ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಯೋಗ್ಯವಲ್ಲ; ಮಾಜಿ ಶಾಸಕ ಚರಂತಿಮಠ

By Sathish Kumar KH  |  First Published May 27, 2024, 7:13 PM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಯೋಗ್ಯವಲ್ಲ. ಆಡಳಿತ ಸರಿಯಾಗಿ ನಡೆಸಲು ಬರದವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಬಿಜೆಪಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದ್ದಾರೆ.


ಬಾಗಲಕೋಟೆ (ಮೇ 27): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಯೋಗ್ಯವಲ್ಲ. ಸರ್ಕಾರ ಹೋದ್ರ ಚಲೋ ಆಗ್ತದ. ಇನ್ನೂ ನಾಲ್ಕು ವರ್ಷ ಹೆಂಗ ಸಹಿಸೋದು. ಆಡಳಿತ ಸರಿಯಾಗಿ ನಡೆಸಲು ಬರದವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಬಿಜೆಪಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದ್ದಾರೆ.

ಈ ಕುರಿತು ಬಾಗಲಕೋಟೆಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ದೇವರ ದಯೆಯಿಂದ ಅಬ್ ಕಿ ಬಾರ್ ಚಾರಸೌ(400) ಪಾರ್ ಆಗುತ್ತದೆ. ಈಗ ಅತ್ಯಂತ ಸಮೀಪದಲ್ಲಿದ್ದೇವೆ. ಲೋಕಸಭೆ ಚುನಾವಣೆ ಫಲಿತಾಂಶ ಶೀಘ್ರದಲ್ಲಿದೆ. ಬಹುಮತದಿಂದ ಮತ್ತೆ ಮೋದಿ ಪ್ರಧಾನಿಯಾಗ್ತಾರೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದ್ರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದು ಕಾಂಗ್ರೆಸ್'ನವರೇ ಹೇಳ್ತಿದ್ದಾರೆ. ಇದನ್ನು ನಾವಲ್ಲ ಕಾಂಗ್ರೆಸ್ ನವರೇ ಹೇಳ್ತಾ ಇದ್ದಾರೆ ಎಂದು ಟೀಕೆ ಮಾಡಿದರು.

Tap to resize

Latest Videos

undefined

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 85 ಕೋಟಿ ರೂ. ಅವ್ಯವಹಾರ; ಸಚಿವರ ಹೆಸರು ಬರೆದಿಟ್ಟು ಅಧಿಕಾರಿ ಆತ್ಮಹತ್ಯೆ

ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇರುತ್ತೋ ಇಲ್ಲೋ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹುಬ್ಬಳ್ಳಿಯ ನೇಹಾ,ಅಂಜಲಿ ಹತ್ಯೆ ಪ್ರಕರಣ,ಲಾಕಪ್ ಡೆತ್ ಪ್ರಕರಣ ನಡೆದಿದೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಅಭಿವೃದ್ದಿ ಕೆಲಸಗಳೇ ನಡೆಯುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಲು ಯೋಗ್ಯವಲ್ಲ. ಸರ್ಕಾರ ಹೋದ್ರ ಚಲೋ ಆಗ್ತದ. ಇನ್ನೂ ನಾಲ್ಕು ವರ್ಷ ಹೆಂಗ ಸಹಿಸೋದು. ಆಡಳಿತ ಸರಿಯಾಗಿ ನಡೆಸಲು ಬರದವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಕಿಡಿಕಾರಿದರು.

ಪ್ರಜ್ವಲ್ ರೇವಣ್ಣ ತಾನೇ ಶರಣಾದರೂ, ಪೊಲೀಸರೇ ಕರೆತಂದರೂ ಅರೆಸ್ಟ್ ಆಗುವುದು ಖಚಿತ; ಗೃಹ ಸಚಿವ ಪರಮೇಶ್ವರ

ಈಗ ರಾಜ್ಯದಲ್ಲಿ ಆಸ್ತಿ ಮೌಲ್ಯವನ್ನು ಹೆಚ್ಚಳ ಮಾಡಿದ್ದಲ್ಲದೇ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮಾಡಿ, ಜನರ ಕಿಸೆದಲ್ಲಿನ ರೊಕ್ಕವನ್ನು ಹೇಗೆ ಹೊರಗೆ ತೆಗೆಯಬೇಕು ಎಂದು ಅವರಿಗೆ ಗೊತ್ತಿದೆ. ಶನಿವಾರ ದಿನ ಚುನಾವಣೆ ಮುಗೀತು ಅಂದರೆ ಮಂಗಳವಾರ ರಿಸಲ್ಟ್ ಬರುತ್ತದೆ. ಇನ್ನು ಜನರು ನಾವು ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದಾಗ ಕಾಂಗ್ರೆಸ್‌ನವರು ಕರೆದರೆಂದು ಹೇಳಿ ಪ್ರಚಾರದ ಕಾರ್ಯಕ್ಕೆ ಹೋದರೆ 200 ರೂ.ನಿಂದ 300 ರೂ. ಬರುತ್ತದೆ ಎಂದು ಹೇಳುತ್ತಿದ್ದರು. ಆದರೆ, ಈಗ ಚುನಾವಣಾ ಪ್ರಚಾರಕ್ಕೆ ಕಾರ್ಯಕ್ಕೆ ಹೋದವರು ನಮಗೆ 2,000 ರೂ.ನಿಂದ 3,000 ರೂ. ಕೊಡ್ತಾರಂತ ಹೇಳುತ್ತಾರೆ. ಇದರಿಂದ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಲೂಟಿ ಮಾಡುತ್ತಿದೆ ಎನ್ನುವುದು ತಿಳಿಯುತ್ತಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆರೋಪಿಸಿದ್ದಾರೆ.

click me!