‌ ಪರವಾದ ಅಲೆ ಇರುವುದರಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾದ ನನಗೆ ಮತದಾರರು ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ