ಮೋದಿ ಹತ್ತು ವರ್ಷ ಆಡಳಿತ ಮಾಡಿದ್ದಾರೆ. ಎರಡು ಬಾರಿ ಪ್ರಧಾನಿ ಆಗಿದ್ದಾರೆ ಅವರ ಕೊಡುಗೆ ಏನಿದೆ? ರಾಜ್ಯದ ಜನರ ಮುಂದೆ ಭಾವನಾತ್ಮಕವಾಗಿ ಮಾತಾಡಿ ಗೆದ್ದು ಬಂದ್ರು ಅನೇಕ ಭರವಸೆ ಕೊಟ್ಟಿದ್ದು,ಅದ್ಯಾವುದೂ ಈಡೇರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆ.ಗ್ರಾಮಾಂತರ (ಏ.21): ಮೋದಿ ಹತ್ತು ವರ್ಷ ಆಡಳಿತ ಮಾಡಿದ್ದಾರೆ. ಎರಡು ಬಾರಿ ಪ್ರಧಾನಿ ಆಗಿದ್ದಾರೆ ಅವರ ಕೊಡುಗೆ ಏನಿದೆ? ರಾಜ್ಯದ ಜನರ ಮುಂದೆ ಭಾವನಾತ್ಮಕವಾಗಿ ಮಾತಾಡಿ ಗೆದ್ದು ಬಂದ್ರು ಅನೇಕ ಭರವಸೆ ಕೊಟ್ಟಿದ್ದು,ಅದ್ಯಾವುದೂ ಈಡೇರಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಬೆ.ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಕೋಣನುಕುಂಟೆ ಕ್ರಾಸ್ ಬಳಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿದೇಶದಲ್ಲಿ ಕಾಂಗ್ರೆಸ್ ಹಾಗೂ ಬೇರೆಯವರು ಹಣ ಇಟ್ಟಿದ್ದಾರೆ. ಅದೆಲ್ಲ ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೇನೆ ಅಂದ್ರು. 15 ಪೈಸೆಯೂ ಯಾರ ಖಾತೆಗೂ ಬಂದಿಲ್ಲ. ಇದು ಮೊದಲನೇ ಸುಳ್ಳು,ದೇಶದಲ್ಲಿ ನಿರುದ್ಯೋಗ ಇದೆ. ನೀಡಿದ ಭರವಸೆಯಂತೆ ಉದ್ಯೋಗ ಯಾರಿಗೂ ಕೊಟ್ಟಿಲ್ಲ. ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡ ಮಾರಲು ಹೇಳಿದರು. ಎರಡು ಕೋಟಿ ಉದ್ಯೋಗ ಕೊಡುತ್ತೇನೆ ಎಂದರು ಕೊಟ್ಟಿಲ್ಲ ಅಂದ್ಮೇಲೆ ಓಟು ಕೊಡಬೇಕಾ ಇವರಿಗೆ ಎಂದು ಪ್ರಶ್ನಿಸಿದರು.
undefined
ಡಿಕೆ ಸುರೇಶ್ ಗೆಲ್ಲೋದನ್ನ ಯಾರಿಂದಲೂ ತಪ್ಪಿಸೋಕೆ ಆಗೊಲ್ಲ; ಡಿಕೆ ಶಿವಕುಮಾರ
ಮೋದಿ ಮುಂದೆ 27 ಸಂಸದರು ಬಾಯ್ಬಿಟ್ಟಿಲ್ಲ:
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಸಂಸತ್ ಸದಸ್ಯರಾದ ಡಿಕೆ ಸುರೇಶರವರು ಮತ್ತೊಮ್ಮೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಅಂತ ನಿಮ್ಮಲ್ಲಿ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದ ಮತದಾರರು 25 ಜನರನ್ನ ಆಯ್ಕೆ ಮಾಡಿದ್ರು. ಪಕ್ಷೇತರ ಸುಮಲತಾ ಕೂಡ ಅವರ ಕಡೆಗೆ ಸೇರಿಕೊಂಡ್ರು. ಪ್ರಜ್ವಲ್ ರೇವಣ್ಣ ಕೂಡ ಸೇರಿಕೊಂಡರು. ಬಿಜೆಪಿಯಲ್ಲಿ ಒಟ್ಟು 27 ಲೋಕಸಭಾ ಸದಸ್ಯರಿದ್ದಾರೆ. ಇಷ್ಟು ಎಂಪಿಗಳಿದ್ದರೂ 15 ನೇ ಹಣಕಾಸಿಕ ಆಯೋಗ ಶಿಫಾರಸ್ಸಿನಲ್ಲಿ ಅನುದಾನ ಕೊಡಲಿಲ್ಲ, ಹಕ್ಕುಪತ್ರ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ5300ಕೋಟಿ ರೂ ಪ್ರಾಜೆಕ್ಟ್ ಗೆ ಕೊಡ್ತೀನಿ ಅಂತ ಹೇಳಿ ಕೊಡಲಿಲ್ಲ. ಬರಗಾಲ ಭೀಕರವಾಗಿದೆ ಪರಿಹಾರಕ್ಕೆ ನಾವು ಮನವಿ ಕೊಟ್ಟು ಏಳು ತಿಂಗಳಾಗಿವೆ. ಇನ್ನೂವರೆಗೆ ಒಂದು ಪೈಸೆ ಕೊಟ್ಟಿಲ್ಲ. ಇಷ್ಟೆಲ್ಲಾ ಅನ್ಯಾಯ ಆಗಿದ್ರೂ ಡಿಕೆ ಸುರೇಶ್ ಒಬ್ಬರನ್ನ ಬಿಟ್ರೆ ಇನ್ಯಾರೂ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಧೈರ್ಯ ತೋರಿಲ್ಲ.
ಚುನಾವಣಾ ಫಲಿತಾಂಶವೇ ಉತ್ತರ ಕೊಡುತ್ತೆ; ಮೋದಿ ದೇಶಕ್ಕೆ ಅಂಟಿದ ಶನಿ ಎಂದ ರಮೇಶ್‌ಕುಮಾರ್‌ಗೆ ಬಿಎಸ್‌ವೈ ತಿರುಗೇಟು
ಪಾರ್ಲಿಮೆಂಟ್‌ನಲ್ಲಿ ಸುಮಲತಾ, ಪ್ರಜ್ವಲ್ ರೇವಣ್ಣ ಸೇರಿ ಯಾರೂ ಕೂಡ ಬಾಯಿಬಿಟ್ಟಿಲ್ಲ. ಇಂಥ ಲೋಕಸಭಾ ಸದಸ್ಯರನ್ನ ಕಳಿಸದ್ರೆ ಕನ್ನಡಿಗರ ಧ್ವನಿಯಾಗಿ ಇವರ್ಯಾರು ಕೆಲಸ ಮಾಡಲ್ಲ. ಬಾಯಿ ಮುಚ್ಚಿಕೊಂಡಿರುವವರು ಲೋಕಸಭಾ ಮೆಟ್ಟಿಲು ಹತ್ತಬಾರದು. ಡಿಕೆ ಸುರೇಶ್ ಕರ್ನಾಟಕಕ್ಕೆ ಅನ್ಯಾಯ ಆದ್ರೆ ನಾವು ಬೇರೆ ರೀತಿ ಯೋಚನೆ ಮಾಡಬೇಕಾಗತ್ತೆ ಅಂದಿದ್ರು. ಅದನ್ನೇ ತಿರುಚಿ ದೇಶ ಒಡೆಯುವಂತ ಮಾತನಾಡಿದ್ರು ಅಂತ ಮೋದಿ ಹೇಳಿದ್ರು. ಅಂತಹ ಮಾತನ್ನ ಹೇಳಿದ್ರೆ ಅದು ನರೇಂದ್ರ ಮೋದಿಯವರು ಮಾತ್ರ ಎಂದು ತಿರುಗೇಟು ನೀಡಿದರು.