
ಬೆಳಗಾವಿ (ಮೇ.11): ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ಕ್ಷೇತ್ರದ ಎಲ್ಲ ಗುರುಹಿರಿಯರು, ತಾಯಿಯ ಆಶೀರ್ವಾದ ಪಡೆದು ಮತ ಚಲಾವಣೆ ಮಾಡಿದ್ದೇನೆ. ತುಂಬ ಖುಷಿ, ನೆಮ್ಮದಿ, ಅಭಿಮಾನದಿಂದ ಮತ ಹಾಕಿದ್ದೇನೆ. ಕಳೆದ ಬಾರಿ ಕೆಲವಷ್ಟು ಒತ್ತಡಗಳಿದ್ದವು. ಈ ಬಾರಿ ತುಂಬ ಆತ್ಮವಿಶ್ವಾಸದಿಂದ ಮತ ಚಲಾವಣೆ ಮಾಡಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ಇಲ್ಲಿನ ವಿಜಯನಗರದ ಮತಗಟ್ಟೆಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಬಾರಿ ಕೆಲವಷ್ಟುಒತ್ತಡಗಳಿದ್ದವು.
ಈ ಬಾರಿ ತುಂಬ ಆತ್ಮವಿಶ್ವಾಸದಿಂದ ಮತ ಚಲಾವಣೆ ಮಾಡಿದ್ದೇನೆ. ಕುಟುಂಬದ ಎಲ್ಲ ಸದಸ್ಯರು ನನ್ನ ಬೆನ್ನಿಗೆ ನಿಂತು ಆಶೀರ್ವಾದ, ಮಾರ್ಗದರ್ಶನ ಮಾಡಿದ್ದಾರೆ. ಇದು ನನ್ನ ಜೀವನದ ಮಹತ್ವದ ಘಟ್ಟಎಂದರು. ನನ್ನನ್ನು ನನ್ನ ಮತದಾರರು ಗೆಲ್ಲಿಸುತ್ತಾರೆ. ನಾನು ಯಾರಿಗೂ ಅಪಮಾನ ಮಾಡುವುದಿಲ್ಲ. ಕೇವಲ ವಿಜಯದ ಬಗ್ಗೆ ಅಷ್ಟೇ ಮಾತನಾಡುತ್ತೇನೆ. ಕಳೆದ ಬಾರಿಗಿಂತ ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ. ಕಣದಲ್ಲಿರುವ ಎಲ್ಲರೂ ನನ್ನ ಪ್ರತಿಸ್ಪರ್ಧಿಗಳು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ನಮಗೆ ವಿಶ್ವಾಸವಿದೆ. ಕರ್ನಾಟಕದ ಜನತೆ ಖಂಡಿತವಾಗಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ ಎಂದರು.
ಸಿದ್ಧಾರ್ಥ ಸಿಂಗ್ ಗೆಲುವು ಖಚಿತ: ಸಚಿವ ಆನಂದ್ ಸಿಂಗ್
ಸಚಿವ ಸ್ಥಾನ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ, ‘ಅದು ಹೈಕಮಾಂಡ್‌ಗೆ ಬಿಟ್ಟವಿಚಾರ. ಖಂಡಿತವಾಗಿಯೂ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನಗಿದೆ ಎಂದರು. ಇದೇ ವೇಳೆ ಲಕ್ಷ್ಮೀ ಹೆಬ್ಬಾಳಕರ ಮತದಾನದ ಸಮಯದಲ್ಲಿ ಕೈ ಯಲ್ಲಿ ನೋಣವಿನಕೆರೆಯ ಅಜ್ಜಯ್ಯ ಸ್ವಾಮೀಜಿ ಪೋಟೊವನ್ನು ಪ್ರದರ್ಶಿಸಿ ಮತದಾನ ಮಾಡಿದರು. ಸಹೋದರ ಚನ್ನರಾಜ ಹಟ್ಟಿಹೊಳಿ ಸ್ಪರ್ಧಿಸಿದ್ದ ವಿಧಾನ ಪರಿಷತ್ ಚುನಾವಣೆಯ ಸಮಯದಲ್ಲಿ ಮಹಾನಗರ ಪಾಲಿಕೆಯಲ್ಲಿಯೂ ಇದೇ ಸ್ವಾಮೀಜಿ ಪೋಟೊ ಪ್ರದರ್ಶನ ಮಾಡಿದ್ದರು. ಇದು ತೀವ್ರ ಚರ್ಚೆಗೂ ಗ್ರಾಸವಾಗಿತ್ತು.
ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ ಬಹುಮತದಿಂದ ಗೆಲ್ಲಲಿದೆ: ವೀರಪ್ಪ ಮೊಯ್ಲಿ
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃಣಾಲ್ ಹೆಬ್ಬಾಳಕರ ಹಾಗೂ ಪತ್ನಿ ಡಾ. ಹಿತಾ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪತ್ನಿ ನಂದಿನ ಹಟ್ಟಿಹೊಳಿ ಸೇರಿದಂತೆ ಕುಟುಂಸ್ಥರು, ಸಹೋದರರಿಯೊಂದಿಗೆ ಆಗಮಿಸಿ ಮತದಾನ ಮಾಡಿದರು. ತುಂಬು ಗರ್ಭಿಣಿ ಆಗಿದ್ದರೂ ಹಕ್ಕು ಚಲಾಯಿಸಿದ ಸೊಸೆ ಡಾ. ಹಿತಾ ಹೆಬ್ಬಾಳ್ಕರ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಡಾ. ಹಿತಾ ಹೆಬ್ಬಾಳಕರ, ಪ್ರತಿ ಸಲ ಭದ್ರಾವತಿಯಲ್ಲಿದ್ದಾಗ ದೊಡ್ಡಪ್ಪನ ಪರ ಚುನಾವಣೆ ಮಾಡುತ್ತಿದ್ದೆ, ಈ ಸಲವೂ ಅತ್ತೆ ಲಕ್ಷ್ಮೀ ಹೆಬ್ಬಾಳ್ಕರ ಪರವಾಗಿ ಉತ್ತಮ ವಾತಾವರಣ ಇದೆ. ಇದೆ ಮೊದಲ ಸಲ ಬೆಳಗಾವಿಯಲ್ಲಿ ಮತಚಲಾಯಿಸಿದ್ದು ಖುಷಿ ಆಗಿದೆ ಎಲ್ಲ ಯುವ ಸಮುದಾಯ ಮತಚಲಾಯಿಸುವಂತೆ ಮನವಿ ಮಾಡಿದರು. ಬಳಿಕ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೋದಗಾ ಗ್ರಾಮದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.