
ಬೆಂಗಳೂರು, (ಅ.16): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವಿರುದ್ಧ ಕಾಂಗ್ರೆಸ್ (Congress) ಕಿಡಿಕಾರಿದೆ.
ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಎಂದು ಪ್ರಶ್ನಿಸಿದೆ.
ಟ್ವೀಟ್ Tweet) ಮಾಡಿರುವ ಕಾಂಗ್ರೆಸ್, ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಸಿಟಿ ರವಿ ಕೋಟಿರವಿ ಆಗಿದ್ದು ಹೇಗೆ? ಎಲ್ಲಿ, ಯಾರಿಂದ, ಎಷ್ಟೆಷ್ಟು ಕಲೆಕ್ಷನ್ ಮಾಡಿದಿರಿ? ಲೂಟಿರವಿ ಎಂದು ಪ್ರಶ್ನಿಸಿದೆ.
ರಾಮಮಂದಿರ ನಿರ್ಮಾಣದಲ್ಲಿ ಅವ್ಯವಹಾರ: ಕುಮಾರಸ್ವಾಮಿ ಗಂಭೀರ ಆರೋಪ
2004-2010ರ ಮಧ್ಯೆ ನಿಮ್ಮ ಆಸ್ತಿ 49 ಲಕ್ಷದಿಂದ 3.18 ಕೋಟಿ ರು ಏರಿಕೆಯಾಗಿದೆ ಎಂಬ ದೂರು ದಾಖಲಾಗಿತ್ತು. 2018 ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕವಾಗಿದೆ ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿರವಿ ಅವರೇ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಎಚ್‌ಡಿಕೆಗೆ ಸಿ.ಟಿ.ರವಿ ತಿರುಗೇಟು?
ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಮ ಮಂದಿರಕ್ಕೆ ಎಷ್ಟು ಹಣ ಕೊಟ್ಟಿದ್ದೇನೆ ಎಂದು ಮೊದಲು ತಿಳಿಸಿ, ನಂತರ ಲೆಕ್ಕ ಕೇಳಲಿ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದು, 'ತಾನು ಕಳ್ಳ ಪರರ ನಂಬ' ಗಾದೆ ನೆನಪಿಸುವಂತಿದೆ. ರಾಮ ಮಂದಿರ (Ram Mandir) ಚಳವಳಿಯಲ್ಲಿ ಅವರ ಪಾತ್ರ ಏನು? ರಾಮಜ್ಯೋತಿ ಯಾತ್ರೆ, ಇಟ್ಟಿಗೆ ಪೂಜೆ, ಶಿಲಾ ಪೂಜೆ, ಹೋರಾಟ, ಕರ ಸೇವೆಯಲ್ಲಿ ಅವರು ಪಾಲ್ಗೊಂಡಿದ್ರಾ? ಎಂದು ಪ್ರಶ್ನಿಸಿದರು.
ದುರುಪಯೋಗ ಮಾಡಿಕೊಳ್ಳಲು ಅಲ್ಲಿ 'ಫ್ಯಾಮಿಲಿ ಖಾಂದಾನ್' ಇಲ್ಲ. ಅಲ್ಲಿ ಇರುವವರೆಲ್ಲ ಸಮಾಜಕ್ಕಾಗಿ ಕೊಡುವವರು. ಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲ, ಉದ್ದೇಶ ಇಲ್ಲ. ಅಯೋಧ್ಯೆ ಹೋರಾಟ ಮಾಡುವಾಗ ಅವರು ನಮ್ಮ ಬೆಂಬಲಕ್ಕೆ ನಿಂತಿದ್ರಾ? ರಾಮ ಮಂದಿರ ಕಟ್ಟುತ್ತೇವೆ ಎಂದು ನಾವು ಹೇಳುವಾಗ ಅವರು ಮಸೀದಿ ಜಪ ಮಾಡುತ್ತಿದ್ದರು ಎಚ್‌ಡಿಕೆಗೆ ತಿರುಗೇಟು ಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.