ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಸಂಕಷ್ಟ, ಅಧಿಕೃತ ವೆಬ್‌ಸೈಟ್ ಹ್ಯಾಕ್!

Published : Feb 03, 2023, 06:18 PM IST
ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್‌ಗೆ ಸಂಕಷ್ಟ, ಅಧಿಕೃತ ವೆಬ್‌ಸೈಟ್ ಹ್ಯಾಕ್!

ಸಾರಾಂಶ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಭರ್ಜರಿ ಪ್ರಚಾರ ಮಾಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಇಷ್ಟೇ ಅಲ್ಲ ಕೆಪಿಸಿಸಿ ಡಾಟ್ ಇನ್ ಅನ್ನೋ ಮತ್ತೊಂದು ವೆಬ್‌ಸೈಟ್ ತೆರೆದು ಭ್ರಷ್ಟರ ಪಕ್ಷ ಎಂದು ಟಾರ್ಗೆಟ್ ಮಾಡಲಾಗಿದೆ.  

ಬೆಂಗಳೂರು(ಫೆ.03):  ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿ ಬಳಸಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಬಸ್ ಯಾತ್ರೆ, ಪಾದಯಾತ್ರೆ ಜೊತೆಗೆ ಡಿಜಿಟಲ್ ಕ್ಯಾಂಪೇನ್ ಮೂಲಕವೂ ಮತಸೆಳೆಯುವ ಯತ್ನ ಮಾಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಹ್ಯಾಕ್ ಮಾಡಲಾಗಿದೆ. ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಅನಧಿಕೃತ ಪೋಸ್ಟ್‌ಗಳು ಪತ್ತೆಯಾಗಿದೆ. ಇದರ ಬೆನ್ನಲ್ಲೇ ವೆಬ್‌ಸೈಟ್‌ನ್ನು ಸಸ್ಪೆಂಡ್ ಮಾಡಲಾಗಿದೆ. ಇಷ್ಟಕ್ಕೆ ಕಾಂಗ್ರೆಸ್ ವಿರುದ್ಧದ ಯುದ್ಧ ನಿಂತಿಲ್ಲ. ಕೆಪಿಸಿಸಿ. ಇನ್ ಅನ್ನೋ ವೆಬ್‌ಸೈಟ್‌ನಲ್ಲಿ ಇದು ಭ್ರಷ್ಟರ ಪಕ್ಷ. ಭ್ರಷ್ಟ ರಾಜ್ಯವನ್ನಾಗಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಇಡೀ ಕಾಂಗ್ರೆಸ್ ಮೇಲಿನ ಆರೋಪಗಳ ಪಟ್ಟಿಯನ್ನೇ ಈ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಕಾಂಗ್ರೆಸ್ ಅಧಿೃಕಯ ವೆಬ್‌ಸೈಟ್ ಹ್ಯಾಕ್ ಆಗಿರುವ ಕಾರಣ ತಾತ್ಕಾಲಿಕವಾಗಿ ಸಸ್ಪೆಂಡ್ ಮಾಡಲಾಗಿದೆ. ಸದ್ಯ ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಲಭ್ಯವಿಲ್ಲ. ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿದರೆ ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಂದೇಶ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಕೆಪಿಸಿಸಿ.ಇನ್ ವೆಬ್‌ಸೈಟ್ ಒಪನ್ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಅಧಿಕೃತ ವೆಬ್ ಸೈಟ್ ರೀತಿಯಲ್ಲಿ ಕಾಣಿಸುತ್ತಿದೆ. ಯೂಆರ್‌ಎಲ್ ಕೂಡ ಕೆಪಿಸಿಸಿ.ಇನ್ ಎಂದಿದೆ.

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೆ.ಟಿ ಶಾಂತಕುಮಾರ್, ಕುಮಾರಸ್ವಾಮಿಯಿಂದ ಸ್ವಾಗತ 

ಮುಖಪುಟದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಕೆಜೆ ಜಾರ್ಜ್ ಫೋಟೋ ಬಳಸಲಾಗಿದೆ. ಈ ಫೋಟೋಗಳ ಮೇಲೆ ಕಮ್ಯೂನಲ್ , ಕ್ರಿಮಿನಲ್ ಹಾಗೂ ಕರಪ್ಟ್ ಎಂದು ಉಲ್ಲೇಖಿಸಲಾಗಿದೆ. ಅಂದರೆ ಕೋಮುವಾದಿ, ಅಪರಾಧಿ ಹಾಗೂ ಭ್ರಷ್ಟ ಎಂದಿದೆ. ಇನ್ನು ಇತರ ಪುಟಗಳಲ್ಲಿ ಕಾಂಗ್ರೆಸ್ ಮೇಲಿನ ಆರೋಪಗಳು, ಕಾಂಗ್ರೆಸ್ ಆಡಳಿತದಲ್ಲಿ ನಡೆದ ಭ್ರಷ್ಟಾಚಾರ, ಕೋಮುಗಲಭೆ ಸೇರಿದಂತೆ ಹಲವುವಿವಾದಾತ್ಮಕ ಮಾಹಿತಿಗಳನ್ನು ಹಾಕಲಾಗಿದೆ.

ನಿಮ್ಮ ತಿಹಾರ್ ಜೈಲಿನ ಸುಗಮ ಪ್ರವಾಸಕ್ಕೆ ಕಾಂಗ್ರೆಸ್ ಬೆಂಬಲಿಸಿ ಎಂದು ಬರೆಯಲಾಗಿದೆ. ಇನ್ನು ಕಾಂಗ್ರೆಸ್ ಅವಧಿಯಲ್ಲಿ ಆಗಿರುವ ಜನಪ್ರಿಯ ಹಗರಣಗಳು, ಪ್ರಮುಖ ಅಪರಾಧಗಳು, ಕೋಮುಗೃಲಭೆಗಳ ಮಾಹಿತಿಗಳನ್ನು ಹಾಕಲಾಗಿದೆ. ಇನ್ನು ಕೇಂದ್ರದಲ್ಲಿ 2004ರಿಂದ 2014ರ ವರೆಗೆ ಯುಪಿಎ ಅವಧಿಯಲ್ಲಿ ಆಗಿರುವ ಹಗರಣ, ಕೋಮುಗಲಭೆ ಕುರಿತ ಮಾಹಿತಿಗಳನ್ನು ಹಾಕಲಾಗಿದೆ.

ಕಾಂಗ್ರೆಸ್ ಅಂಗ ಪಕ್ಷ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ತುಕಡೇ ತುಕಡೇ ಗ್ಯಾಂಗ್, ಅರ್ಬನ್ ನಕ್ಸಲರು, ದೇಶ ವಿರೋಧಿಗಳು ಎಂದು ಹಲವು ಮಾಹಿತಿಗಳನ್ನು ಕೆಪಿಸಿಸಿ. ಇನ್ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಕಾಂಗ್ರೆಸ್ ಅಧಿಕೃತ ವೆಬ್‌ಸೈಟ್:  https://inckarnataka.in/cgi-sys/suspendedpage.cgi
ಕೆಪಿಸಿಸಿ ಹೆಸರಲ್ಲಿ ತೆರೆದಿರುವ ವೆಬ್‌ಸೈಟ್: https://kpcc.in/indexk.html

ಚುನಾವಣಾ ಭರವಸೆ ನೀಡಿಕೆ ವೇಳೆ ನಿರ್ಲಕ್ಷ್ಯ ಪರಂ ಅತೃಪ್ತಿ

ಒಂದೆಡೆ ಕಾಂಗ್ರೆಸ್ ವಿರುದ್ಧ ಡಿಜಿಟಲ್ ಯುದ್ಧ ಆರಂಭಗೊಂಡಿದೆ. ಇತ್ತ ಕಾಂಗ್ರೆಸ್ ಪ್ರಜಾಧ್ವನಿಯಾತ್ರೆ ಮೂಲಕ ಕಲ್ಯಾಣ ಕರ್ನಾಟಕದತ್ತ ಸಾಗುತ್ತಿದೆ. ಬಸವಕಲ್ಯಾಣದ ಅನುಭವ ಮಂಟಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಸವಕಲ್ಯಾಣ ಪುಣ್ಯಭೂಮಿಯಿಂದ ಉತ್ತರ ಕರ್ನಾಟಕ ಭಾಗದ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಗಿದೆ.  

ಕಾರ್ಯಕ್ರಮದ ನಿಮಿತ್ಯ ಬಸವಕಲ್ಯಾಣ ಮಹಾದ್ವಾರದಿಂದ ಖಿಲ್ಲಾದವರೆಗೆ ಕಟೌಟಗಳು, ಬ್ಯಾನರಗಳು, ಬಟಿಂಗ್ಸಗಳು ಕಟ್ಟಿಶೃಂಗಾರಗೊಳಿಸಲಾಗಿದೆ. ಈ ನಿಮಿತ್ತ ಪತ್ರಿಕಾಗೋಷ್ಠಿ ನಡೆಸಿದ ಪ್ರಕಾಶ ರಾಠೋಡ ಶಾಸಕರು ಹಾಗೂ ಕಾಂಗ್ರೆಸ ಮುಖಂಡರು ಪ್ರಜಾಧ್ವನಿ ಕಾರ್ಯಕ್ರಮದ ಉಸ್ತುವಾರಿ ಕಾರ್ಯಕ್ರಮದಲ್ಲಿ ನೂರಾರು ಜನ ಕಾರ್ಯಕರ್ತರು ರಾತ್ರಿ ಹಗಲು ದುಡಿದು ಭರ್ಜರಿ ತಯ್ಯಾರಿ ಮಾಡಿದ್ದು ನನಗೆ ಸಮಧಾನ ತಂದಿದೆ ಸಹಸ್ರಾರು ಜನ ಪಾಲ್ಗೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!