ಸಿದ್ದು ಸಂಪುಟ: ಸಾಧನೆ ತೋರದ ಸಚಿವರಿಗೆ ಕಾಂಗ್ರೆಸ್‌ ವರಿಷ್ಠರಿಂದ ಕ್ಲಾಸ್‌..!

By Kannadaprabha News  |  First Published Aug 4, 2024, 10:17 AM IST

ಸಭೆಯಲ್ಲಿ ಪ್ರಮುಖವಾಗಿ ಸರ್ಕಾರದ 33 ಸಚಿವರ ಪೈಕಿ ಕಳೆದ ಒಂದು ವರ್ಷದಿಂದ ತಮಗೆ ಕೊಟ್ಟ ಇಲಾಖೆಯ ಜವಾಬ್ದಾರಿಯನ್ನು ಯಾರಾರು ಎಷ್ಟು ಸಮರ್ಥವಾಗಿ ನಿಭಾಯಿಸಿದ್ದಾರೆ, ಆಡಳಿತಲ್ಲಿ ಏನೇನು ಲೋಪಗಳಾಗಿವೆ, ಯಾವ್ಯಾವ ಸಚಿವರು ತಮ್ಮ ಇಲಾಖಾ ವ್ಯಾಪ್ತಿಯ ನಿಗಮ, ಮಂಡಳಿ ಅಧ್ಯಕ್ಷರುಗಳಾಗಿರುವ ಶಾಸಕರು, ಮುಖಂಡರುಗಳೊಂದಿಗೆ ವಿಶ್ವಾಸಾರ್ಹತೆ, ಸಮನ್ವಯದಿಂದ ನಡೆದುಕೊಳ್ಳದ ಬಗ್ಗೆ ದೂರುಗಳು ಬಂದಿವೆ, ಕಾರ್ಯಕರ್ತರು ನೀಡಿರುವ ದೂರುಗಳು ಸೇರಿದಂತೆ ಎಲ್ಲವನ್ನೂ ಮುಂದಿಟ್ಟು ಚರ್ಚೆ ನಡೆಸಲಿದ್ದಾರೆ.
 


ಬೆಂಗಳೂರು(ಆ.04):  ನಿರೀಕ್ಷೆಯಂತೆ ಕಾಂಗ್ರೆಸ್ ಹೈಕಮಾಂಡ್ ಮುಖಂಡರಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಸಚಿವ ಸಂಪುಟದ ಸದಸ್ಯರ ಬಗ್ಗೆ ತಾವು ಪಡೆದಿರುವ ಅಂತರಿಕ ವರದಿ ಸಮೇತ ಇಂದು(ಭಾನುವಾರ) ನಗರಕ್ಕೆ ಆಗಮಿಸ ಲಿದ್ದು, ಸಾಧನೆ ತೋರದ ಸಚಿವರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ.

ಸುರ್ಜೇವಾಲಾ ಹಾಗೂ ವೇಣುಗೋಪಾಲ್ ಅವರು ಭಾನುವಾರ ಮಧ್ಯಾಹ್ನ 12 ಗಂಟೆಗೆ ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿಯವರ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾ‌ರ್ ಆದಿಯಾಗಿ ಎಲ್ಲ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ.

Tap to resize

Latest Videos

ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಿಲ್ಲಿಸದಿದ್ದರೆ ಉಗ್ರ ಹೋರಾಟ: ಮಾಜಿ ಸಚಿವ ಆರ್‌.ಶಂಕರ್

ಸಭೆಯಲ್ಲಿ ಪ್ರಮುಖವಾಗಿ ಸರ್ಕಾರದ 33 ಸಚಿವರ ಪೈಕಿ ಕಳೆದ ಒಂದು ವರ್ಷದಿಂದ ತಮಗೆ ಕೊಟ್ಟ ಇಲಾಖೆಯ ಜವಾಬ್ದಾರಿಯನ್ನು ಯಾರಾರು ಎಷ್ಟು ಸಮರ್ಥವಾಗಿ ನಿಭಾಯಿಸಿದ್ದಾರೆ, ಆಡಳಿತಲ್ಲಿ ಏನೇನು ಲೋಪಗಳಾಗಿವೆ, ಯಾವ್ಯಾವ ಸಚಿವರು ತಮ್ಮ ಇಲಾಖಾ ವ್ಯಾಪ್ತಿಯ ನಿಗಮ, ಮಂಡಳಿ ಅಧ್ಯಕ್ಷರುಗಳಾಗಿರುವ ಶಾಸಕರು, ಮುಖಂಡರುಗಳೊಂದಿಗೆ ವಿಶ್ವಾಸಾರ್ಹತೆ, ಸಮನ್ವಯದಿಂದ ನಡೆದುಕೊಳ್ಳದ ಬಗ್ಗೆ ದೂರುಗಳು ಬಂದಿವೆ, ಕಾರ್ಯಕರ್ತರು ನೀಡಿರುವ ದೂರುಗಳು ಸೇರಿದಂತೆ ಎಲ್ಲವನ್ನೂ ಮುಂದಿಟ್ಟು ಚರ್ಚೆ ನಡೆಸಲಿದ್ದಾರೆ.

ಪ್ರಮುಖವಾಗಿ ಸಚಿವ ಎಂ.ಬಿ. ಪಾಟೀಲ್ ಮತ್ತು ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜೆಂಟ್‌ನ ಅಧ್ಯಕ್ಷ ಅಪ್ಪಾಜಿ ನಾಡಗೌಡ, ಸಚಿವ ಜಮೀರ್ ಅಹಮದ್ ಮತ್ತು ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ಬಯ್ಯ ಪ್ರಸಾದ್‌ ನಡುವಿನ ತಿಕ್ಕಾಟ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಜಿ ಮೇಯರ್ ಜಿ. ಪದ್ಮಾವತಿ ಸೇರಿದಂತೆ ಇನ್ನು ಕೆಲವರಿಗೆ

ಅಧಿಕಾರ ನೀಡಿದರೂ ಇಲಾಖೆಗಳಿಂದ ಸೂಕ್ತ ಸೌಲಭ್ಯಗಳನ್ನು ಒದಗಿಸದಿರುವ ಬಗ್ಗೆ ಚರ್ಚೆಯಾಗಲಿದೆ. ಸಚಿವರ ಕೃಪಾಕಟಾಕ್ಷದಿಂದ ಅಧಿಕಾರಿ ಗಳು ಅಧ್ಯಕ್ಷರ ಮಾತು ಕೇಳದಿರುವುದೂ ಸೇರಿದಂತೆ ಸಚಿವರ ವಿರುದ್ದ ಕೇಳಿಬಂದಿ ರುವ ದೂರುಗಳ ಬಗ್ಗೆ ಹೈಕಮಾಂಡ್ ನಾಯಕರು ಪ್ರಸ್ತಾಪಿಸಲಿದ್ದಾರೆ. ಜೊತೆಗೆ, ಪ್ರತಿಪಕ್ಷ ಬಿಜೆಪಿಯವರು ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಅಸ್ಥಿರಗೊಳಿಸಲು ನಡೆಸಿರುವ ಷಡ್ಯಂತ್ರಗಳನ್ನು ಹೇಗೆ ಎದುರಿಸಬೇಕು, ಅವುಗಳಿಗೆ ಯಾವ ರೀತಿ ಪ್ರತಿತಂತ್ರ ಹೂಡಬೇಕೆಂಬ ಬಗ್ಗೆ ಸಲಹೆ ನೀಡಲಾಗುವುದು.

ಕೊನೆಗೂ ಕುಮಾರಸ್ವಾಮಿ ಮುನಿಸು ಶಮನ: ಮೈಸೂರಿಗೆ ನಾಳೆಯಿಂದಲೇ ಜಂಟಿ ಪಾದಯಾತ್ರೆ..!

ರಾಜ್ಯಪಾಲರ ವಿರುದ್ಧ ಹೋರಾಟಕ್ಕೂ ಚರ್ಚೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್‌ನ ಇಬ್ಬರು ಪ್ರಮುಖ ನಾಯಕರು ಭಾನುವಾರ ರಾಜ್ಯ ಸರ್ಕಾರ ಸಚಿವರೊಂದಿಗೆ ನಡೆಸುವ ಸಭೆಯಲ್ಲಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್‌ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಹೋರಾಟ ರೂಪಿಸುವ ಕುರಿತೂ ಚರ್ಚೆ ನಡೆಸಲಿದ್ದಾರೆ.

ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಕಾಂಗ್ರೆಸ್ ವರಿಷ್ಠರು ಬೆಂಗಳೂರಿನಲ್ಲಿ ಸಚಿವರಿಗೆ 'ಕ್ಲಾಸ್' ತೆಗೆದುಕೊಳ್ಳುವ ಬಗ್ಗೆ 'ಕನ್ನಡಪ್ರಭ' ಆ.1 ರಂದೇ ವರದಿ ಮಾಡಿತ್ತು.

click me!