ಮುಸ್ಲೀಮರೆಂದರೆ ಬಿಜೆಪಿಗೆ ಯಾಕೆ ದ್ವೇಷ? ಸೆಕ್ಯುಲರ್‌ ಬಗ್ಗೆ ಪಾಠ ಮಾಡಿದ ಸಿಎಂ ಸಿದ್ಧರಾಮಯ್ಯ!

Published : Sep 30, 2023, 03:02 PM IST
ಮುಸ್ಲೀಮರೆಂದರೆ ಬಿಜೆಪಿಗೆ ಯಾಕೆ ದ್ವೇಷ? ಸೆಕ್ಯುಲರ್‌ ಬಗ್ಗೆ ಪಾಠ ಮಾಡಿದ ಸಿಎಂ ಸಿದ್ಧರಾಮಯ್ಯ!

ಸಾರಾಂಶ

ಬ್ಯಾರಿ ವೆಲ್‌ಫೇರ್‌ ಅಸೋಸಿಯೇಷನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ಧರಾಮಯ್ಯ, ಬಿಜೆಪಿಗೆ ಮುಸ್ಲೀಮರೆಂದರೆ ಯಾಕೆ ದ್ವೇಷ ಎಂದು ಪ್ರಶ್ನೆ ಮಾಡಿದ್ದಾರೆ. ಅದರೊಂದಿಗೆ ಸೆಕ್ಯುಲರ್‌ ಬಗ್ಗೆ ಜೆಡಿಎಸ್‌ಗೆ ಪಾಠ ಮಾಡಿದೆ.  

ಬೆಂಗಳೂರು (ಸೆ.30): ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳ ಮೈತ್ರಿಗೆ ತಿರುಗೇಟು ನೀಡಿರುವ ಸಿಎಂ ಸಿದ್ಧರಾಮಯ್ಯ, ಜೆಡಿಎಸ್‌ ಪಕ್ಷಕ್ಕೆ ಸೆಕ್ಯುಲರ್‌ ಬಗ್ಗೆ ಪಾಠ ಮಾಡಿದ್ದಾರೆ. ಬ್ಯಾರಿ ಸೌಹಾರ್ದ ಭವನ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಸೆಕ್ಯೂಲರ್ ಅಂದ್ರೆ ಏನು ಗೊತ್ತಾ..? ಎಂದು ಜೆಡಿಎಸ್‌ನ ಬಿ ಎಂ ಫಾರೂಕ್ ಅವರಿಗೆ ವೇದಿಕೆಯಲ್ಲಿಯೇ ಸಿದ್ಧರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಜನತಾದಳ ಸೆಕ್ಯುಲರ್ ಅಂತ ಏಕೆ ಹೆಸರಿಟ್ಟೆವು ಅನ್ನೋದು ಗೊತ್ತಾ? ನಾನು ಜೆಡಿಎಸ್‌ನ ಸ್ಥಾಪಕ ಸದಸ್ಯ. ಜನತಾದಳ ಜನತದಳ ಎರಡು ಭಾಗವಾಯ್ತು. ಆಗ ಒಂದು ಗುಂಪು ಬಿಜೆಪಿ ಜೊತೆ ಹೋಗಲು ನಿರ್ಧಾರ ಮಾಡಿದರು. ಅವರು ಜೆಡಿಯು ಅಂತ ಹೆಸರಿಟ್ಟುಕೊಂಡರು. ನಾವು ಜೆಡಿಎಸ್‌ ಎಂದು ಹೆಸರಿಟ್ಟುಕೊಂಡ್ವಿ, ನಾನೇ ಮೊದಲ ಅಧ್ಯಕ್ಷ. ಇದೇ ದೇವೆಗೌಡ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡೋದಾದರೆ,  ನನ್ನ ಹೆಣದ ಮೇಲೆ ಮಾಡಬೇಕು ಎಂದು ಹೇಳಿದ್ದರು. ಬಿಜೆಪಿ ಒಂದು ಕೋಮುವಾದಿ ಪಕ್ಷ. ಈಗ ರಾಜ್ಯದ ಹಿತಕ್ಕಾಗಿ ಹೋಗಿದ್ದೀವಿ ಅಂತಾರೆ, ದೇಶದ ಹಿತ ಅಲ್ಲ ಅವರ ಹಿತಕ್ಕಾಗಿ ಹೋಗಿದ್ದಾಋಏ. ಅಧಿಕಾರ ಇರಲಿ, ಇರದೆ ಇರಲಿ ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೋಗಲ್ಲ. ಬಿಜೆಪಿಯವರು ಅವರು ಮುಸ್ಲಿಂ ಸಮುದಾಯವನ್ನ ಯಾಕೆ  ವಿರೋಧಿಸ್ತಾರೆ...? ಸಂವಿಧಾನದ ಬಗ್ಗೆ ಅವರಿಗೆ ನಂಬಿಕೆ ಇಲ್ವಾ? ಎಂದು ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಎಂಬಿ ಫಾರೂಕ್‌ಗೆ ವೇದಿಕೆಯಲ್ಲಿಯೇ ತಿವಿದ ಸಿದ್ಧರಾಮಯ್ಯ, ಜಾತ್ಯಾತೀತ ತತ್ವದಲ್ಲಿ ಯಾವುದಾದರೂ ಒಂದು ಪಕ್ಷ ಇದ್ರೆ ಅದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮಾತ್ರ.  ಕಾಂಗ್ರೆಸ್ ಪಕ್ಷ ಯಾವ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು  ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಗೆ ಸಿಎಂ ಟಾಂಗ್ ನೀಡಿದರು. ಈಗ ಉಳಿವಿಗಾಗಿ ಮೈತ್ರಿ ಅಂತ ಹೋಗ್ತಿದ್ದಾರೆ. ಅವರು ಬೆಂಕಿ ಇದ್ದ ಹಾಗೆ. ನೀವು ಯಾವ ಕಾರಣಕ್ಕೂ ಭಯ ಪಡುವ ಅಗತ್ಯವಿಲ್ಲ. ಯಾರು ಕಾನೂನು ಕೈಗೆತತಿಕೊಳ್ಳಲು ಬಿಡೋದಿಲ್ಲ. ಈಗಾಗಲೇ ಪೊಲೀಸರಿಗೆ ಹೇಳಿದ್ದೇನೆ..ಎಂಥದ್ದೇ ರಾಜಕೀಯ ಶಕ್ತಿ ಇದ್ರೂ ತಡೆಯಿರಿ ಎಂದಿದ್ದೇನೆ ಎಂದು ತಿಳಿಸಿದರು.

ಬ್ಯಾರಿ ಸೌಹಾರ್ದ ಭವನಕ್ಕೆ ಅಂದು ನಾನೇ ಅಡಿಗಲ್ಲು ಹಾಕಿದ್ದೆ. ಇಂದು ಈ ಕಟ್ಟಡವನ್ನ ನಾನೇ ಉದ್ಘಾಟನೆ ಮಾಡುತ್ತಿರೋದು ಸಂತಸ ತಂದಿದೆ. ಬಿಎ ಮೊಯುದ್ದೀನ್‌, ಮೊಸ್ಟ್ ಸೆಕ್ಯೂಲರ್ ಪರ್ಸನ್. ಅವರು ಅಪರೂಪದ ರಾಜಕಾರಣಿ. ಅವರು ಉನ್ನತ ಶಿಕ್ಷಣ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯು ಜಾತ್ಯಾತೀತವಾಗಿರೋದು ಅಗತ್ಯ. ನಮ್ಮಲ್ಲಿ ಅನೇಕ ಜಾತಿ ಧರ್ಮಗಳಿವೆ. ಇದರಲ್ಲಿ ನಾವು ಏಕತೆಯನ್ನ ಕಾಣಬೇಕು. ಎಲ್ಲರಲ್ಲೂ ಮನುಷ್ಯತ್ವ ಕಾಣಬೇಕು. ಬ್ಯಾರಿ ಸಮುದಾಯವರು ಈ ಕಟ್ಟಡಕ್ಕೆ ಸೌಹಾರ್ದ ಭವನ ಅಂತ ಹೆಸರು ಇಟ್ಟಿರೋದು ತುಂಬಾ ಸಂತೋಷ. ಬಿಎ ಮೊಯಿದಿನ್ ಅವರೇ ಕಟ್ಟಡಕ್ಕೆ ಹೆಸರು ಸೂಚಿಸಿದರಂತೆ. ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳಿದೆ ಜಾತ್ಯಾತೀತವಾಗಿ ನಿರ್ಮಾಣವಾಗಿದೆ ಅಂತ. ಹುಟ್ಟುವಾಗ ಯಾವ ಜಾತಿಯಿಂದನಾದರೂ ಹುಟ್ಟಲಿ, ಆದರೆ, ಮನುಷ್ಯತ್ವ ಮರೆಯಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕಾವೇರಿ ನೀರು ಬರಿದಾದ ಮೇಲೆ ತುರ್ತು ಸಭೆ ಕರೆದ ಸಿದ್ದರಾಮಯ್ಯ!

ಫಾರೂಕ್ ನಿನ್ನ ಯಾಕೆ ಅಲ್ಲಿ ಮಿನಿಸ್ಟರ್ ಮಾಡಿಲ್ಲ..? ಫಾರೂಕ್ ರನ್ನು ಕರೆದುಕೊಂಡು ಬಾರಪ್ಪ, ಎಂದು ಬಾವಾಗೆ ಹೇಳಿ ಕಳುಹಿಸಿದ್ದೆವು. ರಾಜ್ಯಸಭೆಗೆ ಟಿಕೆಟ್ ಕೊಡ್ತೀವಿ ಅಂದಿದ್ದೆವು. ಆದರೆ ಈ ಗಿರಾಕಿ ಬರಲೇ ಇಲ್ಲ. ಫಾರುಕ್ is not a child. ಫಾರೂಕ್‌ಗೆ ರಾಜಕೀಯ ಗೊತ್ತಿದೆ.ನಾವು ಹೆಚ್ಚು ಒತ್ತಾಯ ಮಾಡೋಕೆ ಹೋಗಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಉತ್ತಮ ಮಳೆ ಬೆಳೆಗಾಗಿ ಮಾದಪ್ಪನ ಮೊರೆ ಹೋದ ಸಿಎಂ ಸಿದ್ದರಾಮಯ್ಯ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ