ಮುಖ್ಯಮಂತ್ರಿಯಾಗಿ 5 ವರ್ಷ ಸಿದ್ದರಾಮಯ್ಯನವರೇ ಇರುತ್ತಾರೆ: ರಾಘವೇಂದ್ರ ಹಿಟ್ನಾಳ

By Kannadaprabha News  |  First Published Aug 4, 2024, 11:12 AM IST

ಮುಡಾ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ, ಅದು ಪ್ರಾಧಿಕಾರದ ಹಂತದಲ್ಲಿಯೇ ಆಗಿರುವಂತಹದ್ದು. ಅಷ್ಟಕ್ಕೂ ಇದು ಬಿಜೆಪಿಯವರು ಆಡಳಿತದಲ್ಲಿದ್ದಾಗ ನಡೆ ದಿರುವ ಪ್ರಕರಣವಾಗಿದೆ. ಹೀಗಿದ್ದರೂ ಕೂಡ ಬಿಜೆಪಿ ವಿನಾಕರಣ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದೆ. ಆದರೆ, ಅವರು ಭ್ರಷ್ಟಾಚಾರ ರಹಿತ ಸಿಎಂ ಆಗಿದ್ದಾರೆ ಎಂದ ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ
 


ಕೊಪ್ಪಳ(ಆ.04):  ಬಿಜೆಪಿಯವರು ಪಾದಯಾತ್ರೆಯನ್ನಾದರೂ ಮಾಡಿಕೊಳ್ಳಲಿ, ಏನು ಬೇಕಾ ದರೂ ಮಾಡಿಕೊಳ್ಳಲಿ, ರಾಜ್ಯದ ಮುಖ್ಯಮಂತ್ರಿಯಾಗಿ 5 ವರ್ಷ ಸಿದ್ದರಾಮಯ್ಯನವರೇ ಇರುತ್ತಾರೆ ಎಂದು ಕೊಪ್ಪಳ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿಹಿಂದುಳಿದವರಿಗೆ, ಬಡವರಿಗೆ, ದಲಿತರಿಗೆ ಅನುಕೂಲ ಮಾಡಿಕೊಡುತ್ತಿರುವುದನ್ನು ಸಹಿಸಲಾಗ ದೆ ಬಿಜೆಪಿ ಆರೋಪ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

undefined

ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಆರ್‌.ಶಂಕರ್

ಮುಡಾ ಪ್ರಕರಣದಲ್ಲಿ ಸಿಎಂ ಪಾತ್ರವಿಲ್ಲ, ಅದು ಪ್ರಾಧಿಕಾರದ ಹಂತದಲ್ಲಿಯೇ ಆಗಿರುವಂತಹದ್ದು. ಅಷ್ಟಕ್ಕೂ ಇದು ಬಿಜೆಪಿಯವರು ಆಡಳಿತದಲ್ಲಿದ್ದಾಗ ನಡೆ ದಿರುವ ಪ್ರಕರಣವಾಗಿದೆ. ಹೀಗಿದ್ದರೂ ಕೂಡ ಬಿಜೆಪಿ ವಿನಾಕರಣ ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದೆ. ಆದರೆ, ಅವರು ಭ್ರಷ್ಟಾಚಾರ ರಹಿತ ಸಿಎಂ ಆಗಿದ್ದಾರೆ ಎಂದರು. 

click me!