Udupi: ಚುನಾವಣೆ ಮುಗಿತು, ರಿಲ್ಯಾಕ್ಸ್ ಮೂಡ್‌ಗೆ ಜಾರಿದ ಅಭ್ಯರ್ಥಿಗಳು

By Govindaraj S  |  First Published May 11, 2023, 4:46 PM IST

ಚುನಾವಣೆ ಮುಗಿದು ಹಲವಾರು ಸಚಿವರು ಶಾಸಕರು ರಾಜಕೀಯ ನಾಯಕರು ರಿಲಾಕ್ಸ್ ಮೂಡ್‌ಗೆ ಹೋಗಿದ್ದಾರೆ. ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಚೇರಿಯಲ್ಲಿ ಕೂಡಿಸು ಕಳೆಯುವ ಲೆಕ್ಕಾಚಾರ ಮಾಡುತ್ತಿದ್ದಾರೆ. 


ಉಡುಪಿ (ಮೇ.11): ಚುನಾವಣೆ ಮುಗಿದು ಹಲವಾರು ಸಚಿವರು ಶಾಸಕರು ರಾಜಕೀಯ ನಾಯಕರು ರಿಲಾಕ್ಸ್ ಮೋಡ್ ಗೆ ಹೋಗಿದ್ದಾರೆ. ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಚೇರಿಯಲ್ಲಿ ಕೂಡಿಸು ಕಳೆಯುವ ಲೆಕ್ಕಾಚಾರ ಮಾಡುತ್ತಿದ್ದಾರೆ. ಬೂತ್‌ಗಳಲ್ಲಿ ಕೆಲಸ ಮಾಡಿದ ಕಾರ್ಯಕರ್ತರ ಜೊತೆ ಸಚಿವ ಸುನಿಲ್ ಕುಮಾರ್ ಫಲಿತಾಂಶದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. 

ಸುಮಾರು ಒಂದು ತಿಂಗಳುಗಳ ಕಾಲ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದ ನಾಯಕರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಸೋಲು ಗೆಲುವು ಏನೇ ಇರಲಿ, ಕೊಂಚ ರಿಲ್ಯಾಕ್ಸ್ ಮೂಡಿಗೆ ರಾಜಕಾರಣಿಗಳು ಜಾರಿದ್ದಾರೆ. ಕಾರ್ಕಳದ ವಿಕಾಸ ಕಚೇರಿಯಲ್ಲಿ ಸಚಿವ ಸುನಿಲ್ ಕುಮಾರ್ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಕಾರ್ಕಳ ಹೆಬ್ರಿ ತಾಲೂಕಿನ ಎಲ್ಲಾ ಬೂತ್ ನಿಂದ ಅಂಕಿ ಅಂಶಗಳನ್ನು ತರಿಸಿಕೊಂಡು ಲೆಕ್ಕಾಚಾರ ಮಾಡುತ್ತಿದ್ದಾರೆ.

Latest Videos

undefined

ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ: ಲಕ್ಷ್ಮೀ ಹೆಬ್ಬಾಳಕರ

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುನಿಲ್ ಕುಮಾರ್, ಚುನಾವಣೆಯನ್ನು ಯಶಸ್ವಿಯಾಗಿ ಯಾಗಿ‌ ಪೂರೈಸಿದ್ದೇವೆ. ಮೂವತ್ತು ದಿನಗಳ ಕಾಲ ಮತ ಬೇಟೆ ಮಾಡಿದ್ದೇವೆ. ಕಾರ್ಯಕರ್ತರ ಪಡೆ ಮೂರು ಬಾರಿ‌ ಮತದಾರರನ್ನು  ಓಲೈಸುವಲ್ಲಿ ಯಶಸ್ವಿಯಾಗಿದೆ. ಹತ್ತಾರು ಅಪಪ್ರಚಾರ ಮತ್ತು ಸುಳ್ಳು ಸುದ್ದಿಗಳು ಕ್ಷೇತ್ರದಲ್ಲಿ ಓಡಾಡಿದವು. ಮತದಾರರು ಒಮ್ಮತ ದಿಂದ ಮತದಾನ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ಇಲ್ಲದೆ 82% ಮತದಾನ ವಾಗಿದೆ. ಗ್ರಾಮೀಣ ಜನತೆ ಸರತಿ ಸಾಲಿನಲ್ಲಿ ನಿಂತು ಪ್ರತಿ ಬೂತಿನಲ್ಲಿ ಉತ್ತಮ ಮತದಾನ ಮಾಡಿದ್ದಾರೆ.

ಅಭಿವೃದ್ಧಿಯನ್ನು ಗೆಲ್ಲಿಸಬೇಕೆಂದು ಬಿಜೆಪಿ ಪರ ಒಲವು ವ್ಯಕ್ತವಾಗಿದೆ. ಮತದಾರರಿಗೆ, ಕಾರ್ಯಕರ್ತರಿಗೆ, ಅಧಿಕಾರಿಗಳಿಗೆ ಧನ್ಯವಾದ. ಕ್ಷೇತ್ರದಲ್ಲಿ 82% ಮತದಾನ ಬಿಜೆಪಿಗೆ ವರದಾನವಾಗಲಿದೆ. ಹೊರ ಊರುಗಳಲ್ಲಿ ಇದ್ದ ಮತದಾರರು ಮತದಾನ ಬಂದು ಮಾಡಿದ್ದಾರೆ. ಮುಂಬೈ ಬೆಂಗಳೂರಿನಿಂದ ಸಾವಿರಾರು ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ. ದೇಶದ ಪರಿಸ್ಥಿತಿ ಅರ್ಥಮಾಡಿದವರು ಬಿಜೆಪಿಗೆ ಮತದಾನ ಮಾಡಿದ್ದಾರೆ.ಶೇಕಡವಾರು ಹೆಚ್ಚು ಮತದಾನವಾದಾಗ ಬಿಜೆಪಿಗೆ ವರದಾನವಾಗಲಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುಮತದಿಂದ ಗೆಲ್ಲಲಿದೆ: ವೀರಪ್ಪ ಮೊಯ್ಲಿ

ಎಕ್ಸಿಟ್ ಪೋಲ್ ಆದಾರದಲ್ಲಿ ಬೇರೆ ಬೇರೆ ಸಮಿಕ್ಷೆ ಬಂದಿದೆ. ಗ್ರಾಮೀಣರ ನಾಡಿ ಮಿಡಿತ ಅರ್ಥಮಾಡಿಕೊಂಡಗ ಬಿಜೆಪಿ ಪರ ಹೆಚ್ಚು ಒಲವು ತೋರಿಸಿದ್ದಾರೆ. ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರುಗಳ ಕಾರ್ಯಕ್ಕೆ ಜನ ಬೆಂಬಲ ವ್ಯಕ್ತವಾಗಿವೆ. ಎಕ್ಸಿಟ್ ಪೋಲ್ ಗಳ ವಿಶ್ಲೇಷಣೆ ಮಾಡಲ್ಲ, ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಸಮೀಕ್ಷೆ ಮೀರಿ ಬಿಜೆಪಿ ಪರ ಗೆಲುವುವಾಗಲಿದೆ ಎಂದರು.

click me!