
ಬೆಂಗಳೂರು (ಅ.04): ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದೆ. ಈಗಾಗಲೇ ಹಾಲಿ ಮತ್ತು ಮಾಜಿ ಸಿಎಂಗಳ ಮೇಲೆ ಪ್ರಕರಣಗಳು ದಾಖಲಾಗಿದ್ದು, ವಿಚಾರಣೆಗೆ ಅಲೆದಾಡುವ ಸ್ಥಿತಿಯಲ್ಲಿದ್ದಾರೆ. ಇದರ ನಡುವೆ ಜೆಡಿಎಸ್ ವತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಅದರ ನಾಯಕರ ವಿರುದ್ಧ ಕಟುವಾಗಿ ಟೀಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಮೂಡಾ ಮಳ್ಳ ಮುಖ್ಯಮಂತ್ರಿ!!
ಭೂಗಳ್ಳ @ ಸಿಡಿ ಶಿವು
ಉಪ ಮುಖ್ಯಮಂತ್ರಿ!!
ಇದು ಕನ್ನಡಿಗರಿಗೆ ಕಾಂಗ್ರೆಸ್ ಕೊಟ್ಟಿರುವ ಕಳಂಕಿತರ ಭಾಗ್ಯ!!!
ಇದನ್ನೂ ಓದಿ: ಅಬ್ಬಬ್ಬಾ! ಜಿಟಿ ದೇವೇಗೌಡ ಪರಾಕ್ರಮ ನೋಡಿದ್ರೆ ಮುಡಾ ಫಲಾನುಭವಿ ಇರಬೇಕು: ಹೆಚ್. ವಿಶ್ವನಾಥ್!
ಕದ್ದ ವಾಚ್ ಕಟ್ಟಿದವರು ಯಾರು? ಮೂಡವನ್ನು ಮುಕ್ಕಿದ ಮುಖ್ಯಮಂತ್ರಿ ಯಾರು? ಸೈಟುಗಳಿಗೆ ಬೆಲೆ ಕಟ್ಟಿದ ರಿಯಲ್ ಎಸ್ಟೇಟ್ ವ್ಯಾಪಾರಿ ಯಾರು? ಲೂಟಿ, ದಂಧೆಗಳ ಅಪರಾವತಾರ, ಗುತ್ತಿಗೆದಾರರನ್ನು ಹಿಂಸಿಸಿ ಕೊಳ್ಳೆ ಹೊಡೆದ ಕಲೆಕ್ಷನ್ ಕಿಂಗ್ ಡೂಪ್ಲಿಕೇಟ್ ಸಿಎಂ ಯಾರು? ಪ್ರವಾಹ ಸಂತ್ರಸ್ತರ ಹಣವನ್ನು, ಅದರಲ್ಲೂ ಜನರು ದೇಣಿಗೆ ಕೊಟ್ಟ ಹಣವನ್ನು ವಿಮಾನದ ಟಿಕೆಟ್ಟಿಗೆ, ಫೈವ್ ಸ್ಟಾರ್ ಹೋಟೆಲ್ ಮೋಜುಮಸ್ತಿಗೆ ಧಾರೆ ಎರೆದಿದ್ದು ಯಾರು? ಯಾವ ಪಕ್ಷ? ಹೇಳುವಿರಾ ಕಪಟಿ ಕಾಂಗ್ರೆಸ್ ಎಂದು ಪ್ರಶ್ನೆ ಮಾಡಿದ್ದಾರೆ.
ಒಂದು ಹೆಗಲ ಮೇಲೆ ರಿಯಲ್ ಎಸ್ಟೇಟ್ ರಾಮಯ್ಯ. ಇನ್ನೊಂದು ಹೆಗಲ ಮೇಲೆ ಭಾರತದ ಅತಿದೊಡ್ಡ ಭ್ರಷ್ಟ ಸಿಡಿ ಶಿವು. ಹೇಸಿಗೆ, ನಿಮ್ಮ ಮುಖವನ್ನೊಮ್ಮೆ ನೋಡಿಕೊಳ್ಳಿ. ನೀವು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತೀರಿ.. ಲಜ್ಜೆಗೇಡಿಗಳು. ಕುಮಾರಸ್ವಾಮಿ ಅವರಿಗೆ ಕೊಡುವುದು ಗೊತ್ತು, ನಿಮಗೆ ಬಾಚುವುದು ಗೊತ್ತು. ಕಾಮಾಲೆ ಕಾಂಗ್ರೆಸ್, ಕರ್ನಾಟಕಕ್ಕೆ ಅಂಟಿದ ವೈರಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಮುಂದುವರೆದು ಇನ್ನೊಂದು ಪೋಸ್ಟ್‌ನಲ್ಲಿ 'ಯಾರೋ ದಾರಿಹೋಕನೊಬ್ಬ ಸುಳ್ಳು ದೂರು ಕೊಟ್ಟರೆ ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿ ಜನರ ಗಮನವನ್ನು ಮುಡಾ ಪ್ರಕರಣದಿಂದ ಬೇರೆಡೆ ಸಳೆಯುವ ವಿಫಲ ಪ್ರಯತ್ನ ಮಾಡುತ್ತಿರುವ ಕಮಂಗಿ ಕಾಂಗ್ರೆಸ್ ಕೇಂದ್ರ ಸಚಿವರು ..., "ಬೀದಿ ನಾಯಿ, ನರಿಗಳಿಗೆಲ್ಲಾ" ಉತ್ತರ ಕೊಡಬೇಕಾ..? ಕುತಂತ್ರಿಗಳೇ.., ಊಳಿಡುವುದನ್ನು ಬಿಟ್ಟು.. ತಮ್ಮದೇ ಸರ್ಕಾರವಿದೆಯಲ್ಲವೇ ತನಿಖೆ ಮಾಡಿ.
ಇದನ್ನೂ ಓದಿ: 50 ಕೋಟಿಗೆ ಜೀವ ಬೆದರಿಕೆ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲು!
ಸಮಾಜವಾದಿ ಮುಖವಾಡ ತೊಟ್ಟಿರುವ 'ಮಜವಾದಿ ಸೈಟ್ ಕಳ್ಳನ ದ್ವೇಷ ರಾಜಕಾರಣದ ಮುಂದುವರಿದ ಭಾಗವಿದು. ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿರುವ ರೌಡಿ ಕೊತ್ವಾಲನ ಶಿಷ್ಯನ ಕುತಂತ್ರವೂ ಸದ್ಯದಲ್ಲೇ ಹೊರ ಜಗತ್ತಿಗೆ ತಿಳಿಯಲಿದೆ. ದಾರಿಹೋಕನ ಹಿಂದಿರುವ ಸರ್ಕಾರದ ತನಿಖಾ ಸಂಸ್ಥೆಯ ಮುಖ್ಯಸ್ಥನ ಮುಖವಾಡ ಸದ್ಯದಲ್ಲೇ ಕಳಚಿ ಬೀಳಲಿದೆ ಎಂದು ಕೆಲವು ಹ್ಯಾಸ್ ಟ್ಯಾಗ್‌ಗಳನ್ನು ನೀಡಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.