ಹಿಂದೂ ದೇವಾಲಯಗಳನ್ನ RSS ಗುತ್ತಿಗೆ ಪಡೆದಿದ್ಯಾ?: ಮತ್ತೆ ಬಿಜೆಪಿ ವಿರುದ್ಧ ಎಚ್‌ಡಿಕೆ ಕಿಡಿ

By Suvarna News  |  First Published Oct 16, 2021, 3:52 PM IST

*  40 ವರ್ಷದ ಹಿಂದಿನ ಆರ್‌ಎಸ್‌ಎಸ್‌ ಬೇರೆ ಇವತ್ತಿನ ಆರ್‌ಎಸ್‌ಎಸ್‌ ಬೇರೆ
*  ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆ ಮಾಡಿಲ್ಲ 
*  ದಲಿತ ಮುಖಂಡರುಗಳಿಗೆ ಕಾಂಗ್ರೆಸ್‌ ಯಾವ ಗೌರವ ನೀಡಿದೆ?
 


ರಾಮನಗರ(ಅ.16): ಸಿಎಂ ಇಬ್ರಾಹಿಂ(CM Ibrahim) ಅವರಿಗೆ ಆದಂತಹ ಅನುಭವದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿಎಂ ಇಬ್ರಾಹಿಂ ಅವರನ್ನು ಕಾಂಗ್ರೆಸ್(Congress) ಪಕ್ಷ ಕೇವಲ ಭಾಷಣಕ್ಕಾಗಿ ಇರಿಸಿಕೊಂಡಿದೆ. ಭಾಷಣದ ಮೂಲಕ ಜನರನ್ನು ಆಕರ್ಷಣೆಯನ್ನು ಮಾಡ್ಲಿಕ್ಕೆ ಕಾಂಗ್ರೆಸ್ ನಾಯಕರು ಇಬ್ರಾಹಿಂ ಅವರನ್ನ ಇಟ್ಟುಕೊಂಡಿದ್ದಾರೆ ಅಂತ ಹೇಳುವ ಮೂಲಕ ಕಾಂಗ್ರೆಸ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಕಿಡಿಕಾರಿದ್ದಾರೆ.

ಇಂದು(ಶನಿವಾರ) ಜಿಲ್ಲೆಯ ಚನ್ನಪಟ್ಟಣದಲ್ಲಿ(Channapatna) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್(JDS) ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕುವುದು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವುದಕ್ಕೆ ಅಂತ ಹೇಳಿ ಪದೇ ಪದೇ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ(Election) ಜೆಡಿಎಸ್ ಬಿಜೆಪಿಯ(BJP) ಬಿ ಟೀಮ್ ಅಂತಾ ಕಾಂಗ್ರೆಸ್ ನಾಯಕರ ಪ್ರಚಾರ ಮಾಡಿದರು. 2012ರ ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು (Siddaramaiah) ಅಲ್ಪಸಂಖ್ಯಾತರ(Minorities) ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು ಎಂದು ಸಿದ್ದರಾಮಯ್ಯ ಅವರಿಗೆ ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. 

Tap to resize

Latest Videos

ಮುಸ್ಲಿಂ ನಾಯಕರನ್ನ ಮುಗಿಸಿದ್ದೇ ಸಿದ್ದರಾಮಯ್ಯ: ಸಿದ್ದು ವಿರುದ್ಧ HDK ವಾಗ್ದಾಳಿ

ಇದೇ ವೇಳೆ ಸಿದ್ದರಾಮಯ್ಯನವರಿಗೆ ಪಂಚ ಪ್ರಶ್ನೆ ಕೇಳಿದ ಕುಮಾರಸ್ವಾಮಿ, ಇಕ್ಬಾಲ್ ಸರಡಗಿ(Iqbal Saradagi) ಅವರನ್ನ ಚುನಾವಣೆಯಲ್ಲಿ ಸೋಲಿಸಿದವರು ಯಾರು?. ಕಾಂಗ್ರೆಸ್ ಪಕ್ಷದಿಂದಲೇ ಅಧಿಕೃತವಾಗಿ ಸ್ಪರ್ಧೆ ಮಾಡಿದಂತ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಏನು?. ರೋಷನ್ ಬೇಗ್(Roshan Baig) ಅವರನ್ನ 6 ವರ್ಷ ಸಸ್ಪೆಂಡ್ ಮಾಡ್ಬಿಟ್ರು. ಲೋಕಸಭಾ ಚುನಾವಣೆಯ(Lok Sabha Election) ಹಿನ್ನೆಲೆಯಲ್ಲಿ ಕೊಟ್ಟಂತಹ ಒಂದು ಹೇಳಿಕೆಯನ್ನೇ ಆಧರಿಸಿ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡದೆ 6 ವರ್ಷ ಸಸ್ಪೆಂಡ್ ಮಾಡಿಬಿಟ್ಟರು. ಜಾಫರ್ ಶರೀಫ್ ಅವರ ಮೊಮ್ಮಗನನ್ನ ಚುನಾವಣೆಗೆ ನಿಲ್ಲಿಸಿ ಆತನ ಸೋಲಿನಲ್ಲಿ ಯಾರು ಕಾರಣರಾಗಿದ್ದರು?. ಇದರಲ್ಲಿ ಸಿದ್ದರಾಮಯ್ಯನವರ ಪಾತ್ರ ಏನಿತ್ತು ಇವರ ಹಿಂಬಾಲಕರ ಪಾತ್ರ ಏನಿತ್ತು?. ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವಾಗ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್(Tanvir Sait) ಬಗ್ಗೆ ಯಾವ ರೀತಿ ಪದ ಬಳಕೆಯನ್ನು ಮಾಡಿದ್ರು ಅನ್ನೋದನ್ನ ಹೇಳಬೇಕು ಅಂತ ಸಿದ್ದುಗೆ ಎಚ್‌ಡಿಕೆ ಒತ್ತಾಯಿಸಿದ್ದಾರೆ. 

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ ಸಿದ್ದರಾಮಯ್ಯ

ವಿಧಾನಸೌಧದ ಮುಂದೆ ಸಿದ್ದರಾಮಯ್ಯನವರ ಭಾಷಣ ಮಾಡಿದ್ರಲ್ಲ ರೋಷನ್ ಬೇಗ್ ಏನೆಲ್ಲ ಪದಬಳಕೆ ಮಾಡಿದ್ರು ಎಂಬುದು ಗೊತ್ತಿದೆ ಅಂತ. ಸಲೀಂ(Saleem) ವಿಚಾರದಲ್ಲಿ ಸಿದ್ದರಾಮಯ್ಯನವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಿದ್ದಾರೆ. ನಮ್ಮ ಸಿದ್ದರಾಮಯ್ಯ ಅವರನ್ನ ನಮ್ಮ ನಾಯಕರು, ಗುರುಗಳು, ನಮ್ಮ ಗಾಡ್‌ ಫಾದರ್‌ ಅಂತೇಳಿ ಸಲೀಂ ಹೇಳುತ್ತಿದ್ದರು. ಈಗ ಆತನನ್ನು ಆರು ವರ್ಷ ಅಮಾನತು ಮಾಡಿದ್ದಾರೆ. ಆರು ಬಾರಿ ಸಂಸದರಾಗಿದ್ದ ಕೋಲಾರದ(Kolar) ಮುನಿಯಪ್ಪರವರ(KH Muniyappa) ಸೋಲಿಗೂ ಕೂಡ ಸಿದ್ದರಾಮಯ್ಯನವರ ಹಿಂದೆ ಮುಂದೆ ಇದ್ದ ನಾಯಕರೇ ಕಾರಣರಾಗಿದ್ದಾರೆ ಅಂತ ಆರೋಪಿಸಿದ್ದಾರೆ. 

ಸಿದ್ದರಾಮಯ್ಯ ಟಾರ್ಗೆಟ್ ಮಾಡಿ ಮಾತನಾಡಿಲ್ಲ

ಅಲ್ಪಸಂಖ್ಯಾತ ಮುಖಂಡರಿಗೆ ಹಾಗೂ ದಲಿತ(Dalit) ಮುಖಂಡರುಗಳಿಗೆ ಕಾಂಗ್ರೆಸ್‌ ಯಾವ ಗೌರವ ನೀಡಿದೆ. ಓಬಿಸಿ ಹೆಸರಿನಲ್ಲಿ ಸಮಾವೇಶವನ್ನು ಮಾಡಲಿಕ್ಕೆ ಸಿದ್ದರಾಮಯ್ಯನವರು ಹೊರಟಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವುದಿರಲಿ ನಿಮ್ಮ ಕಣ್ಣ ಮುಂದೆ ನಡೆದ ಘಟನೆಗಳ ಬಗ್ಗೆ ಸಿದ್ದರಾಮಯ್ಯನವರೇ ಉತ್ತರ ಕೊಡಿ. ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ರಾಜಕೀಯದ ನರಮೇಧ ಅಂತ ಹೇಳಿದ್ದೇನೆ ಹೊರತು ಸಿದ್ದರಾಮಯ್ಯನವರ ನರಮೇಧ ಅಂತ ಹೇಳಿಲ್ಲ. ಅಲ್ಪಸಂಖ್ಯಾತ ನಾಯಕರ ನರಮೇಧ ಹೇಗೆ ನಡೆಯಿತು ಅಂತ ಹೇಳಿದ್ದೇನೆ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆ ಮಾಡಿಲ್ಲ ಅಂತ ಹೇಳಿದ್ದಾರೆ.

ವಿಪಕ್ಷ ನಾಯಕ ಶಾಡೋ ಸಿಎಂ ಇದ್ದಂತೆ: ಸುಧಾಕರ್‌ 

ಆರ್‌ಎಸ್‌ಎಸ್‌(RSS) ಬಗ್ಗೆ ಮತ್ತೆ ಮಾತಾನಡಿದ ಕುಮಾರಸ್ವಾಮಿ ಅವರು, ಎಲ್ಲ ಯೂನಿವರ್ಸಿಟಿಗಳ(University) ಸಿಂಡಿಕೇಟ್‌ಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನ ಸದ್ಯರನ್ನಾಗಿ ಮಾಡಿಕೊಂಡಿದ್ದಾರೆ. ಯೂನಿವರ್ಸಿಟಿಯಲ್ಲಿ ಕೆಲಸ ಆಗ್ಬೇಕಂದ್ರೆ ಸಿಂಡಿಕೇಟ್ ಸದಸ್ಯರು ಲಕ್ಷ ಲಕ್ಷ ಹಣ ಕೇಳುತ್ತಾರೆ. 40 ವರ್ಷದ ಹಿಂದಿನ ಆರ್‌ಎಸ್‌ಎಸ್‌ ಬೇರೆ ಇವತ್ತಿನ ಆರ್‌ಎಸ್‌ಎಸ್‌ ಬೇರೆಯಾಗಿದೆ ಅಂತ ತಿಳಿಸಿದ್ದಾರೆ. 

ಹಿಂದೂ ದೇವಾಲಯಗಳನ್ನ ಆರ್‌ಎಸ್‌ಎಸ್‌ ಗುತ್ತಿಗೆ ಹಾಕಿಕೊಂಡಿದೆಯಾ? 

ವಿಜಯದಶಮಿಯ(Vijayadashami) ದಿನದಂದು ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಾಗವತ್(Mohan Bhagwat)  ಅವರು ಒಂದು ಹೇಳಿಕೆಯನ್ನ ನೀಡಿದ್ದಾರೆ. ಎಲ್ಲ ಹಿಂದೂ ದೇವಸ್ಥಾನಗಳನ್ನು(Temple) ಆರ್‌ಎಸ್‌ಎಸ್‌ ಸುಪರ್ದಿಗೆ ನೀಡಿ ಅಂತ. ಹಿಂದೂ(Hindu) ದೇವಾಲಯಗಳನ್ನ ಆರ್‌ಎಸ್‌ಎಸ್‌ನವರು ಗುತ್ತಿಗೆ ಹಾಕಿಕೊಂಡಿದ್ದಾರಾ? ಅಂತ ಹೇಳುವ ಮೂಲಕ ಬಿಜೆಪಿ ವಿರುದ್ಧ ಎಚ್‌ಡಿಕೆ ಹರಿಹಾಯ್ದಿದ್ದಾರೆ. 

ರಾಮಮಂದಿರ(RamMandir) ನಿರ್ಮಾಣಕ್ಕೆ ಅಡ್ವಾಣಿಯವರು(LK Advani) ರಥಯಾತ್ರೆ ಮಾಡಿ ಇಟ್ಟಿಗೆ ಮತ್ತು ಹಣ ಸಂಗ್ರಹ ಮಾಡಿದರು. ಅದರ ಬಗ್ಗೆ ಲೆಕ್ಕ ಇಲ್ಲ. ಮತ್ತೆ ಇದೀಗ ರಾಮಮಂದಿರ ಹೆಸರಿನಲ್ಲಿ ಹಣ ಸಂಗ್ರಹ ಆಯ್ತು ಇದರ ಹಣ ಎಲ್ಲಿ ಇಟ್ಟಿದ್ದಾರೆ ಯಾರು ಲೆಕ್ಕ ಕೊಡುತ್ತಾರೆ?. ರಾಮನ(Sri Ram) ಹೆಸರಿನಲ್ಲಿ ಕೂಡ ಹಣದ ಅವ್ಯವಹಾರ ನಡೆದಿದೆ. ಹಣದ ಲೆಕ್ಕ ಕೇಳಿದ್ರೆ ನೀವ್ಯಾರು ಅಂತ ಕೇಳ್ತಾರೆ. ರಾಮನ ಹೆಸರಿನಲ್ಲಿ ಹೇಗೆಲ್ಲಾ ಹಣದುರುಪಯೋಗ ಆಗಿದೆ ಅನ್ನೋದನ್ನ ಹೇಳಿದ್ದೇನೆ ಅಷ್ಟೇ ಅಂತ ತಿಳಿಸಿದ್ದಾರೆ. 
 

click me!