ಹಿಂದೆ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ನಾನು ಭಾಗಿ ಆಗಿದ್ದೆ. ಅದು ಪಕ್ಷಾತೀತ ಹೋರಾಟವಾಗಿತ್ತು. ಈಗಲೂ ಮತ್ತೆ ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದ್ರೆ ನಾನು ಬೆಂಬಲ ಕೊಡ್ತೆನೆ. ಅದು ಪಕ್ಷಾತೀತ ಹೋರಾಟ ಆಗಿರುತ್ತೆ ಎಂದ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ವಿಜಯಪುರ(ಸೆ.28): ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು. ಅವರಿವರ ಮಾತು ಕೇಳಿ ರಾಜೀನಾಮೆ ಕೊಡದೆ ಇರೋದು ಸರಿಯಲ್ಲ. ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೈತಿಕತೆ ಪಾಠ ಹೇಳಿದ್ದಾರೆ.
ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹಿಂದೆ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ನಾನು ಭಾಗಿ ಆಗಿದ್ದೆ. ಅದು ಪಕ್ಷಾತೀತ ಹೋರಾಟವಾಗಿತ್ತು. ಈಗಲೂ ಮತ್ತೆ ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದ್ರೆ ನಾನು ಬೆಂಬಲ ಕೊಡ್ತೆನೆ. ಅದು ಪಕ್ಷಾತೀತ ಹೋರಾಟ ಆಗಿರುತ್ತೆ ಎಂದು ಹೇಳಿದ್ದಾರೆ.
undefined
ಸಿಎಂ ಸಿದ್ದರಾಮಯ್ಯಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಎರಡನೇ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರಾಜ್ಯದಲ್ಲಿ ಮತ್ತೊಂದು ಪಾದಯಾತ್ರೆ ಮಾಡಲು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ಇದುವರೆಗೂ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಬಸವಕಲ್ಯಾಣದಿಂದ ಹಿಡಿದು ಉತ್ತರ ಕರ್ನಾಟಕದ ಎಲ್ಲ ಕಡೆ ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಪಾದಯಾತ್ರೆಯನ್ನ ಬೆಂಗಳೂರಲ್ಲಿ ಅಂತ್ಯ ಮಾಡಿ ಸಮಾವೇಶ ಮಾಡುವ ಪ್ಲಾನ್ ಇದೆ. ಇದಕ್ಕೆಲ್ಲ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕ ನಂತರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಗೌರವಯುತವಾಗಿ ರಾಜೀನಾಮೆ ನೀಡಲಿ. ಅವರು ಕೊಡಬೇಕು ಇವರು ಕೊಡಬೇಕು ಎಂದು ಬೇರೆಯವರ ಕಡೆ ಬೊಟ್ಟು ಮಾಡಬಾರದು. ಅವರು ಕಳ್ಳರು, ನಾವು ಕಳ್ಳರು ಅನ್ನೋದು ಬೇಡ. ರಾಜೀನಾಮೆ ನೀಡಿ ಸಿದ್ದರಾಮಯ್ಯ ಆದರ್ಶದಾಗಲಿ. ರಾಜಕಾರಣದಲ್ಲಿ ನೀವು ಸ್ವಚ್ಛವಾಗಿರಿ ಎಂದು ಯತ್ನಾಳ್ ತಿಳಿಸಿದ್ದಾರೆ.
ಮುಡಾ ಹಗರಣ: ಎಫ್‌ಐಆರ್‌ನಿಂದ ಕಂಗಾಲಾದ್ರಾ ಸಿಎಂ ಸಿದ್ದರಾಮಯ್ಯ?
ಅಡ್ವಾಣಿಯವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆ ಕೊಟ್ಟರು. ಡೈರಿಯಲ್ಲಿ ಬರೀ LKA ಎಂದು ಬರೆದಿದ್ದಕ್ಕೆ ರಾಜೀನಾಮೆ ನೀಡಿದ್ರು. ಆರೋಪ ಮುಕ್ತರಾಗೋವರೆಗೂ ಲೋಕಸಭೆಗೆ, ರಾಜ್ಯಸಭೆಗೆ ಪ್ರವೇಶ ಮಾಡಲ್ಲ ಎಂದಿದ್ದರು ಎಂದು ಹೇಳುವ ಮೂಲಕ ಸಿದ್ದರಾಮಯ್ಯಗೆ ಅಡ್ವಾಣಿ ಆದರ್ಶ ಬೋಧಿಸಿದ್ದಾರೆ ಯತ್ನಾಳ್.
ಸಿದ್ದರಾಮಯ್ಯ ರಾಜೀನಾಮೆ ನೀಡಿ ಕರ್ನಾಟಕದಲ್ಲಿ ಆದರ್ಶರಾಗಬೇಕು. ಇಲ್ಲದೆ ಹೋದರೆ ಅವರೂ ಅಹ ಯಡಿಯೂರಪ್ಪರಂತೆಯೆ ಆಗ್ತಾರೆ. ಸಿಎಂ ಸ್ಥಾನದಲ್ಲಿ ಇರೋವರೆಗೂ ಪೊಲೀಸರಿಗೆ ಸಿದ್ದರಾಮಯ್ಯ ವಿರುದ್ಧ ಪ್ರಾಮಾಣಿಕ ತನಿಖೆ ಅಸಾಧ್ಯ ತನಿಖೆ ಮಾಡಿದ ಅಧಿಕಾರಿಯನ್ನೇ ಮರುದಿನ ಸಸ್ಪೆಂಡ್ ಮಾಡ್ತಾರೆ ಎಂದು ತಿಳಿಸಿದ್ದಾರೆ.