ಮೋದಿ ಗುಜರಾತ್‌ ಮಣ್ಣಿನ ಮಗ, ನಾನು ಕರ್ನಾಟಕದ ಮಣ್ಣಿನ ಮಗ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published May 6, 2023, 12:53 PM IST

ಪ್ರಧಾನಿ ಮೋದಿಯವರು ಗುಜರಾತ್‌ ಚುನಾವಣೆಯಲ್ಲಿ ತಾವು ಗುಜರಾತಿನ ಮಣ್ಣಿನ ಮಗ, ತಮ್ಮ ಮಾತಿಗೆ ಬೆಲೆ ಕೊಟ್ಟು ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದರು. ಆಗ ಇಡೀ ಗುಜರಾತ್‌ ರಾಜ್ಯ ಅವರ ಮನವಿಗೆ ಸ್ಪಂದಿಸಿತು. 


ಕಲಬುರಗಿ (ಮೇ.06): ಪ್ರಧಾನಿ ಮೋದಿಯವರು ಗುಜರಾತ್‌ ಚುನಾವಣೆಯಲ್ಲಿ ತಾವು ಗುಜರಾತಿನ ಮಣ್ಣಿನ ಮಗ, ತಮ್ಮ ಮಾತಿಗೆ ಬೆಲೆ ಕೊಟ್ಟು ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದರು. ಆಗ ಇಡೀ ಗುಜರಾತ್‌ ರಾಜ್ಯ ಅವರ ಮನವಿಗೆ ಸ್ಪಂದಿಸಿತು. ಹಾಗೆಯೇ, ನಾನು ಕರುನಾಡಿನ, ಕಲಬುರಗಿಯ ಮಣ್ಣಿನ ಮಗ. ನೀವೂ ನನ್ನ ಮಾತಿಗೆ ಸ್ಪಂದಿಸಿ, ಕಾಂಗ್ರೆಸ್‌ ಗೆಲ್ಲಿಸಿ, ನನ್ನ ಗೌರವ ಹೆಚ್ಚಿಸಿ ಎಂದು ಎಐಸಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ತವರೂರಿನ ಜನತೆಗೆ ಮನವಿ ಮಾಡಿದ್ದಾರೆ.

ಕಲಬುರಗಿಯಲ್ಲಿ ಸತತ 3ನೇ ದಿನವಾದ ಶುಕ್ರವಾರ ಕಾಂಗ್ರೆಸ್‌ ಪರ ಬಿರುಸಿನ ಪ್ರಚಾರ ನಡೆಸಿದ ಖರ್ಗೆ, ಅಫಜಲಪುರ ಹಾಗೂ ಜೇವರ್ಗಿ ಮತಕ್ಷೇತ್ರದ ಯಡ್ರಾಮಿಯಲ್ಲಿ ಬಹಿರಂಗ ಸಭೆಗಳಲ್ಲಿ ಪಾಲ್ಗೊಂಡು ಎಂ.ವೈ.ಪಾಟೀಲ್‌ ಹಾಗೂ ಡಾ.ಅಜಯ್‌ ಸಿಂಗ್‌ ಪರ ಮತ ಯಾಚಿಸಿದರು. ಮೋದಿ ಗುಜರಾತಿನಲ್ಲಿ ಮಣ್ಣಿನ ಮಗನೆಂದು ಮತ ಕೇಳಬೇಕಾರೆ ನಾನೂ ಯಾಕೆ ಇಲ್ಲಿ ಮಣ್ಣಿನ ಹೆಸರಲ್ಲಿ ಮತ ಕೇಳಬಾರದು?. ನಾನು ಇಲ್ಲಿನ ಮಣ್ಣಿನ ಮಗ, ನೀವು ಸ್ವಾಭಿಮಾನದ ಮತದಾನ ಮಾಡಿ. ಆ ಮತ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುತ್ತದೆ. ನನ್ನ ಶಕ್ತಿಯನ್ನು ಹೆಚ್ಚಿಸುತ್ತದೆ. 

Tap to resize

Latest Videos

undefined

ಜೆಡಿಎಸ್‌ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು

ಮಹಾತ್ಮಾ ಗಾಂಧೀಜಿ, ಸುಭಾಶ್ಚಂದ್ರ ಭೋಸ್‌, ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲರಂತಹ ಮೇಧಾವಿಗಳು ಕುಳಿತ ಕುರ್ಚಿ ಮೇಲೆ ನಾನೀಗ ಕುಳಿತಿರುವೆ. ನಿಮ್ಮೆಲ್ಲರ ಆಶೀರ್ವಾದ ಹಾರೈಕೆ ಇದ್ದಲ್ಲಿ ಇಲ್ಲಿ ಕುಳಿತಿರುವ ನನ್ನ ಗೌರವ ಹೆಚ್ಚುತ್ತದೆ. ನೀವು ನನ್ನ ಮಾತಿಗೆ ಸ್ಪಂದಿಸಿ, ನನಗೆ ಹರಸುತ್ತೀರೆಂಬ ನಂಬಿಕೆ ಇದೆ ಎಂದರು. ಎಐಸಿಸಿಸಿ ಅಧ್ಯಕ್ಷರಾದ ನಂತರ ತವರು ರಾಜ್ಯದಲ್ಲಿನ ಮೊದಲ ಚುನಾವಣೆ ಇದಾಗಿದೆ. ಇಲ್ಲಿ ನನ್ನ ಗೌರವ ಹೆಚ್ಚಾದಲ್ಲಿ ಅದು ನೀವು ನನಗೆ ಕೊಟ್ಟಂತಹ ಮರಾರ‍ಯದೆ. ಇಲ್ಲದೆ ಹೋದಲ್ಲಿ ಇಲ್ಲೇ ನನ್ನ ಕೈ ಕತ್ತರಿಸಿದರೆ ಮುಂದೇನೂ ಮಾಡಲಾಗದು. ಅದಕ್ಕೇ ಇದು ಸ್ವಾಭಿಮಾನದ ಪ್ರಶ್ನೆ ಎಂದರು.

ಖರ್ಗೆ ಮುಂದಿನ ಪ್ರಧಾನಿ ಎಂದು ಘೋಷಣೆ: ಯಡ್ರಾಮಿಗೆ ಖರ್ಗೆ ಬರುತ್ತಿದ್ದಂತೆಯೇ ಸೇರಿದ್ದ ಜನ ‘ಖರ್ಗೆಯವರೇ ಮುಂದಿನ ಪ್ರಧಾನಿ’ ಎಂದು ಘೋಷಣೆ ಹಾಕಿದರು. ಆಗ ಖರ್ಗೆಯವರೇ ಖುದ್ದು ಘೋಷಣೆ ಸಾಕು ಮಾಡಿ ಎಂದು ಮನವಿ ಮಾಡಿದರು. ಆದರೂ, ಖರ್ಗೆ ಪರ ಜಯಘೋಷ ಮುಂದುವರಿಯಿತು. ಬಳಿಕ, ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿ, ‘ಜಯಘೋಷ ಹಾಕಿದೀರಿ, ಓಕೆ, ಮತದಾನದ ದಿನ ಕಾಂಗ್ರೆಸ್‌ಗೆ ಮತ ಹಾಕುವುದನ್ನು ಮರೆಯಬೇಡಿ. ನೀವು ಕಾಂಗ್ರೆಸ್‌ಗೆ ಮತ ಹಾಕದೆ ಬರೀ ಜಯಘೋಷ ಹಾಕಿದರೆ ಏನೂ ಪ್ರಯೋಜನವಿಲ್ಲ’ ಎಂದು ನಗೆ ಚಟಾಕಿ ಹಾರಿಸಿದರು.

ಹೋರಾಡಲು ವಯಸ್ಸು ಮುಖ್ಯವಲ್ಲ: ರಣಭೂಮಿಯಲ್ಲಿ ಹೋರಾಡಲು ಹುಮ್ಮಸ್ಸು ಬೇಕು, ವಯಸ್ಸಲ್ಲ, ಚುನಾವಣಾ ಕಣ ಕೂಡ ರಣಭೂಮಿ ಇದ್ದಂತೆ ಇಲ್ಲಿ ಮತದಾರರ ಮನಸ್ಸು ಗೆಲ್ಲಲು ಒಳ್ಳೆಯ ಕೆಲಸಗಳೇ ಮಾನದಂಡಗಳಾಗಿವೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ವಯಸ್ಸು ಮುಖ್ಯವಲ್ಲ ಎಂದು ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಅಫಜಲ್ಪುರ ಪಟ್ಟಣದ ಶೆಟ್ಟಿಫಂಕ್ಷನ್‌ ಹಾಲನಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಪಕ್ಷದಲ್ಲಿ ಶಾಸಕರಾಗಿದ್ದವರಿಗೆ ಮೊದಲ ಆದ್ಯತೆಯ ಮೇರೆಗೆ ಟಿಕೇಟ್‌ ನೀಡಿದ್ದೇವೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲಿದೆ.

ಯಾದಗಿರಿಯಲ್ಲಿ ಬಿಜೆಪಿ ಬಹಿರಂಗ ಸಮಾವೇಶ: ಶಾಸಕ ವೆಂಕಟರೆಡ್ಡಿ ಪರವಾಗಿ ಮತಯಾಚನೆ ಮಾಡಿದ ಸ್ಮೃತಿ

ಅಫಜಲ್ಪುರದಲ್ಲಿ ಎಂ.ವೈಪಾಟೀಲ್‌ ಅವರಿಗೆ ಅಳೆದು ತೂಗಿ ಟಿಕೇಟ್‌ ನೀಡಲಾಗಿದ್ದು ಈ ಬಾರಿಯೂ ಹೆಚ್ಚಿನ ಬಹುಮತದಿಂದ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿ ಎಂದ ಅವರು ಎಂ.ವೈ ಪಾಟೀಲ್‌ಗೆ ಮತ ನೀಡಿದಿದ್ದರೆ ನನಗೂ ಮತ್ತು ಕಾಂಗ್ರೆಸ್‌ ಪಕ್ಷಕ್ಕೂ ಅವಮಾನಿಸಿದಂತಾಗಲಿದೆ ಇದನ್ನು ಕ್ಷೇತ್ರದ ಮತದಾರರು ಮನಸ್ಸಿನಲ್ಲಿಟ್ಟುಕೊಂಡು ಸುಳ್ಳಿನ ಸರದಾರರಾದ ಬಿಜೆಪಿಗರಿಗೆ ಮತ ನೀಡದೆ ಕಾಂಗ್ರೆಸ್‌ ಅಭ್ಯರ್ಥಿ ಎಂ.ವೈಪಾಟೀಲ್‌ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!