
ಶಿವಮೊಗ್ಗ (ಅ.15): ಕಾಂಗ್ರೆಸ್ನೊಳಗೆ ದೊಡ್ಡ ಷಡ್ಯಂತ್ರ ನಡೆಯುತ್ತಿದ್ದು, ಅದು ಯಾವ ರೀತಿ ಆಂತರಿಕ ಕಚ್ಚಾಟ ಆಗುತ್ತಿದೆಯೆಂದರೇ ರಾಜ್ಯದಲ್ಲಿ 3ನೇ ಮುಖ್ಯಮಂತ್ರಿ ಬಂದರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವ ಷಡ್ಯಂತ್ರ, ಕುತಂತ್ರ ಒಂದೊಂದೇ ಬಹಿರಂಗ ಆಗುತ್ತಿದೆ. ನಾನು ಹೇಳೋದು ನಿಮಗೆ ಉಡಾಫೆ ಅನ್ನಿಸಬಹುದು. ಆದರೆ, 3ನೇ ಸಿಎಂ ಬಂದರೂ ಆಶ್ಚರ್ಯವಿಲ್ಲ. ಆ ರೀತಿ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿದೆ ಎಂದರು.
ಯಾವ ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ, ಅದೇ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವ ಷಡ್ಯಂತ್ರ ಕಾಂಗ್ರೆಸ್ನಲ್ಲಿ ನಡೆಯುತ್ತಿದೆ. ಇದರ ಪರಿಣಾಮವೇ ಸ್ಟಿಂಗ್ ಆಪರೇಷನ್. ಇದು ಸಿದ್ದರಾಮಯ್ಯ ಕೂಡ ಹೈಕೋರ್ಟ್ಗೆ ಹೋಗಿ ಸ್ಟೇ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿದೆ. ನಾನು ಮತ್ತೇ ಮತ್ತೆ ಹೇಳುತ್ತಿದ್ದೇನೆ. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಆ ರೀತಿಯ ಆಂತರಿಕ ಸಮಸ್ಯೆ ಕಾಂಗ್ರೆಸ್ ಹಾಗೂ ಸರ್ಕಾರದಲ್ಲಿದೆ. ಇದು ಯಾವ ಹಂತಕ್ಕೆ ಬೇಕಾದರೂ ಬಂದು ಮುಟ್ಟಬಹುದು ಎಂದು ಎಚ್ಚರಿಕೆ ನೀಡಿದರು.
ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಗಳು, ಶಾಸಕರು ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಟಿಂಗ್ ನಿರ್ಮಾತೃಗಳಿದ್ದಾರೆ. ಯಾವ್ಯಾವ ಸಚಿವರ ಮೇಲೆ ಸ್ಟಿಂಗ್ ಆಗಿದೆ ಎಂದು ಸಚಿವರೇ ಭಯಭೀತರಾಗಿರೋದು ಸತ್ಯ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.