ಸಿದ್ದಗಂಗಾ ಮಠಕ್ಕೆ ಅಕ್ಕಿ ಸೇರಿದಂತೆ ಸಂಪುಟ ಸಭೆ ನಿರ್ಣಯಗಳು

By Suvarna NewsFirst Published Feb 4, 2020, 7:50 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಯೂರಪ್ಪ ನೇತೃತ್ವದಲ್ಲಿ ಇಂದು [ಮಂಗಳವಾರ] ಸಂಜೆ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನ ಕೈಗೊಳ್ಳಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ.

ಬೆಂಗಳೂರು, [ಫೆ.04]: ಖಾಸಗಿ ಅನುದಾನಿತ ಸಂಸ್ಥೆಗಳಿಗೂ ದಾಸೋಹ ಅಡಿ ಅಕ್ಕಿ ಗೋಧಿ ವಿತರಿಸಲು ನಿರ್ಣಯ, ರೈತ ಹೋರಾಟಗಾರರ ವಿರುದ್ಧ ರಾಜ್ಯದ ನಾನಾ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ವಾಪಸ್ ,ರಾಯಚೂರಿನಲ್ಲಿ ನೂತನ ವಿವಿ ಸ್ಥಾಪನೆ , ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಇಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.

ತುಮಕೂರು ಸಿದ್ದಗಂಗಾ ಮಠದ ವಿದ್ಯಾರ್ಥಿಗಳ ಅನ್ನ ಕಸಿದ ಸರ್ಕಾರ

ಸಿದ್ದಗಂಗಾ ಮಠ ಸೇರಿದಂತೆ ರಾಜ್ಯದ 281 ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ನಿಲ್ಲಿಸಿದ್ದ ಅಕ್ಕಿ ಗೋಧಿ ಪೂರೈಕೆಗೆ ಸಚಿವ ಸಂಪುಟ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ. 

ಈ ಪ್ರಕರಣ ವಿವಾದಕ್ಕೆ ಗ್ರಾಸ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಯೇ ಈ ಎಲ್ಲಾ ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಅಕ್ಕಿ ಗೋಧಿ ಪೂರೈಕೆ ಮಾಡಲು ಮುಂದಾದರು. ಈ ಬಗ್ಗೆ  ಮಾಹಿತಿ ನೀಡಿ ದ ಸಚಿವ ಮಾಧುಸ್ವಾಮಿ ವಾರ್ಷಿಕ 18 ಕೋಟಿ ರೂ ಅನಯದಾನದಲ್ಲಿ ಯೋಜನೆ ಮುಂದುವರೆಸೋದಾಗಿ ತಿಳಿಸಿದರು.

ಕ್ಷಮೆ ಕೇಳಲ್ಲ ಎಂದ ಅನಂತ, ಹುಬ್ಳಿ ಟೆಕ್ಕಿಯೊಳಗೆ ಕೊರೋನಾ ಜೀವಂತ?: ಇಂದಿನ ಟಾಪ್ 10 ಸುದ್ದಿ!

* ಸಾರ್ವತ್ರಿಕ ರಜೆಯನ್ನು 10 ದಿನಗಳಿಗೆ ಇಳಿಸಲಾಗಿತ್ತು. ಇದೀಗ 4ನೇ ಶನಿವಾರದ ರಜಾದಿನ ಅನ್ವಯ ವಾಗದ ಸರ್ಕಾರಿ ನೌಕರರಿಗೆ 15 ಸಾರ್ವತ್ರಿಕ ರಜೆ ಅನ್ವಯ ಆಗುತ್ತದೆ.

* ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ, ರಾಜ್ಯದ ವಿವಿಧ ಜಿಲ್ಲೆಗಳಿಗೆ 108 ಅಂಬ್ಯುಲೆನ್ಸ್.

* ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಐಟಿಐ ವ್ಯಾಸಂಗ ಮಾಡ್ತಿರುವ ಪರಿಶಿಷ್ಟ ಮಂಗಡ (ST) ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್.

* ಕಳಸಾ ಬಂಡೂರಿ, ಎತ್ತಿನ ಹೊಳೆ, ಕಾವೇರಿ ಹೋರಾಟಗಾರರ ವಿರುದ್ದ ರಾಜ್ಯಾದ್ಯಂತ ದಾಖಲಾಗಿದ್ದ 51 ಪ್ರಕರಣಗಳನ್ನು ಸಂಪುಟ ಸಭೆ ವಾಪಸ್ ಪಡೆದಿದೆ. ಇದರಲ್ಲಿ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ ಮಾದೇಗೌಡ ಅವರ ಮೇಲೆ ದಾಖಲಾಗಿದ್ದ ಕೇಸುಗಳನ್ನೂ ವಾಪಸ್ ಪಡೆದಿದೆ ಎಂದ ಮಾಧುಸ್ವಾಮಿ ಹೇಳಿದರು. 

*  2015ರಲ್ಲಿ ಗೋಕರ್ಣದಲ್ಲಿ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ದ ದಾಖಲಾಗಿದ್ದ ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣವನ್ನು ಈ ಹಿಂದಿನ ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು, ಆದರೆ ಇದನ್ನು ಮುಂದುವರೆಸಲು ಈಗ ನಿರ್ಧಾರ ಮಾಡಲಾಗಿದೆ.

*ನಲಿ ಕಲಿ ಯೋಜನೆಗೆ ಇಪ್ಪತ್ತೇಳು ಕೋಟಿ ಕಲಿಕಾ ಸಾಮಗ್ರಿ, ಚುನಾವಣಾ ಆಯೋಗದ ಕಟ್ಟಡದ ಪಕ್ಕ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 13.5 ಕೋಟಿ ರೂ. ಬಿಡುಗಡೆ.

*ಲೇಡಿ ಕರ್ಜನ್ ಮತ್ತು ಬೋರಿಂಗ್ ಆಸ್ಪತ್ರೆ ಗಳಲ್ಲಿ ಬಾಲಕಿಯರ ವಸತಿ ನಿಲಯದ ನಿರ್ಮಾಣಕ್ಕೆ 263ಕೋಟಿ ಬಿಡುಗಡೆಗೆ ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

* ಕೊಪ್ಪಳದ ಹಿರೇಹಳ್ಳ ಕುಡಿಯುವ ನೀರು ಯೋಜನೆಗೆ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆಗೆ 86 ೮೬ ಕೋಟಿ ಅನುದಾನ.

* 1ರಿಂದ 2  ಉರ್ದು ಮಾಧ್ಯ ಮ ವಿದ್ಯಾರ್ಥಿಗಳ ಕಲಿಕಾ ಸಾಮಾಗ್ರಿಗಳಿಗೆ 27 ಕೋಟಿ ರೂ. ಬಿಡುಗಡೆ.

click me!