ಇವಿಎಂ ಗೊಂದಲ, ಅನುಮಾನವೆಲ್ಲಾ ಮುಗಿದ ಅಧ್ಯಾಯ: ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌

By Kannadaprabha News  |  First Published Apr 20, 2023, 7:42 AM IST

ರಾಜ್ಯದ 16ನೇ ವಿಧಾನಸಭೆ ಚುನಾವಣಾ ಅಖಾಡ ಜಿದ್ದಾಜಿದ್ದಿನಿಂದ ಕೂಡಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದರೆ, ನ್ಯಾಯಸಮ್ಮತ, ಪಾರದರ್ಶಕ ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ.


ಸಂದರ್ಶನ: ಪ್ರಭುಸ್ವಾಮಿ ನಟೇಕರ್‌

ಬೆಂಗಳೂರು (ಏ.20): ರಾಜ್ಯದ 16ನೇ ವಿಧಾನಸಭೆ ಚುನಾವಣಾ ಅಖಾಡ ಜಿದ್ದಾಜಿದ್ದಿನಿಂದ ಕೂಡಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವಿಗೆ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದರೆ, ನ್ಯಾಯಸಮ್ಮತ, ಪಾರದರ್ಶಕ ಮತದಾನಕ್ಕೆ ಚುನಾವಣಾ ಆಯೋಗವು ಸಕಲ ಸಿದ್ಧತೆಯನ್ನು ಕೈಗೊಂಡಿದೆ. ಹೊಸ ಶಾಸಕರ ಆಯ್ಕೆಯ ಪ್ರಜಾಪ್ರಭುತ್ವ ಹಬ್ಬವನ್ನು ಯಶಸ್ವಿಗೊಳಿಸಲು ಚುನಾವಣಾ ಆಯೋಗವು ಸಮರೋಪಾದಿಯಲ್ಲಿ ಕಾರ್ಯನಿರತವಾಗಿವೆ. 

Tap to resize

Latest Videos

ಮತದಾನ ಜಾಗೃತಿ ಮೂಡಿಸಿರುವುದರ ಜತೆಗೆ ಆಯೋಗಕ್ಕೆ ಅಕ್ರಮ ತಡೆಯುವುದು ಸಹ ದೊಡ್ಡ ಸವಾಲು. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿನ ಅಕ್ರಮ ಜಪ್ತಿಗೆ ಹೋಲಿಸಿದರೆ ಈ ಬಾರಿ ಮೂರು ಪಟ್ಟು ಹೆಚ್ಚಳವಾಗಿದೆ. ನ್ಯಾಯಸಮ್ಮತ, ಪಾರದರ್ಶಕ ಚುನಾವಣೆ ನಡೆಸುವ ಹೊಣೆಯನ್ನು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರು ಹೊತ್ತಿದ್ದಾರೆ. ಮುಖ್ಯ ಚುನಾವಣಾಧಿಕಾರಿಯಾದ ಬಳಿಕ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಜವಾಬ್ದಾರಿ ಹೊತ್ತಿರುವ ಮನೋಜ್‌ ಕುಮಾರ್‌ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್‌ನ ಬೈರತಿ ಸುರೇಶ್‌ ಆಸ್ತಿ 649 ಕೋಟಿ: ಸಿಎಂ ಬೊಮ್ಮಾಯಿ ಆಸ್ತಿ 3 ಪಟ್ಟು ಹೆಚ್ಚಳ

* ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಹೊಣೆ ಹೊತ್ತಿದ್ದೀರಿ. ಇದು ನಿಮಗೆ ದೊಡ್ಡ ಸವಾಲು ಅಲ್ಲವೇ?
ಚುನಾವಣೆ ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಪ್ರಜಾಪ್ರಭುತ್ವ ಹಬ್ಬ. ಇದನ್ನು ಯಶಸ್ವಿಗೊಳಿಸಲು ಒಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರು ಕೈ ಜೋಡಿಸಿ ತಂಡವಾಗಿ ಕೆಲಸ ಮಾಡಿದರೆ ಮಾತ್ರ ಹಬ್ಬವನ್ನು ಸಫಲವಾಗಲಿದೆ. ಮೊದಲ ಬಾರಿಗೆ ಚುನಾವಣೆ ಜವಾಬ್ದಾರಿ ತೆಗೆದುಕೊಂಡಾಗ ಕೆಲವು ಸವಾಲುಗಳು ಮುಂದಿದ್ದವು. ಆದರೆ, ನಮ್ಮ ತಂಡದ ಸಹಕಾರದಿಂದಾಗಿ ಆ ಸವಾಲುಗಳೇನು ದೊಡ್ಡದಾಗಿ ಕಾಣಿಸಲಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿವೆ.

* ಮೇ 10ರಂದು ನಡೆಯುವ ಮತದಾನಕ್ಕೆ ಆಯೋಗದ ಸಿದ್ಧತಾ ಕಾರ್ಯಗಳು ಹೇಗಿವೆ?
ಈಗಾಗಲೇ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಅವಧಿ ಮುಕ್ತಾಯಗೊಂಡಿದೆ. ಮತದಾರರ ಅಂತಿಮ ಪಟ್ಟಿಯನ್ನು ಈ ವಾರದಲ್ಲಿಯೇ ಬಿಡುಗಡೆ ಮಾಡಲಾಗುವುದು. ಅವುಗಳನ್ನು ಮುದ್ರಣಗೊಳಿಸಿ ರಾಜಕೀಯ ಪಕ್ಷಗಳಿಗೆ ಹಂಚಿಕೆ ಮಾಡಲಾಗುತ್ತದೆ. ಸಾರ್ವಜನಿಕರ ಮಾಹಿತಿಗೂ ಪ್ರಕಟಣೆ ಮಾಡುತ್ತೇವೆ. ಮತದಾನಕ್ಕೆ ಮತಗಟ್ಟೆಗಳ ಸಿದ್ಧತೆಯೂ ಪೂರ್ಣಗೊಂಡಿವೆ. ಮತಗಟ್ಟೆಯಲ್ಲಿ ಬೇಕಾದ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಮುಗಿದಿವೆ. ಮತಗಟ್ಟೆಗಳ ಕುರಿತು ಕೇಂದ್ರ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲಿದೆ.

* ಪ್ರತಿ ಚುನಾವಣೆ ಸಮಯದಲ್ಲಿಯೂ ರಾಜಕೀಯ ಪಕ್ಷಗಳು ಇವಿಎಂ ಕುರಿತು ಅನುಮಾನ ವ್ಯಕ್ತಪಡಿಸುತ್ತವಲ್ಲ?
ಗೊಂದಲ ಸೃಷ್ಟಿಸಬೇಕು ಎಂದು ಭಾವಿಸಿದರೆ ಅದನ್ನು ಸೃಷ್ಟಿಸುವುದು ದೊಡ್ಡ ವಿಷಯವಲ್ಲ. ಆದರೆ, ಇವಿಎಂ ಗೊಂದಲ, ಅನುಮಾನಗಳೆಲ್ಲಾವು ಮುಗಿದ ಅಧ್ಯಾಯ. ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿಯ ಚುನಾವಣೆಯಲ್ಲಿ ಹೊಸ ಇವಿಎಂಗಳನ್ನು ಬಳಕೆ ಮಾಡಲಾಗುತ್ತಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಎಂ3 ಮತಯಂತ್ರಗಳನ್ನು ಕಳುಹಿಸಿಕೊಡಲಾಗಿದೆ. ಹೈದರಾಬಾದ್‌ನಿಂದ ಹೊಸ ಮತಯಂತ್ರಗಳನ್ನು ತರಿಸಿ ಕಳುಹಿಸಿಕೊಡಲಾಗಿದೆ. ರಾಜಕೀಯ ಪಕ್ಷಗಳ ಮುಂದೆಯೇ ಯಾವ ಮತಗಟ್ಟೆಗೆ ಯಾವ ಇವಿಎಂಗಳು ಹೋಗಲಿದೆ ಎಂಬುದನ್ನು ತಿಳಿಯಪಡಿಸಲಾಗಿದೆ. ಮಾತ್ರವಲ್ಲ, ಇವಿಎಂಗಳಿಗಿರುವ ವಿಶೇಷ ಗುರುತಿನ ಸಂಖ್ಯೆಗಳನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗಿದೆ.

* ಚುನಾವಣೆ ಅಕ್ರಮಗಳನ್ನು ತಡೆಯಲು ಮತ್ತಷ್ಟುಕಠಿಣ ಕ್ರಮಗಳನ್ನೇನಾದರೂ ಕೈಗೊಳ್ಳಲಾಗಿದೆಯೇ?
ಚುನಾವಣಾ ಅಕ್ರಮಗಳನ್ನು ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ತನಿಖಾ ಸಂಸ್ಥೆಯಲ್ಲಿರುವ ಚುನಾವಣಾ ಸಿಬ್ಬಂದಿಗೆ ತರಬೇತಿಯನ್ನು ಸಹ ನೀಡಲಾಗಿದೆ. ಯಾವ ರೀತಿಯಲ್ಲಿ ತಪಾಸಣೆ ಮಾಡಬೇಕು. ಹೇಗೆ ವಾಹನಗಳನ್ನು ನಿಲ್ಲಿಸಿ ವಿಚಾರಣೆ ಮಾಡಬೇಕು? ಕಾನೂನು, ಕಾಯ್ದೆಗಳು ಏನು ಹೇಳುತ್ತವೆ ಎಂಬುದೆಲ್ಲಾ ವಿಚಾರಗಳ ಕುರಿತು ತರಬೇತಿ ನೀಡಲಾಗಿದೆ. ಕೇಂದ್ರದಿಂದಲೂ ತಂಡಗಳು ರಾಜ್ಯಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡಿವೆ. ಚುನಾವಣೆಯಲ್ಲಿ ಅಕ್ರಮಗಳು ನಡೆಯದಂತೆ ಸಾಕಾಷ್ಟುನಿಗಾವಹಿಲಾಗುತ್ತಿದೆ.

* ರಾಜ್ಯದ ಗಡಿ ಭಾಗದಲ್ಲಿ ನಕಲಿ ಮತದಾರರನ್ನು ಕರೆತರಲಾಗುತ್ತದೆ ಎಂಬ ಆರೋಪಗಳು ಕೇಳಿಬಂದಿವೆಯಲ್ಲ?
ಮತದಾನ ಮಾಡಲು ಬರುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಕೆಲವರು ದುಡ್ಡುಕೊಟ್ಟು ಕರೆದುಕೊಂಡು ಬರುವವರ ಮೇಲೆ ಆಯೋಗವು ನಿಗಾವಹಿಸಿದೆ. ಕಲಬುರಗಿ, ಯಾದಗಿರಿ ಸೇರಿದಂತೆ ರಾಜ್ಯದ ಗಡಿಭಾಗದಲ್ಲಿ ಸಾಕಾಷ್ಟುನೈಪುಣ್ಯತೆ ಇರುವ ತಂಡಗಳೇ ಕೆಲಸ ಮಾಡುತ್ತಿವೆ. ಅವು ತಮ್ಮದೇ ಶೈಲಿಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ.

* ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವದಂತಿಗಳ ನಿಯಂತ್ರಣ ಸಾಧ್ಯವಿಲ್ಲವೇ?
ಇದಕ್ಕಾಗಿ ಆಯೋಗದಲ್ಲಿ ವಿಶೇಷ ತಂಡವೊಂದು ಪ್ರತ್ಯೇಕವಾಗಿ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಲಾಗಿದೆ. ಧರ್ಮ, ಜಾತಿ, ಪ್ರಚೋದನಕಾರಿ ಹೇಳಿಕೆಗಳು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಕ್ರಮ ಶಿಕ್ಷೆಯೂ ಆಗಲಿದೆ.

* ಚುನಾವಣೆಯಲ್ಲಿ ಹಣಬಲದ ಪಾತ್ರವೇ ದೊಡ್ಡದಾಗಿರುವಂತಿದೆ?
 ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಬಾರದು. ಮತದಾನ ಸಂವಿಧಾನದಲ್ಲಿ ನೀಡಿರುವ ವಿಶೇಷ ಹಕ್ಕು. ಇದನ್ನು ಮಾರಾಟ ಮಾಡಿಕೊಳ್ಳಬಾರದು. ಹೊಸ ಶಾಸಕರನ್ನು ಆಯ್ಕೆ ಮಾಡುವ ಅಧಿಕಾರ ಪ್ರತಿಯೊಬ್ಬ ಮತದಾರರಿಗೂ ಇದೆ. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಚುನಾವಣಾ ಆಯೋಗವು ಸಹ ಎಲ್ಲ ರೀತಿಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮತದಾರರು ಹಣ ತೆಗೆದುಕೊಂಡು ಮತಹಾಕುವುದಿಲ್ಲ ಎಂದು ಪಣತೊಟ್ಟರೆ ಹಣ ಬಲವನ್ನು ತಡೆಯಬಹುದು. ಮತದಾನ ಮಹತ್ವದ ಬಗ್ಗೆ ಎಲ್ಲರೂ ಅರಿತು ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಬೇಕು.

* ಬೆಂಗಳೂರು ಸೇರಿದಂತೆ ಹಲವೆಡೆ ಕಳೆದ ಚುನಾವಣೆಯಲ್ಲಿ ಕಡಿಮೆ ಶೇಕಡವಾರು ಮತದಾನವಾಗಿದೆ. ಈ ಬಾರಿ ಶೇಕಡಾವಾರು ಹೆಚ್ಚಳಕ್ಕೆ ಆಯೋಗ ಕೈಗೊಂಡಿರುವ ಕ್ರಮಗಳೇನು?
ಶೇಕಡಾವಾರು ಮತದಾನ ಪ್ರಮಾಣ ಕಡಿಮೆಯಾಗಿರುವ ಕ್ಷೇತ್ರಗಳನ್ನು ಚುನಾವಣಾ ಆಯೋಗದ ಸಿಬ್ಬಂದಿ ಗುರುತಿಸಿದ್ದು, ಅಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸುಮಾರು 77 ಕ್ಷೇತ್ರಗಳನ್ನು ಗುರುತಿಸಲಾಗಿದೆ. ಕಡಿಮೆ ಮತದಾನ ಪ್ರಮಾಣವಾಗಿರುವಂತಹ ಕ್ಷೇತ್ರಗಳಿಗೆ ತೆರಳಿ ಅಲ್ಲಿನ ಮತದಾರರ ಜತೆ ಸಮಾಲೋಚನೆ ನಡೆಸಿ ಮನವೊಲಿಕೆ ಮಾಡಲಾಗಿದೆ. ಕಳೆದ ಬಾರಿ ಯಾವ ಕಾರಣಕ್ಕಾಗಿ ಮತದಾನ ಮಾಡಿಲ್ಲ ಎಂಬ ಕಾರಣವನ್ನು ತಿಳಿದುಕೊಳ್ಳುವ ಕೆಲಸ ಮಾಡಲಾಗಿದ್ದು, ವಿಶ್ವಾಸಕ್ಕೆ ತೆಗೆದುಕೊಂಡು ಈ ಬಾರಿ ಮತದಾನ ಮಾಡುವಂತೆ ಸಲಹೆ ಮಾಡಲಾಗಿದೆ. ಇದಲ್ಲದೇ, ನಗರ ಪ್ರದೇಶದಲ್ಲಿನ ಮತಗಟ್ಟೆಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮತದಾನ ಪ್ರಮಾಣ ಹೆಚ್ಚಳಕ್ಕೆ ಯಾವೆಲ್ಲಾ ಪ್ರಯತ್ನಗಳನ್ನು ಮಾಡಬಹುದೋ, ಆ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ.

* ಚುನಾವಣೆ ವೇಳೆ ರಾಜಕೀಯ ಪಕ್ಷಗಳ ಪರವಾಗಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಮತ್ತು ಕೆಲವು ಅಧಿಕಾರಿಗಳ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ದೂರುಗಳು ಹೆಚ್ಚುತ್ತಿವೆ?
ರಾಜಕೀಯ ಪಕ್ಷಗಳು ಸೇರಿದಂತೆ ಯಾರೇ ದೂರು ನೀಡಿದರೂ ಆಯೋಗವು ಅದನ್ನು ಸ್ವೀಕರಿಸಲಿದೆ. ದೂರಿನ ಸತ್ಯಾಸತ್ಯತೆ ಕುರಿತು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುವುದು. ಕೆಲವು ಬಾರಿ ದೂರುಗಳು ಸಹ ಉದ್ದೇಶ ಪೂರ್ವಕವಾಗಿಯೂ ಇರುತ್ತವೆ. ಹೀಗಾಗಿ ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕಾಗುತ್ತದೆ. ಒಂದು ವೇಳೆ ಯಾವುದೇ ಅಧಿಕಾರಿ ರಾಜಕೀಯ ಪಕ್ಷಗಳ ಪರವಾಗಿ ಕೆಲಸ ಮಾಡುವುದಾಗಲಿ ಅಥವಾ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡು ಬಂದರೆ ಮುಲಾಜಿಲ್ಲದೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಬೆಂಗಳೂರಿನಲ್ಲಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ ಭರಾಟೆ: ಕೆಲವರಿಂದ ಭರ್ಜರಿ ರೋಡ್‌ ಶೋ

* ಚುನಾವಣಾ ಅಕ್ರಮದ ಬಗ್ಗೆ ಕೆಲವು ಬಾರಿ ಸುಳ್ಳು ಮಾಹಿತಿಯೂ ಸಿಗುತ್ತದೆ. ಅದರ ಪತ್ತೆಗೆ ಯಾವ ರೀತಿಯ ಕಾರ್ಯಾಚರಣೆ ಮಾಡಲಾಗುತ್ತದೆ?
ನಿಜ. ಒಂದು ಕಡೆ ದುಡ್ಡು ಹಂಚಲಾಗುತ್ತಿದೆ ಎಂದು ಮಾಹಿತಿ ಬಂದಾಗ ಅಲ್ಲಿಗೆ ಸಿಬ್ಬಂದಿ ಹೋದರೆ, ಮತ್ತೊಂದು ಕಡೆ ಅಕ್ರಮ ಎಸಗಲಾಗುತ್ತದೆ. ಇದು ಆಯೋಗಕ್ಕೆ ಸವಾಲಿನ ಕೆಲಸವೂ ಆಗಿದೆ. ಇದಕ್ಕಾಗಿ ಪ್ರತಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಸಹಾಯ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚಿಸಲಾಗಿದೆ. ಹಣ ಹಂಚಿಕೆ, ಮದ್ಯ ಸರಬರಾಜು ಸೇರಿದಂತೆ ಅಕ್ರಮಗಳಿಗೆ ಸಹಾಯ ಮಾಡುವವರ ಮನವೊಲಿಕೆ ಮಾಡಿ, ಆಯೋಗಕ್ಕೆ ಸಹಾಯ ಮಾಡುವಂತೆ ತಿಳಿಸಬೇಕು. ಅಕ್ರಮ ಎಸಗುವವರ ಪರವಾಗಿ ಕೆಲಸ ಮಾಡುವ ಬದಲು ನಮಗೆ ಸಹಾಯ ಮಾಡಿ ಎಂದು ತಿಳಿಸುವಂತೆ ನಿರ್ದೇಶನ ನೀಡಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!