ರಾವಣ ಹುಟ್ಟಿಬಂದರೂ ಬಜರಂಗದಳ ಬ್ಯಾನ್‌ ಅಸಾಧ್ಯ: ಅರವಿಂದ ಲಿಂಬಾವಳಿ

By Kannadaprabha News  |  First Published May 5, 2023, 7:58 AM IST

 ಕಾಂಗ್ರೆಸ್‌ ಅಲ್ಲ, ಮತ್ತೊಬ್ಬ ರಾವಣ ಹುಟ್ಟಿಬಂದರೂ ಬಜರಂಗದಳ ಬ್ಯಾನ್‌ ಮಾಡಲು ಆಗುವುದಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದರು.


ಮಹದೇವಪುರ (ಮೇ.05): ಕಾಂಗ್ರೆಸ್‌ ಅಲ್ಲ, ಮತ್ತೊಬ್ಬ ರಾವಣ ಹುಟ್ಟಿಬಂದರೂ ಬಜರಂಗದಳ ಬ್ಯಾನ್‌ ಮಾಡಲು ಆಗುವುದಿಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ಎಚ್ಚರಿಕೆ ನೀಡಿದರು. ಕ್ಷೇತ್ರದ ಆದೂರು, ರಾಂಪುರ, ಬಿಳಿಶಿವಾಲೆ ಗ್ರಾಮಗಳಲ್ಲಿ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಪರ ಪ್ರಚಾರದ ವೇಳೆ ಮಾತನಾಡಿದರು. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ಪ್ರಸ್ತಾಪ ಮಾಡಿದೆ. 

ಆದರೆ ಕಾಂಗ್ರೆಸ್‌ನಿಂದ ಮಾತ್ರವಲ್ಲ ಮತ್ತೊಬ್ಬ ರಾವಣ ಹುಟ್ಟಿ ಬಂದರೂ ಬಜರಂಗದಳ ನಿಷೇಧಿಸಲು ಆಗಲ್ಲ, ಅವರು ಶ್ರೀರಾಮನ ಬಂಟರು, ಹನುಮನ ಭಕ್ತರು, ಸಮಾಜಕ್ಕೆ ಅವರ ಸೇವೆ ಬಹಳಷ್ಟಿದೆ.  ಕೊರೋನಾ ಸಂದರ್ಭದಲ್ಲಿ ಜಾತಿ, ಮತ, ಧರ್ಮ ನೋಡದೇ ಹೆಣಗಳನ್ನು ಸಂಸ್ಕಾರ ಮಾಡಿದ್ದಾರೆ. ಅಲ್ಲದೇ ಪ್ರತಿವರ್ಷ ಹತ್ತು ಸಾವಿರಕ್ಕೂ ಹೆಚ್ಚಿನ ಯೂನಿಟ್‌ ರಕ್ತವನ್ನು ಸಂಗ್ರಹಿಸುತ್ತಾರೆ ಎಂದರು. ಹನುಮನ ಜನ್ಮಸ್ಥಾನವಾದ ಗಂಗಾವತಿ ಬಳಿಯ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ .100 ಕೋಟಿ ಮೀಸಲಿಟ್ಟಿದೆ. ಅದನ್ನು ಕಾಂಗ್ರೆಸ್‌ನವರು ಸಹಿಸುತ್ತಿಲ್ಲ. ಕಳೆದ ಬಾರಿ ಶ್ರೀರಾಮನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದರು. 

Tap to resize

Latest Videos

ರಾಮ-ಹನುಮನಂತೆ ಬಜರಂಗಿ, ಬಜರಂಗ ದಳ ಸಂಬಂಧ: ಸಿಎಂ ಬೊಮ್ಮಾಯಿ

ಈ ಬಾರಿ ಹನುಮಂತನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದು, ಭಗವಂತ ಬಜರಂಗ ಬಲಿ ಅವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ ಎಂದು ಲಿಂಬಾವಳಿ ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್‌, ಮುಖಂಡರಾದ ಬಿಳಿಶಿವಾಲೆ ಆನಂದ್‌ ಕುಮಾರ್‌, ಕಣ್ಣೂರು ಅಶೋಕ್‌, ನಾರಾಯಣಪ್ಪ, ಪಂಚಾಯಿತಿ ಅಧ್ಯಕ್ಷೆ ಮಂಜುಳಾ ನಾಗರಾಜ್‌, ಬಿದರಹಳ್ಳಿ ಮಧು, ಧನಂಜಯ ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಬಿಜೆಪಿಗೆ ಅಧಿಕಾರ ನೀಡಿ: ಪ್ರಪಂಚವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾ ಸಂದರ್ಭದಲ್ಲಿ ದೇಶದ ಜನತೆಗೆ ಲಸಿಕೆ ನೀಡುವ ಮೂಲಕ ಜನತೆಗೆ ಧೈರ್ಯ ತುಂಬಿದ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಮತದಾರರು ಮತ್ತೊಮ್ಮೆ ಅಧಿಕಾರ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಮನವಿ ಮಾಡಿದರು. ಮಹದೇವಪುರ ಕ್ಷೇತ್ರದ ವರ್ತೂರು, ಸೊರಹುಣಸೆ, ವಾಲೆಪುರ, ಬಳಗೆರೆ, ಗುಂಜೂರು, ಸೂಲಿಕುಂಟೆ, ಕೊಡತಿ ಸೇರಿದಂತೆ ವಿವಿಧೆಡೆ ಪ್ರಚಾರ ವೇಳೆ ಮಾತನಾಡಿದರು. ಕೊರೋನಾ ಸಂದರ್ಭದಲ್ಲಿ ಪೌರಕಾರ್ಮಿಕರು, ಚಾಲಕರು, ಕೂಲಿ ಕಾರ್ಮಿಕರು, ಬಡವರು ಎನ್ನದೇ ಪ್ರತಿ ಒಬ್ಬರಿಗೂ ಆಹಾರ, ದಿನಸಿ ಕಿಟ್ಟು, ಕೊರೋನಾ ಲಸಿಕೆ ನೀಡಲಾಗಿದ್ದು, ಸ್ವಾರ್ಥರಹಿತ ಕಾಯುವ ಕಾರ್ಯ ನಿರ್ವಹಿಸಿದ್ದೇವೆ ಎಂದು ತಿಳಿಸಿದರು.

ಜನರಿಗೆ ತೊಂದರೆ ಹಿನ್ನೆಲೆ: ಪ್ರಧಾನಿ ಮೋದಿ ರೋಡ್‌ ಶೋ 1 ದಿನ ಅಲ್ಲ, 2 ದಿನ

ಜನಪರ ಯೋಜನೆಗಳನ್ನು ಜಾರಿಗೊಳಿಸಲು ಹಾಗೂ ಡಬಲ್‌ ಎಂಜಿನ್‌ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರೆಸಲು ಬಿಜೆಪಿಗೆ ಮತ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರ್‌ ರೆಡ್ಡಿ, ಕ್ಷೇತ್ರದ ಚುನಾವಣಾ ಉಸ್ತುವಾರಿ ರಾಜಾರೆಡ್ಡಿ, ಮುಖಂಡರಾದ ಸುರೇಶ್‌ ರೆಡ್ಡಿ, ಶ್ರೀಧರ್‌, ಮಹೇಂದ್ರ ಮೋದಿ, ವೆಂಕಟೇಶ್‌ ರೆಡ್ಡಿ, ಸದಾಶಿವರೆಡ್ಡಿ, ಬಾಬು ರೆಡ್ಡಿ, ಶೇಖರ್‌ ರೆಡ್ಡಿ, ಶಿವಕುಮಾರ್‌, ರಘು ಸೇರಿದಂತೆ ಹಲವಾರು ಹಾಜರಿದ್ದರು.

click me!