ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್.ಸುರೇಶ್ (ಬೈರತಿ ಸುರೇಶ್) .648.85 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯಿಂದ ನಾಮಪತ್ರ ಸಲ್ಲಿಸಿದ್ದು, ಅವರು ತಮ್ಮ ಅಫಿಡೆವಿಟ್‌ನಲ್ಲಿ . 5.98 ಕೋಟಿ ಮೌಲ್ಯದ ಚರಾಸ್ತಿ, 22.95 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 28.93 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.
ಬೆಂಗಳೂರು (ಏ.20): ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್.ಸುರೇಶ್ (ಬೈರತಿ ಸುರೇಶ್) .648.85 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ನಾಮಬಲದ ಹಿನ್ನೆಲೆಯಲ್ಲಿ ಮಂಗಳವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಅವರು ತಮ್ಮ ಅಫಿಡವೀಟ್‌ನಲ್ಲಿ 648.85 ಕೋಟಿ ಆಸ್ತಿ ಘೋಷಣೆ ಮಾಡಿದ್ದು, ಆ ಪೈಕಿ .64.08 ಕೋಟಿ ಚರಾಸ್ತಿ ಮತ್ತು .584.05 ಕೋಟಿ ಸ್ಥಿರಾಸ್ತಿಯಾಗಿದೆ. 2018ರಲ್ಲಿ ಬಿ.ಎಸ್.ಸುರೇಶ್ ಆಸ್ತಿ .416.68 ಕೋಟಿಗಳಾಗಿತ್ತು. ಕಳೆದ 5 ವರ್ಷಗಳಲ್ಲಿ 232.08 ಕೋಟಿ ಆಸ್ತಿ ಏರಿಕೆಯಾಗಿದೆ.
ಸದ್ಯ ಸುರೇಶ್ ಬಳಿ 4.58 ಕೆ.ಜಿ ಚಿನ್ನಾಭರಣ, 60 ಕೆ.ಜಿ ಬೆಳ್ಳಿ ವಸ್ತುಗಳಿವೆ. .5.58 ಕೋಟಿ ಮೌಲ್ಯದ 13 ವಾಹನಗಳನ್ನು ಅವರು ಮತ್ತು ಕುಟುಂಬದವರು ಹೊಂದಿದ್ದಾರೆ. ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ .45.70 ಕೋಟಿ ಸಾಲ ನೀಡಿದ್ದಾರೆ. 2018ರಲ್ಲಿ .41.68 ಕೋಟಿ ಸಾಲ ಹೊಂದಿದ್ದ ಬಿ.ಎಸ್.ಸುರೇಶ್, ಸದ್ಯ 114.86 ಕೋಟಿ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಸುರೇಶ್ ವಿರುದ್ಧ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣ ಪತ್ರ ಪಡೆಯದೆ ಹೆಚ್ಚುವರಿಯಾಗಿ 15 ಮೀ. ಎತ್ತರದ ಕಟ್ಟಡ ನಿರ್ಮಾಣ ಕುರಿತಂತೆ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
undefined
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ 24 ಗಂಟೆಯಲ್ಲೇ ಬದಲು
ಸಿಎಂ ಬೊಮ್ಮಾಯಿ ಆಸ್ತಿ 3 ಪಟ್ಟು ಹೆಚ್ಚಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವಿಯಿಂದ ನಾಮಪತ್ರ ಸಲ್ಲಿಸಿದ್ದು, ಅವರು ತಮ್ಮ ಅಫಿಡೆವಿಟ್‌ನಲ್ಲಿ . 5.98 ಕೋಟಿ ಮೌಲ್ಯದ ಚರಾಸ್ತಿ, . 22.95 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು . 28.93 ಕೋಟಿ ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಅವರ ಕೌಟುಂಬಿಕ ಆಸ್ತಿ ಮೌಲ್ಯ 50.84 ಎಂದು ಘೋಷಿಸಿಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಅವರು 5.79 ಕೋಟಿ ಸಾಲವನ್ನೂ ಹೊಂದಿದ್ದಾರೆ. ಪತ್ನಿ ಚೆನ್ನಮ್ಮ ಅವರಲ್ಲಿ . 50 ಸಾವಿರ ನಗದು, . 78.83 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿದಂತೆ . 1.14 ಕೋಟಿ ಮೌಲ್ಯದ ಚರಾಸ್ತಿಯಿದೆ. ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ .19.20 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು .1.57 ಕೋಟಿ ಮೌಲ್ಯದ ಚರಾಸ್ತಿ ಯಿದೆ. ಮಗಳ ಹೆಸರಿನಲ್ಲಿ .1.28 ಕೋಟಿ ಮೌಲ್ಯದ ಚರಾಸ್ತಿಯಿದೆ.
ಮೂರು ಪಟ್ಟು ಹೆಚ್ಚಳ: 2018ರ ಚುನಾವಣೆಯಲ್ಲಿ ಅವರು .10.19 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. 5 ವರ್ಷಗಳ ಅವಧಿಯಲ್ಲಿ ಇವರ ವೈಯಕ್ತಿಕ ಆಸ್ತಿ ಮೌಲ್ಯ ಸುಮಾರು ಮೂರು ಪಟ್ಟು ಹೆಚ್ಚಿದಂತಾಗಿದೆ.
ಜೆಡಿಎಸ್‌ನ ನಾರಾಯಣರಾಜು 416 ಕೋಟಿ ಕುಳ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿರುವ ಕೆ.ನಾರಾಯಣರಾಜು ಅವರು ತಮ್ಮ ಕುಟುಂಬದ ಬಳಿ .416.79 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಒಟ್ಟು ಆಸ್ತಿ ಪೈಕಿ .38.13 ಕೋಟಿ ಮೌಲ್ಯದ ಚರಾಸ್ತಿ ಮತ್ತು .378.66 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ನಾರಾಯಣರಾಜು ಬಳಿ .1.22 ಕೋಟಿ ಮೌಲ್ಯದ ವಾಹನಗಳು, .83 ಲಕ್ಷ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ .25.22 ಕೋಟಿ ಮೌಲ್ಯದ ಚರಾಸ್ತಿ ಇದೆ.
ಇನ್ನು .12.57 ಕೋಟಿ ಮೌಲ್ಯದ ಕೃಷಿಯೇತರ ಭೂಮಿ, .22 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡಗಳು ಸೇರಿದಂತೆ ಒಟ್ಟು .345.78 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ ಇವರಿಗೆ .92.59 ಕೋಟಿ ಸಾಲವಿದೆ. ಇವರ ಪತ್ನಿ ಅನುರಾಧಾ ಅವರ ಬಳಿ .31.33 ಲಕ್ಷ ಮೌಲ್ಯದ ವಾಹನಗಳು, .3.78 ಕೋಟಿ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ ಒಟ್ಟು .10.08 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. .29.30 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೇ .17.05 ಕೋಟಿ ಸಾಲವೂ ಇದೆ. ಇನ್ನು ಅವರ ಮಕ್ಕಳ ಬಳಿ ಸುಮಾರು .3 ಕೋಟಿ ಮೌಲ್ಯದ ಚರಾಸ್ತಿ ಇದೆ. ನಾರಾಯಣರಾಜು ಕುಟುಂಬ .15.73 ಕೋಟಿ ಸರ್ಕಾರಿ ತೆರಿಗೆ ಬಾಕಿ ಉಳಿಸಿಕೊಂಡಿದೆ.
ಪರಂ ಕುಟುಂಬದ ಆಸ್ತಿ 21.24 ಕೋಟಿ: ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ರವರು ತಮ್ಮ ಬಳಿ 4 ಕೋಟಿ 81 ಸಾವಿರ ಮೌಲ್ಯದ ಚರಾಸ್ತಿ ಹೊಂದಿದ್ದು,ತಮ್ಮ ಪತ್ನಿ ಕನ್ನಿಕಾಪರಮೇಶ್ವರಿ ಹೆಸರಲ್ಲಿ 5.63 ಕೋಟಿ ಚರಾಸ್ತಿ ಇದೆ. ಸ್ತಿರಾಸ್ತಿಗಳ ಪೈಕಿ 5.88 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಪತ್ನಿ ಕನ್ನಿಕಾ ಪರಮೇಶ್ವರಿ ಹೆಸರಲ್ಲಿ 5.73 ಕೋಟಿ ಸ್ತಿರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟಾರೆ ಅವರ ಕೌಟುಂಬಿಕ ಆಸ್ತಿ ಮೌಲ್ಯ 21.24ಕೋಟಿ ರು. ಆಗಿದೆ. ಹೊಣೆಗಾರಿಕೆಯ ಪೈಕಿ 4.88 ಕೋಟಿ ಸಾಲವನ್ನು ಹೊಂದಿದ್ದು, ಪತ್ನಿ 4.34 ಕೋಟಿ ಸಾಲಕ್ಕೆ ಹೊಣೆಗಾರರಾಗಿದ್ದಾರೆ. ತಮ್ಮ ಮೂಲ ವೃತ್ತಿ ಎಲ್‌ಐಸಿ ಏಜೆಂಟ್ ಹಾಗೂ ಕೃಷಿ ಸಲಹೆ ಗಾರರಾಗಿ ಘೋಷಿಸಿಕೊಂಡಿದ್ದು, ಪತ್ನಿ ಕಲಾವಿದೆ ಎಂದು ನಮೂದಿಸಿದ್ದಾರೆ. ಪರಮೇಶ್ವರ್ ಅವರ ಬಳಿ ಟಾಟಾ ಸಫಾರಿ, ಸ್ಕೋಡಾ ಆರ್‌ಎಸ್6, ಕಾರುಗಳಿವೆ.
ಶೆಟ್ಟರ್ ಬಳಿ 13 ಕೋಟಿ ಆಸ್ತಿ: ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಏಳನೆಯ ಬಾರಿಗೆ ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದು, ಉಮೇದುವಾರಿಕೆಯೊಂದಿಗೆ ಸಲ್ಲಿಸಿದ ಅಫಿಡ್‌ವಿಟ್‌ನಲ್ಲಿ .12.35 ಕೋಟಿ, ಪತ್ನಿ ಹೆಸರಲ್ಲಿ .1.16 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ .11.52 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಈ ಸಲ .85 ಲಕ್ಷಕ್ಕೂ ಅಧಿಕ ಆಸ್ತಿ ಜಾಸ್ತಿಯಾಗಿದೆ. ಆದರೆ ಅವರ ಆಫಿಡವಿಟ್‌ನಲ್ಲಿ ಅವರ ಬಳಸುವ ವಾಹನಗಳ ಕುರಿತು ಯಾವುದೇ ಮಾಹಿತಿ ಇಲ್ಲ.
ಕದಲೂರ್ ಉದಯ್ ಬಳಿ 102.35 ಆಸ್ತಿ: ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕದಲೂರು ಉದಯ್ 71.38 ಕೋಟಿ ರು. ಆಸ್ತಿ ಹೊಂದಿದ್ದಾರೆ. ಇದರಲ್ಲಿ 22.09 ಕೋಟಿ ರು. ಚರಾಸ್ತಿ ಹಾಗೂ 49.28 ಕೋಟಿ ರು. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಬಳಿ ಸ್ಥಿರಾಸ್ತಿ 30.05 ಕೋಟಿ ರು. ಹಾಗೂ 93.44 ಲಕ್ಷ ರು. ಚರಾಸ್ತಿ ಇದೆ. ಉದಯ್ ಬಳಿ ಫಾರ್ಚುನರ್, ಇನೋವಾ ಕ್ರಿಸ್ಟಾ, ಪೋರ್ಸೆ, ಸ್ಕಾರ್ಪಿಯೋ ಕಾರು, ಎರಡು ಆಕ್ಟೀವಾ 125 ಬೈಕ್, 1.89 ಕೋಟಿ ರು. ಮೌಲ್ಯದ 3 ಕೆಜಿ 496 ಗ್ರಾಂ ಚಿನ್ನಾಭರಣ ಇದೆ. 3.22 ಕೋಟಿ ರು. ಸಾಲವಿದೆ. ಇವರ ಮೇಲೆ ಮೂರು ಪ್ರಕರಣಗಳು ಬಾಕಿ ಇವೆ.
ಚಿಕ್ಕರೇವಣ್ಣ ದಂಪತಿ ಒಟ್ಟು ಆಸ್ತಿ 82.05 ಕೋಟಿ ರು.: ಬೆಳಗಾವಿ ಜಿಲ್ಲೆ ರಾಮದುರ್ಗ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಉದ್ಯಮಿ ಚಿಕ್ಕರೇವಣ್ಣ ಇದೇ ಪ್ರಥಮ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಬುಧವಾರ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇವರು . ಒಟ್ಟು 54.61 ಕೋಟಿ ಆಸ್ತಿಯುಳ್ಳ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. .27.74 ಕೋಟಿ ಮೌಲ್ಯದ ಚರಾಸ್ತಿ ಮತ್ತು . 26.87 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಲ್ಲದೇ, ಪತ್ರನಿ ಹೆಸರಿನಲ್ಲಿ . 25.48 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು . 1.96 ಕೋಟಿ ಮೌಲ್ಯದ ಚರಾಸ್ತಿ ಇದೆ. ನಾಮಪತ್ರ ಸಲ್ಲಿಕೆ ವೇಳೆ ಅವರು ಸಲ್ಲಿಸಿದ ಆಸ್ತಿ ವಿವರದಲ್ಲಿ ಪತ್ನಿ ಹೆಸರಿನ ಆಸ್ತಿ ಸೇರಿ ಒಟ್ಟು . 82.05 ಕೋಟಿ ಆಸ್ತಿ ವಿವರವನ್ನು ಅವರು ಘೋಷಿಸಿಕೊಂಡಿದ್ದಾರೆ.
ಮಧು 69.50 ಕೋಟಿ ರು.ಒಡೆಯ: ಮಾಜಿ ಶಾಸಕ ಮಧು ಬಂಗಾರಪ್ಪ ಅವರು .69.50 ಕೋಟಿ ಆಸ್ತಿ ಹೊಂದಿದ್ದು,ನಗದು, ವಾಹನ, ಚಿನ್ನಾಭರಣ ಚರಾಸ್ತಿ .27.80 ಕೋಟಿ, ಮನೆ, ನಿವೇಶನ, ತೋಟ, ಜಮೀನು ಸೇರಿ .41.50 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಆದರೆ, ಇವರ ಸಾಲದ ಮೊತ್ತ .16.38 ಕೋಟಿಯಿಂದ .26 ಕೋಟಿಗಳಿಗೆ ಹೆಚ್ಚಾಗಿದೆ. ಇವರ ಬಳಿ .1.37 ಕೋಟಿ ಇದೆ. 3.75 ಕೆ.ಜಿ. ಚಿನ್ನಾಭರಣ, 25 ಕೆಜಿ ಬೆಳ್ಳಿ ಆಭರಣಗಳು ಇವೆ. ಇವರು ಹಿಂದಿನ ಚುನಾವಣೆಯಲ್ಲಿ .66 ಕೋಟಿ ಆಸ್ತಿ ಘೋಷಿಸಿಕೊಂಡಿದ್ದು, ಇಲ್ಲಿವರೆಗೆ .3 ಕೋಟಿ ಆಸ್ತಿ ಹೆಚ್ಚಳವಾಗಿದೆ.
ಕುಮಾರ್ ಬಂಗಾರಪ್ಪ ಬಳಿ 65.30 ಕೋಟಿ ಆಸ್ತಿ: ಸೊರಬ ಕ್ಷೇತ್ರ ಶಾಸಕ ಕುಮಾರ್ ಬಂಗಾರಪ್ಪ ಅವರು .65.30 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ. ನಗದು, ಕಾರು, ಚಿನ್ನಾಭರಣ ಸೇರಿ .3 ಕೋಟಿ ಚರಾಸ್ತಿ, ಮನೆ, ನಿವೇಶನ, ತೋಟ, ಜಮೀನು ಸೇರಿ .62.29 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‌ನಲ್ಲಿ .1.12 ಕೋಟಿ ಸಾಲವಿದೆ. 2018ರಲ್ಲಿ ಇವರಿಗೆ .27.68 ಕೋಟಿ ಆಸ್ತಿ ಇತ್ತು. ಆಸ್ತಿ ಕಳೆದ ಐದು ವರ್ಷದಲ್ಲಿ ದ್ವಿಗುಣಗೊಂಡಿದೆ.
ಹೂವಿನಹಡಗಲಿ ಕೃಷ್ಣನಾಯ್ಕ 40 ಕೋಟಿ ರು.ಆಸ್ತಿ ಒಡೆಯ: ಇಲ್ಲಿನ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ 2 ಪ್ರತಿ ಸೇರಿದಂತೆ ಒಟ್ಟು 4 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ 24,75,12,103 ರು.ಗಳು ಚರಾಸ್ತಿ ಹೊಂದಿದ್ದು, ಪತ್ನಿಯ ಹೆಸರಿನಲ್ಲಿ 34,75,532 ರು.ಗಳು ಸೇರಿ ಒಟ್ಟು 25,09,87,635 ರುಗಳ ಚರಾಸ್ತಿ ಇದೆ. ಜತೆಗೆ 15.30 ಕೋಟಿ ರು.ಗಳ ಸ್ಥಿರಾಸ್ತಿ ಸೇರಿದಂತೆ ಒಟ್ಟು 40,39,87,635 ರುಗಳ ಒಟ್ಟು ಆಸ್ತಿ ಒಡೆಯರಾಗಿದ್ದಾರೆ. ಜತೆಗೆ 16,93,46,692 ರುಗಳ ಸಾಲವನ್ನು ಹೊಂದಿದ್ದಾರೆ.
ಏ.28ರಿಂದ ರಾಜ್ಯದಲ್ಲಿ 1 ವಾರ ಮೋದಿ 20+ ಸಮಾವೇಶ?: 1-2 ದಿನದಲ್ಲಿ ವೇಳಾಪಟ್ಟಿ ಅಂತಿಮ ಸಂಭವ
ಅಶೋಕ್ ರೈಗೆ ಆಸ್ತಿ 40 ಕೋಟಿ, ಸಾಲ 56 ಕೋಟಿ: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಉದ್ಯಮಿಯಾಗಿದ್ದು, 2,34,47,389 ಕೋಟಿ ರು. ಚರಾಸ್ತಿ ಹಾಗೂ 37,87,19,385 ಕೋಟಿ ರು. ಸ್ಥಿರಾಸ್ತಿ ಯನ್ನು ಹೊಂದಿದ್ದು, ಒಟ್ಟು 40,21,66,774 ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಶೋಕ್ ರೈ 252 ಗ್ರಾಂ ಚಿನ್ನ ಹೊಂದಿದ್ದರೆ, ಅವರ ಪತ್ನಿ ಬಳಿ 2207.386 ಗ್ರಾಂ ಚಿನ್ನ, 1383 ಗ್ರಾಂ ಬೆಳ್ಳಿ ಇದೆ. ಅಶೋಕ್ ರೈ 56,35,73,624 ಕೋಟಿ ರು. ಸಾಲವಿದೆ ಎಂದು ತಮ್ಮ ಅಫಿಡೆವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಚರಂತಿಮಠ ಕುಟುಂಬದ ಒಟ್ಟು ಆಸ್ತಿ .16 ಕೋಟಿ: ಬಾಗಲಕೋಟೆ: ಶಾಸಕ ವೀರಣ್ಣ ಚರಂತಿಮಠ ಅವರು ತಮ್ಮ ತಮ್ಮ ಉಮೇದುವಾರಿಕೆಯಲ್ಲಿ ಅವರ ಹೆಸರಿನಲ್ಲಿ 12.97 ಲಕ್ಷ ರೂ.ಗಳ ಚರಾಸ್ತಿ, ತಮ್ಮ ಕುಟುಂಬದಿಂದ 54.37 ಲಕ್ಷ ರೂ.ಗಳ ಚರಾಸ್ತಿ ಇದೆ ಎಂದು ಘೋಷಿಸಿಕೊಂಡಿದ್ದು, 9.34 ಕೋಟಿ ರೂ.ಗಳ ಸ್ಥಿರಾಸ್ತಿ ಡಾ.ವೀರಣ್ಣ ಚರಂತಿಮಠ ಅವರ ಹೆಸರಿನಲ್ಲಿದೆ. ಅಲ್ಲದೆ, ತಮ್ಮ ಕುಟುಂಬದ ಸ್ಥಿರಾಸ್ತಿ 6.92 ಕೋಟಿ ರೂ. ಹಾಗೂ ತಮ್ಮ ಹೆಸರಿನಲ್ಲಿ 59.40 ಲಕ್ಷ ರೂ.ಗಳ ಸಾಲ, ಕುಟುಂಬದ ಹೆಸರಿನಲ್ಲಿ 7.20 ಲಕ್ಷ ರೂ.ಗಳ ಸಾಲ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 2018ರಲ್ಲಿ ಶಾಸಕ ಚರಂತಿಮಠ ಅವರ ಹೆಸರಿನಲ್ಲಿ 6.65 ಕೋಟಿ ರೂ.ಗಳ ಚರಾಸ್ತಿ, ಕುಟುಂಬದ ಹೆಸರಿನಲ್ಲಿ 5.09 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.