* ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡ ಸತೀಶ್ ಜಾರಕಿಹೊಳಿ
* ಉಪಚುನಾವಣೆ ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯೋಣ
* ಹಾನಗಲ್ ಕ್ಷೇತ್ರ ಆಡಳಿತ ಪಕ್ಷ ಬಿಜೆಪಿಗೂ ಪ್ರತಿಷ್ಠೆ, ನಮಗೂ ಪ್ರತಿಷ್ಠೆ
ಹಾನಗಲ್(ಅ.16): ಮತಕ್ಷೇತ್ರದ ತಿಳವಳ್ಳಿ ಗ್ರಾಮದಲ್ಲಿ ಶುಕ್ರವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ(Satish Jarkiholi) ಸಮ್ಮುಖದಲ್ಲಿ ನೂರಾರು ಬಿಜೆಪಿ(BJP) ಕಾರ್ಯಕರ್ತರು ಕಾಂಗ್ರೆಸ್(Congress) ಸೇರ್ಪಡೆಯಾಗಿದ್ದಾರೆ.
ಸತೀಶ್ ಜಾರಕಿಹೊಳಿ ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸತೀಶ್ ಅವರನ್ನು ಸನ್ಮಾನಿಸಿದರು. ಆನಂತರ ಕಾರ್ಯಕರ್ತರನ್ನುದ್ದೇಶಿಸಿ(Activists0 ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊ, ಮಸ್ಕಿಯಲ್ಲಿ(Maski)ಈಗಾಗಲೇ ಫಸ್ಟ್ ಡೋಸ್ ಲಸಿಕೆ(Vaccine) ಆಗಿದೆ. ಈಗ ಹಾನಗಲ್‌ನಲ್ಲಿ(Hanagal) ಸೆಕೆಂಡ್ ಡೋಸ್ ಲಸಿಕೆ ಯಶಸ್ವಿಯಾಗಿ ಹಾಕಬೇಕಿದೆ. ಎರಡು ಡೋಸ್‌ಗಳನ್ನು ಪಡೆದರೆ ಕೊರೊನಾ(Coronavirus) ಬರುವುದಿಲ್ಲ ಎಂದು ಹೇಳುತ್ತಾರೆ. ಅದೇ ರೀತಿ ಈ ಉಪಚುನಾವಣೆಯನ್ನೂ(Byelection) ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯೋಣ ಎಂದು ಹೇಳಿದರು.
undefined
ಹಾನಗಲ್ ಮತಕ್ಷೇತ್ರದಲ್ಲಿ ಜನರು ಕಾಂಗ್ರೆಸ್(Congress) ಮೇಲೆ ಒಲವು ಹೊಂದಿದ್ದಾರೆ. ಹೀಗಾಗಿ, ಉಪಚುನಾವಣೆಯಲ್ಲಿ ಪಕ್ಷದ ಗೆಲುವು ಖಚಿತ ಎಂದು ಹೇಳಿದರು. ಹಿಂದಿನ ಶಾಸಕರು ಕ್ಷೇತ್ರದ ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ, ಹಿಂದಿನ ಚುನಾವಣೆಯಲ್ಲಿ(Election) ಪರಾಜಿತರಾದರೂ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರು ಕ್ಷೇತ್ರದಲ್ಲೇ ಇದ್ದಾರೆ. ಜನರೊಂದಿಗೆ ಆತ್ಮೀಯತೆ ಇಟ್ಟುಕೊಂಡಿದ್ದಾರೆ. ಹೀಗಾಗಿ, ಜನರು ಮಾನೆ ಅವರಿಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.
ಲೂಟಿಕೋರ ಬಿಜೆಪಿಗೆ ತಕ್ಕ ಪಾಠ ಕಲಿಸಲು ಜನ ನಿರ್ಣಯ: ಸತೀಶ್ ಜಾರಕಿಹೊಳಿ
ಸೋಲು-ಗೆಲುವು ಸಹಜ. ಆದರೆ, ಜನಪ್ರತಿನಿಧಿಗಳಾದವರಿಗೆ ಸೇವಾ ಮನೋಭಾವ ಇರಬೇಕು. ಸೇವಾ ಮನೋಭಾವ ಇದ್ದರೆ ಮಾತ್ರ ರಾಜಕಾರಣದಲ್ಲಿ(Politics) ಗಟ್ಟಿಯಾಗಿ ಉಳಿಯಲು ಸಾಧ್ಯವಾಗುತ್ತದೆ. ಮಾನೆಗೆ ಸೇವಾ ಮನೋಭಾವವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹರ್ಡೀಕರ್ ಪ್ರತಿಮೆಗೆ ಮಾಲಾರ್ಪಣೆ:
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ರಾಷ್ಟ್ರೀಯ ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ನಾ.ಸು. ಹರ್ಡೀಕರ್ ಪ್ರತಿಮೆಗೆ ಸತೀಶ ಜಾರಕಿಹೊಳಿ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ, ಕಾಂಗ್ರೆಸ್ ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಪಾಲಯ್ಯ, ಮುಖಂಡ ಪ್ರಕಾಶ ಹಾದಿಮನಿ, ಮುಖಂಡರಾದ ಮನೋಹರ ತಹಶೀಲ್ದಾರ್, ಪ್ರಕಾಶಗೌಡ ಪಾಟೀಲ್, ರುಕ್ಮಿಣಿ ಸಾಹುಕಾರ್, ಪುಟ್ಟಪ್ಪ ನೆರೆಗಲ್, ಆರ್.ಎಸ್. ಪಾಟೀಲ್, ಸುಭಾಸ ತಳವಾರ ಸೇರಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್‌ನಲ್ಲಿ ಮತ್ತೆ ಬಂಡಾಯದ ಸದ್ದು..!
ಮುಖಂಡರು, ಕಾರ್ಯಕರ್ತರಲ್ಲಿ ಹುಮ್ಮಸ್ಸು
ಹಾನಗಲ್ ಉಪಚುನಾವಣೆ ಗೆಲ್ಲಲು ಯಾವ ರೀತಿ ರಣತಂತ್ರ ರೂಪಿಸಬೇಕು ಎಂದು ಮುಖಂಡರು, ಕಾರ್ಯಕರ್ತರಿಗೆ ಸೂಚನೆ ನೀಡಿರುವೆ. ಕ್ಷೇತ್ರದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಶ್ರೀನಿವಾಸ ಮಾನೆ ಅವರ ಬಗ್ಗೆ ಶ್ರಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಹಾನಗಲ್ ಕ್ಷೇತ್ರದ ವಿವಿಧೆಡೆ ಪ್ರಚಾರದಲ್ಲಿ ತೊಡಗಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಇಲ್ಲಿನ ಪ್ರಚಾರಕ್ಕೆ ಸುಮಾರು ನಾಯಕರು ಬರಲಿದ್ದಾರೆ. ಸಿಎಂ(Basavaraj Bommai) ತವರು ಕ್ಷೇತ್ರವಾದರು, ಓಟು ಹಾಕುವವರು ಹಾನಗಲ್ ಕ್ಷೇತ್ರದ ಮತದಾರರು. ಈ ಕ್ಷೇತ್ರ ಆಡಳಿತ ಪಕ್ಷ ಬಿಜೆಪಿಗೂ ಪ್ರತಿಷ್ಠೆ, ನಮಗೂ ಪ್ರತಿಷ್ಠೆ. ಸಿಎಂ ಅವರು ಬಂದು ಹೋಗಲಿ, ಅವರಿಗೂ ಒಂದೆ ವೋಟು. ಜನಸಾಮಾನ್ಯರಿಗೆ ಒಂದೆ ವೋಟು(Vote). ಸಿಎಂ ಅವರು ಅವರ ಡ್ಯೂಟಿ ಮಾಡತಾರೆ, ನಾವು ನಮ್ಮ ಡ್ಯೂಟಿ ಮಾಡುತ್ತೇವೆ. ಮೊನ್ನೆ ನಡೆದ ಬೆಳಗಾವಿ(Belagavi) ಚುನಾವಣೆಯಲ್ಲಿ ದಾಖಲೆ ಮತ ಪಡೆದುಕೊಂಡಿದ್ದೇವೆ. ಮಸ್ಕಿಯಲ್ಲಿ ಗೆದ್ದಿದ್ದೇವೆ. ಅದೇ ರೀತಿ ಸಿಂದಗಿ(Sindagi) ಹಾಗೂ ಹಾನಗಲ್ ನಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.