ರಾಜ್ಯದಲ್ಲಿದೆ ಅಭಿವೃದ್ಧಿ ಶೂನ್ಯ ಕಾಂಗ್ರೆಸ್‌ ಸರ್ಕಾರ: ಮಾಜಿ ಸಚಿವ ಸುನೀಲ್‌ ಕುಮಾರ್‌

By Kannadaprabha News  |  First Published May 27, 2024, 5:09 PM IST

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಅಭಿವೃದ್ಧಿ ಶೂನ್ಯ ಸರ್ಕಾರ ಇದಾಗಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದರು. 


ಕಡೂರು (ಮೇ.27): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಅಭಿವೃದ್ಧಿ ಶೂನ್ಯ ಸರ್ಕಾರ ಇದಾಗಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದರು. ವಿಧಾನ ಪರಿಷತ್ತಿನ ನೈರುತ್ಯ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಚುನಾವಣೆ ಹಿನ್ನಲೆಯಲ್ಲಿ ಕಡೂರಿನ ಸುರುಚಿ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಒಂದು ವರ್ಷ ಪೂರೈಸಿರುವ ಸರ್ಕಾರ100 ಮೀಟರ್ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಅಸಮರ್ಥವಾದ ಸಂಪುಟ ರಾಜ್ಯದಲ್ಲಿದ್ದು ಇಂತಹ ಸರ್ಕಾರದ ವಿರುದ್ಧ ಪದವೀಧರರು ಹಾಗೂ ಶಿಕ್ಷಕರು ಜವಾಬ್ದಾರಿಯುತವಾಗಿ ಮತ ಹಾಕಬೇಕಾಗಿದೆ ಎಂದರು.

ಚೆನ್ನಗಿರಿಯಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡುವ ಸಂಸ್ಕೃತಿ ಈ ಕಾಂಗ್ರೆಸ್ ಸರ್ಕಾರದಲ್ಲಿ ಬೆಳೆದಿದೆ ಉಡುಪಿಯಲ್ಲಿ ಗ್ಯಾಂಗ್ ವಾರ್, ಹುಬ್ಬಳ್ಳಿ ಘಟನೆಗಳನ್ನು ನೋಡಿದರೆ ರಾಜ್ಯ ಸರ್ಕಾರ ವೈಫಲ್ಯಗಳು ಎಷ್ಟು ದೊಡ್ಡ ಪ್ರಮಾಣದಲ್ಲಿ ಇದೆ ಎಂಬುದು ತಿಳಿಯುತ್ತದೆ. ಕಳೆದ 11 ವರ್ಷಗಳಿಂದ ಈ ಪದವೀಧರ ಕ್ಷೇತ್ರ ಬಿಜೆಪಿಗೆ ಸತತ ಗೆಲುವು ಕೊಡುತ್ತಾ ಬಂದಿರುವ ಕ್ಷೇತ್ರವಾಗಿದೆ. ಈ ಬಾರಿ ಪದವೀಧರ ಕ್ಷೇತ್ರದಿಂದ ವೈದ್ಯಕೀಯ ಕ್ಷೇತ್ರದಿಂದ ಸಮಾಜ ಸೇವೆ ಮಾಡುತ್ತಾ ಸರಳತೆ ಪ್ರತೀಕವಾದ ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರ ದನಿಯಾಗಿರುವ ಎಸ್. ಎಲ್. ಭೋಜೇಗೌಡರು ಕಣದಲ್ಲಿದ್ದಾರೆ ಎಂದರು.

Latest Videos

undefined

ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಎಂದೂ ಕಡೆಗಣಿಸಿಲ್ಲ: ಗೃಹ ಸಚಿವ ಪರಮೇಶ್ವರ್

ಎಲ್ಲರ ಮನೆಗೆ ಮತ ಕೇಳಲು ಬರಲು ಸಾಧ್ಯವಿಲ್ಲ ಹಾಗಾಗಿ 25 ಜನರ ತಂಡ ಪದವೀಧರ ಮತ್ತು ಶಿಕ್ಷಕರ ಮತದಾರರ ಮನವೊಲಿಸಿ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿಸಬೇಕು. ನಮ್ಮ ಮಾಜಿ ಶಾಸಕರಾದ ಬೆಳ್ಳಿ ಪ್ರಕಾಶ್ ಮತ್ತು ಇತರ ಮುಖಂಡರು ಜೂನ್ 3 ರಂದು ಎಲ್ಲ ಮತದಾರರ ಮತ ಹಾಕಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ಅಪೆಕ್ಸ್‌ ಬ್ಯಾಂಕ್ ಅಧ್ಯಕ್ಷ ಹಾಗು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಮಾತನಾಡಿ, ನೈರುತ್ಯ ಪಧವೀಧರ ಮತ್ತು ಶಿಕ್ಷಕರ ಕ್ಷೇತ್ರದ ವಿಪ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಕಡೂರು ಕ್ಷೇತ್ರದಲ್ಲಿ ಶೇ80 ಮತಗಳನ್ನು ದೊರಕಿಸಿಕೊಡುವ ಜವಾಬ್ದಾರಿ ನಮ್ಮದು. ಡಾ.ಧನಂಜಯ ಸರ್ಜಿ ವೈದ್ಯರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಚಾಣಾಕ್ಷ ರಾದ ಭೋಜೇಗೌಡರು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲು ಇಬ್ಬರನ್ನು ಗೆಲ್ಲಿಸಿಕೊಡುವುದಾಗಿ ಸಂಕಲ್ಪ ಮಾಡೋಣ ಎಂದರು.

ಪಧವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಸಾಮಾಜಿಕವಾಗಿ ನನ್ನ ಕೈಲಾದ ಸೇವೆ ಮಾಡುತ್ತಿದ್ದು, ಮತ್ತಷ್ಟು ಸಮಾಜಮುಖಿಯಾಗಿ ಸೇವೆ ಮಾಡಲು ವಿಧಾನಪರಿಷತ್ ಸದಸ್ಯತ್ವ ಅಗತ್ಯವೆಂಬ ಕಾರಣದಿಂದ ಮತ್ತು ರಾಷ್ಟ್ರ ಸೇವೆ ಮಾಡುವ ಇಚ್ಚೆಯಿಂದ ಚುನಾವಣೆಗೆ ಸ್ಪರ್ದಿಸಿದ್ದು, ಎಲ್ಲ ಮುಖಂಡರ ಮತ್ತು ಕಾರ್ಯಕರ್ತರ ಬೆಂಬಲದಿಂದ ಗೆಲುವು ಪಡೆಯುವ ವಿಶ್ವಾಸವಿದೆ ತಮಗೆ ಬೆಂಬಲಿಸಬೇಕು ಎಂದರು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. 

ಪ್ರಿಯಾಂಕ್‌ ಖರ್ಗೆ ಸೂಪರ್ ಸಿಎಂ: ಮಾಜಿ ಸಚಿವ ಎನ್.ಮಹೇಶ್‌

ಅವುಗಳ ಬಗ್ಗೆ ವಿಧಾನಪರಿಷತ್ತಿನಲ್ಲಿ ಬಹಳಷ್ಟು ಹೋರಾಟ ನಡೆಸಿದ್ದೇನೆ. ಶಿಕ್ಷಕರ ಧ್ವನಿಯಾಗಿ ಮುಂದೆಯೂ ಕಾರ್ಯ ನಿರ್ವಹಿಸುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಎಚ್.ಸಿ. ಕಲ್ಮರುಡಪ್ಪ, ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಮುಖಂಡರಾದ ದತ್ತಾತ್ರಿ, ದಾನಿ ಉಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಕುರುಬಗೆರೆ ಮಹೇಶ್ ಮತ್ತಿತರರರು ಇದ್ದರು.

click me!