ಬೆಂಗಳೂರಿನಲ್ಲಿ ಬದಲಾವಣೆಯನ್ನು ಜನ ಬಯಸ್ತಾ ಇದ್ದಾರೆ: ಜವರಾಯಿಗೌಡ ಪರ ಎಚ್‌ಡಿಕೆ ಪ್ರಚಾರ

By Kannadaprabha NewsFirst Published Apr 28, 2023, 3:40 AM IST
Highlights

ಭ್ರಷ್ಟಾಚಾರದ ಪಾಪದ ಹಣದಿಂದ ಚುನಾವಣೆ ಗೆಲ್ಲುತ್ತೇನೆ ಎಂಬ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ ಪವಿತ್ರ ಮತವನ್ನು ಜೆಡಿಎಸ್‌ ಅಭ್ಯರ್ಥಿ ಟಿ.ಎನ್‌.ಜವರಾಯಿ ಗೌಡ ಅವರಿಗೆ ನೀಡುವ ಮೂಲಕ ಮತದಾರರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಕೆಂಗೇರಿ (ಏ.28): ಭ್ರಷ್ಟಾಚಾರದ ಪಾಪದ ಹಣದಿಂದ ಚುನಾವಣೆ ಗೆಲ್ಲುತ್ತೇನೆ ಎಂಬ ಬಿಜೆಪಿ ಅಭ್ಯರ್ಥಿಗೆ ತಕ್ಕಪಾಠ ಕಲಿಸಿ ಪವಿತ್ರ ಮತವನ್ನು ಜೆಡಿಎಸ್‌ ಅಭ್ಯರ್ಥಿ ಟಿ.ಎನ್‌.ಜವರಾಯಿ ಗೌಡ ಅವರಿಗೆ ನೀಡುವ ಮೂಲಕ ಮತದಾರರು ಆಶೀರ್ವಾದ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. 

ಮಂಗಳವಾರ ಯಶವಂತಪುರ ಕ್ಷೇತ್ರದ ಬಾಬಾಸಾಹೇಬರ ಪಾಳ್ಯ, ಕೆಂಗೇರಿ ಉಪನಗರದ ಕೆಎಚ್‌ಬಿ ಬಡಾವಣೆಯಲ್ಲಿ ಮತಯಾಚನೆ ನಡೆಸಿ ಮಾತನಾಡಿದ ಅವರು, ಅತಿವೃಷ್ಟಿ-ಅನಾವೃಷ್ಟಿ ಪ್ರವಾಹ ಭೀತಿಯಿಂದ ಕರ್ನಾಟಕದ ಜನತೆ ತತ್ತರಿಸಿ ಹೋಗಿದ್ದರೂ ತಿರುಗಿ ನೋಡದ ಉತ್ತರ ಭಾರತದ ಮಹಾನಾಯಕರು, ಚುನಾವಣೆ ಹೊಸ್ತಿಲಲ್ಲಿ ಪದೇ ಪದೇ ರಾಜ್ಯಕ್ಕೆ ಆಗಮಿಸಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಇದಾವುದಕ್ಕೂ ರಾಜ್ಯದ ಪ್ರಬುದ್ಧ ಮತದಾರರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Latest Videos

ನನ್ನ ಸ್ಪರ್ಧೆ​ಯಿಂದ ಡಿಕೆಶಿ ಕುಟುಂಬಕ್ಕೆ ಭಯ: ಸಚಿವ ಅ​ಶೋಕ್‌

ಪಂಚರತ್ನ ಯೋಜನೆ ಅನುಷ್ಠಾನಕ್ಕಾಗಿ ಈ ಬಾರಿ ಐದು ವರ್ಷ ಸುಭದ್ರ ಸರ್ಕಾರ ಆಡಳಿತ ನಡೆಸಲು ಜೆಡಿಎಸ್‌ ಪಕ್ಷಕ್ಕೆ ಅವಕಾಶ ನೀಡಬೇಕು. ಮೂರು ಬಾರಿ ಸೋಲನುಭವಿಸಿರುವ ಜವರಾಯಿಗೌಡ ಅವರ ಮೇಲೆ ಮತದಾರ ಪ್ರಭುಗಳ ಅನುಕಂಪದ ಅಲೆ ತೀವ್ರತರವಾಗಿದೆ. ಹಣಬಲ, ತೋಳ್ಬಲ, ಜಾತಿಬಲದ ಮೂಲಕ ಮತದಾರರನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ಅಭ್ಯರ್ಥಿಯ ಹಿಂಬಾಲಕರ ಗೊಡ್ಡು ಬೆದರಿಕೆಗೆ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ಇವರ ಆಟ ಕೇವಲ 10 ದಿನಗಳ ಮಾತ್ರ ಬಾಕಿ ಇದೆ. ನಂತರ ಇವರೆಲ್ಲಾ ಮನೆಗೆ ಹೋಗುತ್ತಾರೋ ಅಥವಾ ಕಾನೂನು ಕುಣಿಕೆಗೆ ಸಿಲುಕಿ ಒಳಗೆ ಹೋಗುತ್ತಾರೋ ಎಂಬುದನ್ನು ಮತದಾರರ ಪ್ರಭುಗಳು ನಿರ್ಧಾರ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್‌

ಪಕ್ಷದ ಅಭ್ಯರ್ಥಿ ಟಿ.ಎನ್‌.ಜವರಾಯಿಗೌಡ ಮಾತನಾಡಿ, ಮೂರು ಬಾರಿ ಗೆಲುವಿನಂಚಿನಲ್ಲಿ ಸೋಲಿಸಿದ್ದು, ನಾಲ್ಕನೇ ಬಾರಿಯಾದರೂ ಗೆಲುವಿನ ದಡ ಸೇರಿಸುವ ಮೂಲಕ ನಿಮ್ಮ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ಭಾವುಕರಾಗಿ ನುಡಿದರು. ಜೆಡಿಎಸ್‌ ಕಾನೂನು ಘಟಕ ಅಧ್ಯಕ್ಷ ಎ.ಪಿ.ರಂಗನಾಥ್‌, ಬಿಬಿಎಂಪಿ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ, ಜೆಡಿಎಸ್‌ ಮುಖಂಡ ಪಂಚಲಿಂಗಯ್ಯ, ದೊಡ್ಮನೆ ವೆಂಕಟೇಶ್‌, ಕೇಶವಮೂರ್ತಿ, ಪುಷ್ಪ ದೇವರಾಜ್‌, ಚೇತನ್‌ಗೌಡ, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!