ದೆಹಲಿ ಸಿಎಂ ಕೇಜ್ರಿ ರೀತಿ ಕೇಂದ್ರದಿಂದ ಸಿದ್ದು ಟಾರ್ಗೆಟ್: ಕಾಂಗ್ರೆಸ್

Published : Aug 04, 2024, 11:32 AM ISTUpdated : Aug 05, 2024, 10:41 AM IST
ದೆಹಲಿ ಸಿಎಂ ಕೇಜ್ರಿ ರೀತಿ ಕೇಂದ್ರದಿಂದ ಸಿದ್ದು ಟಾರ್ಗೆಟ್: ಕಾಂಗ್ರೆಸ್

ಸಾರಾಂಶ

ಕೇಂದ್ರ ಅಧಿಕಾರ ದುರುಪಯೋಗ ಮಾಡಿಕೊಂಡು ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸುವವಲ್ಲಿ ಯಶಸ್ವಿಯಾಗಿದೆ. ಈಗ ಆ ಪ್ರಯೋಗವನ್ನು ರಾಜ್ಯದಲ್ಲಿ ಮಾಡಲು ಹೊರಟಿದ್ದಾರೆ. ನೇರವಾಗಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ನಾಯಕರು 

ಬೆಂಗಳೂರು(ಆ.04):  ಕೇಂದ್ರ ಸರ್ಕಾರ ದೆಹಲಿ ಮುಖ್ಯಮಂತ್ರಿ ವಿರುದ್ಧ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದಂತೆ, ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ನಡೆಸಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಭಾಧ್ಯಕ್ಷ ಬಿ.ಎಲ್.ಶಂಕರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ಬಿ.ಆರ್. ಪಾಟೀಲ್, ಮೋಹನ್ ಕೊಂಡಜಿ ಕೊಂಡಜ್ಜಿ ಮತ್ತಿತರು, ಕೇಂದ್ರ ಅಧಿಕಾರ ದುರುಪಯೋಗ ಮಾಡಿಕೊಂಡು ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸುವವಲ್ಲಿ ಯಶಸ್ವಿಯಾಗಿದೆ. ಈಗ ಆ ಪ್ರಯೋಗವನ್ನು ರಾಜ್ಯದಲ್ಲಿ ಮಾಡಲು ಹೊರ ಟಿದ್ದಾರೆ. ನೇರವಾಗಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಆರ್‌.ಶಂಕರ್

ಮಾಜಿ ಸಂಸದ ಎಲ್. ಹನುಮಂತಯ್ಯ ಮಾತನಾಡಿ ಕೇಜಿವಾಲ್ ಅವರ ನ್ನು ಲಿಕ್ಕರ್ ಹಗರಣದಲ್ಲಿ ಭಾಗಿ ಯಾಗಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಕೇಂದ್ರಜೈಲಿಗೆ ಕಳುಹಿಸಿದೆ. ಹಿಂ ದೆ ಮಹಾರಾಷ್ಟ್ರ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸವನ್ನು ಬಿಜೆಪಿ ನಡೆಸಿತ್ತು. ಅದೇ ರೀತಿ ಅಧಿಕಾರ ದುರಪಯೋಗಪಡಿಸಿಕೊಂಡು ಕರ್ನಾಟಕದಲ್ಲೂ ಸರ್ಕಾರವನ್ನು ಕೆಡವಲು ಸಿದ್ದರಾ ಮಯ್ಯರನ್ನು ಟಾರ್ಗೆಟ್ ಮಾಡಿ ದ್ದಾರೆ. ಮುಡಾ,ಪಿಟಿಸಿಎಲ್ ಕಾಯ್ದೆ ಯ ವ್ಯಾಪ್ತಿಗೆ ಬರೋದಿಲ್ಲ. ಸಿಎಂ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಪಾದಯಾತ್ರೆ ಮೂಲಕ ಬಿಜೆಪಿ ನಿರ್ಲಜ್ಜ ರಾಜಕೀಯ ಮಾಡುತ್ತಿ ದೆ ಎಂದರು.

ಬಿ.ಎಲ್.ಶಂಕರ್ ಮಾತನಾಡಿ, ಸಿಎಂ ಪಾತ್ರವಿಲ್ಲದಿದ್ದರೂ ಸುಳ್ಳು ಆರೋಪಗಳ ನ್ನು ಮಾಡಿ ರಾಜೀನಾಮೆ ಕೇಳುವ ಮೂಲಕ ತೇಜೋವಧೆ ಮಾಡುತ್ತಿದ್ದಾರೆ. ದ್ದಾರೆ. ಜನರು ಇದನ್ನು ಒಪ್ಪುವುದಿಲ್ಲ ಎಂದರು. ವಿ.ಆ‌ರ್.ಸುದರ್ಶನ್ ಮಾತನಾಡಿ, ಮುಡಾ ಪ್ರಕರಣದಲ್ಲಿ ಸಿಎಂ ಪ್ರಭಾವ ಬೀರಿದ್ದಾರೆ ಎನ್ನುವು ದಕ್ಕೆ ಸಾಕ್ಷಿಯಿಲ್ಲ. ರಾಜಭವನ ದುರುಪಯೋಗಪಡಿಸಿ ಕೊಂಡು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಯತ್ನಿಸಿದ್ದಾರೆ. ರಾಜ್ಯಪಾಲರು ಆತುರದ ನಿರ್ಧಾರ ಮಾಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಶಾಸಕ ಬಿ.ಆರ್. ಪಾಟೀಲ್, ಬಿಜೆಪಿ ಎರಡು ಭಾರಿ ಹಿಂಬಾಗಿಲಿನಿಂದ ಅಧಿಕಾ ರಕ್ಕೆ ಬಂದಿತ್ತು. ಬಹುಮತದಿಂದ ಅಧಿಕಾ ರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ಅಧಿಕಾರಕ್ಕೇರಲು ಕುತಂತ್ರ ನಡೆಸಿದೆ. ಕೇಂದ್ರದ ಬಿಜೆಪಿ ನಾಯಕರು ಸಹಕರಿಸುತ್ತಿದ್ದಾರೆ. ಇದು ತಿರುಕನ ಕನ ಸು.ಸಿಎಂ ಜೊತೆಗೆ ಹೈಕಮಾಂಡ್, ಸಚಿವರು ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರು, ನಾಯಕರು ಬೆಂಬ ಲವಾಗಿ ನಿಂತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌