ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಕೊಲೆಕಲ್ ಗ್ರಾಮದಲ್ಲಿ ನಡೆದಿದ್ದ ಕಲ್ಲು ತೂರಾಟ ಘರ್ಷಣೆಯಲ್ಲಿ ಸಾರ್ವಜನಿಕರು ಗಾಯಗೊಂಡಿದ್ದರು, ಹಲವು ವಾಹನಗಳು ಜಖಂಗೊಂಡಿದ್ದವು. ಈ ಘಟನೆಗೆ ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪ ಆರೋಪ ಕೇಳಿ ಬಂದ ಹಿನ್ನೆಲೆ ಇಬ್ಬರು ಅದಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.
ಯಾದಗಿರಿ (ಏ.20) : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮ ದಲ್ಲಿ ಇದೇ ಏಪ್ರಿಲ್ 6 ರಂದು ನಡೆದ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಪರಸ್ಪರ ಕಲ್ಲು ತೂರಾಟ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಸೂಕ್ಷ್ಮವಾಗಿ ಗಮನಿಸಿದ್ದು, ಕರ್ತವ್ಯ ಲೋಪ ಆರೋಪದ ಮೇಲೆ ಯಾದಗಿರಿ ಜಿಲ್ಲೆಯ ಸುರಪುರ ವಿಭಾಗದ ಡಿವೈಎಸ್ಪಿ ಮಂಜುನಾಥ ಹಾಗೂ ಸುರಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದ ವಾಗ್ಮೋಡೆ ಅವರನ್ನು ಸ್ಥಳ ನಿಯೋಜನೆ ಮಾಡದೇ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಪಿಐ ಆನಂದ್ ವಾಗ್ಮೋಡೆ(PI Anand Wagmode)ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
undefined
ಯಾದಗಿರಿ(Yadgir) ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮ(Kodekal village)ದಲ್ಲಿನ ಕೈ-ಕಮಲ(Congress-BJP) ಕಾರ್ಯಕರ್ತರ ನಡುವಿನ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರಪುರದ ಇಬ್ಬರು ಅಧಿಕಾರಿಗಳ ಎತ್ತಂಗಡಿ ಆಗಿದೆ. ಆದ್ರೆ ಪಿಐ ಆನಂದ ವಾಗ್ಮೋಡೆ ವರ್ಗಾವಣೆಗೆ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣ(Social media)ದಲ್ಲಿ ಪೋಲಿಸ್ ಇನ್ ಸ್ಪೆಕ್ಟರ್ ಆನಂದ ವಾಗ್ಮೆಡೆ ಪರ ಪೋಸ್ಟ್ ಮಾಡಲಾಗುತ್ತಿದೆ. ಇದರಿಂದಾಗಿ ಸುರಪುರ ಪೋಲಿಸ್ ಠಾಣೆ(Surapur police station)ಯಲ್ಲಿ ಕಳೆದ 8-10 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದ ಆನಂದ ವಾಗ್ಮೊಡೆ ಅವರ ಈ ದಿಢೀರ್ ವರ್ಗಾವಣೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾದಗಿರಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ, ಕಲ್ಲು ತೂರಾಟ, ಉದ್ವಿಗ್ನ ವಾತಾವರಣ
ಪಿಐ ಅನಂದ ವಾಗ್ಮೊಡೆ ದಿಡೀರ್ ವರ್ಗಾವಣೆಗೆ ಖಂಡನೆ
ಇನ್ಸ್‌ಪೆಕ್ಟರ್ ಆನಂದ ವಾಗ್ಮೋಡೆ ದಿಡೀರ್ ವರ್ಗಾವಣೆ ಮಾಡಿ ಚುನಾವಣೆ ಆಯೋಗ(election commission) ಆದೇಶ ಹೊರಡಿಸಿದೆ. ಆದ್ರೆ ಚುನಾವಣಾ ಆಯೋಗದ ನಡೆಯನ್ನು ರಾಷ್ಟ್ರೀಯ ಟಿಪ್ಪು ಸುಲ್ತಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಅರ್ಷದ್ ದಖನಿ ಖಂಡಿಸಿದ್ದಾರೆ. ಕೊಡೇಕಲ್ ಪಟ್ಟಣದಲ್ಲಿ ನಡೆದಂತಹ ಘಟನೆ ಹುಣಸಗಿ ಪೋಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿದೆ. ಈ ಘಟನೆಗೂ ಸುರಪುರ ಠಾಣೆಗೂ ಸಂಬಂಧವೇ ಇಲ್ಲ. ಆದ್ದರಿಂದ ಚುನಾವಣಾ ಆಯೋಗ ಸುರಪುರ ಪೋಲೀಸ್ ಠಾಣೆಯ ಪಿಐ ಆನಂದ ವಾಗ್ಮೋಡೆ ಅವರನ್ನು ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ವರ್ಗಾವಣೆ ಮಾಡಿರುವುದನ್ನು ಕೂಡಲೇ ರದ್ದುಪಡಿಸಿ ಸುರಪುರ ಪೋಲೀಸ್ ಠಾಣೆಯಲ್ಲಿಯೇ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಗುರುಮಠಕಲ್: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ, ಚಿಂಚನಸೂರು ಮೇಲೆ ಹಲ್ಲೆ ಯತ್ನ
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.