ರಾಜ್ಯಕ್ಕೆ ಬಂದ ಅಮಿತ್ ಶಾ, ಇಂದು ನಡೆಯಬೇಕಿದ್ದ ಬಿಜೆಪಿ ರೋಡ್ ಶೋ ಮುಂದೂಡಿಕೆ

By Gowthami KFirst Published Apr 21, 2023, 5:12 PM IST
Highlights

ಇಂದು ನಡೆಯಬೇಕಿದ್ದ ಬಿಜೆಪಿ ಸ್ಟಾರ್ ಪ್ರಚಾರಕ ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ರದ್ದಾಗಿದೆ. ಮಳೆ ಕಾರಣಕ್ಕೆ ನಾಳೆಗೆ ಮುಂದೂಡಲಾಗಿದೆ.

ಬೆಂಗಳೂರು (ಏ.21): ರಾಜ್ಯ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಸ್ಟಾರ್ ಪ್ರಚಾರಕ ಕೇಂದ್ರ ಸಚಿವ ಅಮಿತ್ ಶಾ ಅವರ ಇಂದಿನ ರೋಡ್ ಶೋ ರದ್ದಾಗಿದೆ. ಮಳೆ ಕಾರಣ ಕಾರ್ಯಕರ್ತರು ಬರಲು ಸಾಧ್ಯ ಆಗ್ತಿಲ್ಲ. ಹೀಗಾಗಿ  ಕಾರ್ಯಕರ್ತರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಇವತ್ತಿನ ಕಾರ್ಯಕ್ರಮ ಮುಂದೂಡಿದ್ದೇವೆ ಎಂದು ರಾಜ್ಯ ಚುನಾವಣಾ ಬಿಜೆಪಿ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ.

ಸದ್ಯ ಅಮಿತ್ ಶಾ ಅವರ ರೋಡ್ ಶೋ ಮಳೆಯ ಕಾರಣ ನಾಳೆಗೆ ಮುಂದೂಡಲಾಗಿದ್ದು, ನಾಳೆ ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಅಮಿತ್ ಶಾ ಇಂದು ಬೆಂಗಳೂರಿನಲ್ಲೇ ತಂಗಲಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣದಿಂದ ತಾಜ್ ಹೋಟೆಲ್ ನತ್ತ ಅಮಿತ್ ಶಾ ತೆರಳಿದ್ದಾರೆ. ಶಾ ಜೊತೆ ಕಾರಿನಲ್ಲಿ  ಸಿಎಂ ಬೊಮ್ಮಾಯಿ ಸಾಥ್ ನೀಡಿದರು. ಅಮಿತ್ ಶಾ ಆಗಮನ ಮತ್ತು ರೋಡ್ ಶೋ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 500 ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

Latest Videos

ಇದಕ್ಕೂ ಮುನ್ನ ದೆಹಲಿಯಿಂದ ಕೆಂಪೇಗೌಡ ಏರ್ಪೋಟ್ ಗೆ  ವಿಶೇಷ ವಿಮಾನದಲ್ಲಿ ಕೆಐಎಬಿಗೆ ಆಗಮಿಸಿದ ಅಮಿತ್ ಶಾ ಅವರನ್ನು ಸಿಎಂ ಬೊಮ್ಮಾಯಿ ಮತ್ತು ಸಚಿವ ಸುಧಾಕರ್ ಸ್ವಾಗತ ಕೋರಿದರು.

ಮೋದಿ, ಶಾ, ಗಡ್ಕರಿ ಸೇರಿ 40 ಮಂದಿ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್

ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. 3.45 ರಿಂದ 5 ಗಂಟೆವರೆಗೂ ವಿಜಯಪುರ ಪಟ್ಟಣದಲ್ಲಿ ಬೃಹತ್ ರೋಡ್ ಶೋ ಗೆ ಸಮಯ ನಿಗದಿಯಾಗಿತ್ತು. ವಿಜಯಪುರ ಪಟ್ಟಣದ ಶಿವಗಣೇಶ ಸರ್ಕಲ್ ನಿಂದ ಟೋಲ್ ಗೇಟ್ ವರೆಗೂ ರೋಡ್ ಶೋ ಸುಮಾರು ಒಂದೂವರೆ ಕಿಮೀ ರೋಡ್ ಶೋ ನಡೆಸಲಾಗಿತ್ತು.

ಕದನ ಕಣದಲ್ಲಿ ಇಂದಿನಿಂದ 'ಕೇಸರಿ' ನಾಯಕರ ಅಸಲಿ ಗೇಮ್‌..ಪ್ರಚಾರ ಅಖಾಡಕ್ಕೆ ಇಳಿದ 'ಚುನಾವಣಾ ಚಾಣಕ್ಯ'

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಮುಗಿದಿದೆ. ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.  ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

 

ಭಾರೀ ಮಳೆಯಿಂದಾಗಿ ದೇವನಹಳ್ಳಿ ಜನತೆಯೊಂದಿಗಿರಲು ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ ಜನಸ್ತೋಮಕ್ಕೆ ಕೃತಜ್ಞನಾಗಿದ್ದೇನೆ.

ಪ್ರಚಾರಕ್ಕಾಗಿ ದೇವನಹಳ್ಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ.

ಕರ್ನಾಟಕದ ಜನರ ಉತ್ಸಾಹವು ಬಿಜೆಪಿಯು ಬೃಹತ್‌ ಗೆಲುವು ಸಾಧಿಸಲಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ. https://t.co/7bLUkjwwKh

— Amit Shah (@AmitShah)
click me!