ನಮ್ಮ ಪಾರ್ಟಿಯಲ್ಲಿ ಒಂದು ಪಾಲಿಸಿ ಇದೇ. ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ನಾನು - ಸಿದ್ದರಾಮಯ್ಯನವರು, ಮತ್ತೆ ಕೆಲವರು ಕುಳಿತು ಮಾತನಾಡುತ್ತೇವೆ. ಇದರಲ್ಲಿ ಗೊಂದಲ ಮಾಡಿಕೊಳ್ಳುವ ಸಂದರ್ಭ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ಚನ್ನಪಟ್ಟಣ(ಅ.04): ಹಲವು ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಚನ್ನಪಟ್ಟಣಕ್ಕೆ 300 ಕೋಟಿ ಅನುದಾನ ಬಂದಿದೆ. 5 ಸಾವಿರ ಮನೆಗಳನ್ನ ತಂದಿದ್ದೇವೆ. ಪ್ರತಿ ಪಂಚಾಯತಿಗೆ 2-6 ಕೋಟಿ ಅನುದಾನ ತಂದಿದ್ದೇವೆ. ಚನ್ನಪಟ್ಟಣ ಉಪಚುನಾವಣೆಯ ಅಭ್ಯರ್ಥಿ ಬಗ್ಗೆ ಯೋಚನೆ ಮಾಡ್ತಿಲ್ಲ. ಅಭಿವೃದ್ಧಿ ಬಗ್ಗೆ ಚಿಂತನೆ ಮಾಡ್ತಿದ್ದೇವೆ. ಇಲ್ಲಿ ನಾನೇ ಅಭ್ಯರ್ಥಿ ಎಂದು ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ FIR ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಅದು ಅವರ ಖಾಸಗಿ ವಿಚಾರ. ಅದರಲ್ಲಿ ನಾನು ಬಾಯಿ ಹಾಕಲು ಇಷ್ಟವಿಲ್ಲ ಎಂದಷ್ಟೇ ಹೇಳಿದ್ದಾರೆ.
undefined
ದೂರು ಕೊಟ್ಟಿದ್ದಾಯ್ತು, ತನಿಖೆ ಮುಗಿಯೋವರೆಗೆ ಸುಮ್ಮನಿರು: ಸ್ನೇಹಮಯಿ ಕೃಷ್ಣಗೆ ಡಿಕೆ ಸುರೇಶ ಸಲಹೆ
ಜಾತಿಗಣತಿ ಜಾರಿ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ವಿರೋಧ ವಿಚಾರದ ಬಗ್ಗೆ ಮಾತನಾಡಿ ಸಹೋದರನ ಮಾತಿಗೆ ಡಿಕೆಶಿ ಧ್ವನಿಗೂಡಿಸಿದ್ದಾರೆ. ನಮ್ಮ ಪಾರ್ಟಿಯಲ್ಲಿ ಒಂದು ಪಾಲಿಸಿ ಇದೇ. ಎಲ್ಲರಿಗೂ ನ್ಯಾಯ ಒದಗಿಸಲಾಗುವುದು. ನಾನು - ಸಿದ್ದರಾಮಯ್ಯನವರು, ಮತ್ತೆ ಕೆಲವರು ಕುಳಿತು ಮಾತನಾಡುತ್ತೇವೆ. ಇದರಲ್ಲಿ ಗೊಂದಲ ಮಾಡಿಕೊಳ್ಳುವ ಸಂದರ್ಭ ಇಲ್ಲ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.