Karnataka Politics : ಚುನಾವಣೆ ನಂತರ ರಾಜಕೀಯ ಅಲ್ಲೋಲ ಕಲ್ಲೋಲ-ಈಶ್ವರಪ್ಪ

By Kannadaprabha News  |  First Published Dec 6, 2021, 11:11 AM IST
  • ಚುನಾವಣೆ ನಂತರ ರಾಜಕೀಯ ಅಲ್ಲೋಲ ಕಲ್ಲೋಲ-ಈಶ್ವರಪ್ಪ
  • ಕಾಂಗ್ರೆಸ್‌ನ ಅಭ್ಯರ್ಥಿಗಳನ್ನ ಕಾಂಗ್ರೆಸ್‌ನ ನಾಯಕರುಗಳೇ ಸೋಲಿಸುತ್ತಾರೆ

 ಶಿವಮೊಗ್ಗ(ಡಿ.06):  ವಿಧಾನ ಪರಿಷತ್‌ ಚುನಾವಣೆ(MLC Election) ಫಲಿತಾಂಶದ (Result) ನಂತರ ಕಾಂಗ್ರೆಸ್‌ನ (Congress) ಗುಂಪುಗಾರಿಕೆ ಸ್ಪೋಟಗೊಂಡು ಕಾಂಗ್ರೆಸ್‌ ಅಲ್ಲೋಲ-ಕಲ್ಲೋಲ ಆಗುತ್ತದೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್‌.ಈಶ್ವರಪ್ಪ (Minister KS Eshwarappa) ಹೇಳಿದರು.  ಭಾನುವಾರ ಬಿಜೆಪಿ (BJP) ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌  ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ (Ticket) ಕೊಡದೆ ಇರುವುದು, ಕೇವಲ ದುಡ್ಡು ಜಾತಿ ನೋಡಿ ಟಿಕೆಟ್‌ ಕೊಟ್ಟಿರುವುದು. ಹೀಗಾಗಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನ ಕಾಂಗ್ರೆಸ್‌ನ ನಾಯಕರುಗಳೇ ಸೋಲಿಸುತ್ತಾರೆ. ಡಿ.ಕೆ. ಶಿವಕುಮಾರ್‌ (DK Shivakumar) ಹಾಗೂ ಸಿದ್ದರಾಮಯ್ಯ (Siddaramaiah) ಅವರಲ್ಲಿರುವ ಗುಂಪುಗಾರಿಕೆ ಬಹಿರಂಗವಾಗಿ ಸ್ಪೋಟವಾಗುತ್ತದೆ ಎಂದು ಭವಿಷ್ಯ ನುಡಿದರು.

ಡಿ.ಕೆ.ಶಿವಕುಮಾರ್‌ ತಿಹಾರ್‌ ಜೈಲಿಗೆ (Tihar Jail) ಹೋಗಿದ್ರಲ್ಲಾ ಏನ್‌ ತಪ್ಪು ಮಾಡಿ ಹೋಗಿದ್ರೀ? ಅದರಿಂದ ಹೆತ್ತ ತಾಯಿಗೆ (mother) ಕಣ್ಣೀರು ತರಿಸಿದ್ರಲ್ಲಾ ಅವರ ಕಣ್ಣೀರಿನ ಶಾಪ ನಿಮಗೆ ತಟ್ಟುತ್ತದೆಯೋ ಅಥವಾ ಕಾಂಗ್ರೆಸ್‌ (Congress) ಪಕ್ಷಕ್ಕೆ ತಟ್ಟುತ್ತದೆಯೋ ಎಂದ ಅವರು, ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು? ರಾಜ್ಯದ ಜನರಿಗೆ ಡಿ.ಕೆ.ಶಿವಕುಮಾರ್‌ ಉತ್ತರ ನೀಡಬೇಕು. ಅವರು ಬಂಡೆಯಲ್ಲಿ ಎಷ್ಟು ದುಡ್ಡು (Money) ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಟೀಕಿಸಿದರು.

Tap to resize

Latest Videos

undefined

ಸಿದ್ದರಾಮಯ್ಯ (Siddaramaiah) ಅವರು, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಒಂದೇ ಒಂದು ಮನೆ (House) ಕೊಟ್ಟಿಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಸಿಎಂ ಆಗಿದ್ದವರಿಗೆ ಜ್ಞಾನ ಇಲ್ವಾ ಅಜ್ಞಾನಿ ಯಾಕೆ ಆದ್ರು ಎಂದ ಅವರು, ಮನೆ ಕೂಡುವುದು ವಸತಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಮನೆ ಕಟ್ಟಿ ಹಂಚಲು ಅವಕಾಶ ಇಲ್ಲ. ಬರೀ ಟೀಕೆ ಮಾಡುವುದಷ್ಟೇ ಅಲ್ಲ. ಯಾವ ಯಾವ ಇಲಾಖೆಯಲ್ಲಿ ಯಾವ ಯಾವ ಅವಕಾಶ ಇದೆ ಎಂಬುದನ್ನು ಸ್ವಲ್ವ ತಿಳಿದುಕೊಳ್ಳಿ, ನನ್ನನ್ನು ಟೀಕೆ ಮಾಡಿದರೆ ಮಾತ್ರ ಅವರಿಗೆ ತಿಂದ ಅನ್ನ ಕರಗುತ್ತದೆ ಎಂದು ಖಾರವಾಗಿ ಹೇಳಿದರು.

ಸಿದ್ದರಾಮಯ್ಯ ಮುಂದಿನ ಬಾರಿ ಬಾದಾಮಿಯಲ್ಲಿ (Badami) ನಿಲ್ಲೋದಿಲ್ಲ. ಸಿದ್ದರಾಮಯ್ಯಗೆ ಮುಸ್ಲಿಂಮರೆ (Muslim) ಗತಿ, ಜಮೀರ್‌ (Zameer ahmed) ಕೈಕಾಲು ಹಿಡಿದುಕೊಂಡು ಚಾಮರಾಜಪೇಟೆಯಲ್ಲಿ (Chamarajapete) ನಿಲ್ಲುತ್ತಾರೆ ಎಂದು ಲೇವಡಿ ಮಾಡಿದರು.

ನಾನು ಇಲ್ಲವೇ ಸಿಎಂ ಬೊಮ್ಮಾಯಿ (CM Basavaraja Bommai) ರಾಜೀನಾಮೆ (Resignation) ನೀಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ನಾನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಮುಖ್ಯಮಂತ್ರಿಯಾಗಲು ಮುರುಗೇಶ್‌ ನಿರಾಣಿಗೆ (Murugesh Nirani) ಅವಕಾಶವಿದೆ ಎಂದು ಹೇಳಿದ್ದೇನೆ. ಅವರು ಈಗಲೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿಲ್ಲ. ಈ ವಿಷಯದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿಯೇ ಮುಂದುವರಿಯುತ್ತಾರೆ ಎಂದರು.

ನನಗೂ ಹಾಗೂ ಸಚಿವ ಅರಗ ಜ್ಞಾನೇಂದ್ರರವರಿಗೆ (Araga jnanendra) ಮುತ್ತು-ರತ್ನ ಎಂದು ಹೋಲಿಕೆ ಮಾಡಿದಕ್ಕೆ ಸಂತಸವಾಗಿದೆ. ಕಲ್ಲು ಬಂಡೆ ಈ ರೀತಿ ಹೇಳುತ್ತಲ್ಲಾ ಎಂದು ಸಂತಸವಾಗಿದೆ ಎಂದರು.

ಪೊಲೀಸರಿಗೆ (Police) ಬೈಯ್ದದ್ದು ಸರಿಯಾಗಿದೆ:  ಗೋ ಸಾಗಣೆಯನ್ನು ತಡೆಯಲು ಹೋದವರ ಮೇಲೆ ವಾಹನ ಹತ್ತಿಸಿದ್ದಾರೆ. ಆಸ್ಪತ್ರೆಯಲ್ಲಿ ಅವರನ್ನು ನೋಡಿದ್ರೆ ಹೊಟ್ಟೆ ಉರಿಯುತ್ತೆ. ಅವರ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಅವರ ಡ್ಯೂಟಿ ನೆನಪು ಮಾಡಿ ಕೊಟ್ಟಿದ್ದಾರೆ. ಪೊಲೀಸರಿಗೆ ಬೈಯ್ದದ್ದು ಸರಿಯಾಗಿದೆ. ಅವೆಲ್ಲಾ ನನ್ನ ಬಾಯಿಯಲ್ಲಿ ಬರುವಂತದ್ದು. ಆದರೆ, ಜ್ಞಾನೇಂದ್ರ ಬಾಯಲ್ಲಿ ಯಾಕೆ ಬಂತು ಅಂತಾ ಗೊತ್ತಾಗುತ್ತಿಲ್ಲ ಎಂದರು.

click me!