ಗ್ಯಾರಂಟಿಯಿಂದ ದಿವಾಳಿಯಾದ 'ಕೈ' ಸರ್ಕಾರಕ್ಕೆ ಮೋದಿ ಸರ್ಕಾರ ರೂ. 6,012 ಕೋಟಿ ಬಡ್ಡಿ ರಹಿತ ಸಾಲ ಕೊಟ್ಟಿದೆ; ಬೊಮ್ಮಾಯಿ

By Sathish Kumar KHFirst Published Apr 21, 2024, 9:07 PM IST
Highlights

ಕಾಂಗ್ರೆಸ್‌ ಗ್ಯಾರಂಟಿಯಿಂದ ದಿವಾಳಿಯಾಗಿರುವ ರಾಜ್ಯ ಸರ್ಕಾರಕ್ಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬಡ್ಡಿ ರಹಿತವಾಗಿ 50 ವರ್ಷದಲ್ಲಿ ತೀರಿಸುವಂತೆ 6,012 ಕೋಟಿ ರೂ. ಸಾಲವನ್ನು ಕೊಡಲಾಗಿದೆ.

ಬೆಂಗಳೂರು (ಏ.21): ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವ ಸಿದ್ದತೆ ಇಲ್ಲದ ಗ್ಯಾರೆಂಟಿ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡಿದ್ದು, ಆರ್ಥಿಕ ವಿಚಾರದಲ್ಲಿ ಹತಾಶರಾಗಿ ತೀರ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

'ಬೆಂಗಳೂರಿನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದ ಎನ್ ಡಿ ಎ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ವಿಪತ್ತು ನಿರ್ವಹಣಾ ಮಾನದಂಡ ಬದಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲಿನ‌ ಹಣ ಹೆಚ್ಚಿಗೆ ಬಂದಿದೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ಮರೆಮಾಚಿದೆ. ತನ್ನ ತಪ್ಪು ಮುಚ್ಚಿಕೊಳ್ಳಲು ತೀರ ತಳಮಟ್ಟಕ್ಕೆ ಹೋಗಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಹಣಕಾಸು ವಿಚಾರದಲ್ಲಿ ಹತಾಶರಾಗಿ ಕಾಂಗ್ರೆಸ್  ನಾಯಕರು ತೀರ ಕೆಳಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಹೇಳಿದರು.

ಮೋದಿ ದೇಶಕ್ಕೆ ಹಿಡಿದಿರುವ ಶನಿ; ಜೂ.4ರ ಬಳಿಕ ಬಿಟ್ಟು ಹೋಗಲಿದೆ; ಪ್ರಧಾನಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿಂದನೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಿಂದ ಕೇಂದ್ರಕ್ಕೆ  4 ಲಕ್ಷ‌ ಕೋಟಿ ರೂ. ತೆರಿಗೆ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಕೇಂದ್ರದ ನೇರ ತೆರಿಗೆ, ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಹಂಚಿಕೆ ಪಾಲಿನಲ್ಲಿ ಬರುವುದಿಲ್ಲ. ಅದು ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರ ಕಾಲದಿಂದ ಇದೆ. ಈ ಪದ್ದತಿ ಜಿಎಸ್‌ಟಿಗೆ ಮಾತ್ರ ಅನ್ವಯವಾಗತ್ತದೆ. ಕಾಂಗ್ರೆಸ್ ‌ನವರು ಕೇವಲ ಆರೋಪ ಮಾಡುವ ಬದಲು ಯುಪಿಎ ಅವಧಿ ಹಾಗೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಹಾಗೂ ತೆರಿಗೆ ಪಾಲಿನ‌ ಹಣ ಬಂದಿದೆ ಎಂದು ಹೋಲಿಕೆ ಮಾಡಿ ನೋಡಲಿ. 2004-2014 ರ ಯುಪಿಎ ಅವಧಿಯಲ್ಲಿ 81,795 ಕೋಟಿ ರೂ. ತೆರಿಗೆ ಪಾಲಿನ ಹಣ ಬಂದಿದೆ. 2014-2024 ರ  ಎನ್ ಡಿಎ ಅವಧಿಯಲ್ಲಿ 2,82,791 ಕೋಟಿ ರೂ. ರಾಜ್ಯಕ್ಕೆ ಬಂದಿದೆ. 

ಯುಪಿಎ ಸರ್ಕಾರದ ಅವಧಿಯಲ್ಲಿ 4 ಪೈಸೆ ರಾಜ್ಯಕ್ಕೆ ಬರುತ್ತಿತ್ತು ಈಗ 13 ರೂ. ಸಿಗುತ್ತಿದೆ ಎಂದು ಬೊಬ್ಬೆ ಹೊಡಿತ್ತಿದ್ದಾರೆ 2004-2014 ರ ಯುಪಿಎ ಅವಧಿಯಲ್ಲಿ ಕೇಂದ್ರದ ಅನುದಾನ 60,799 ಕೋಟಿ ಬಂದಿದೆ. 2014-24 ರ ವರೆಗಿನ ಪ್ರಧಾನ ನರೇಂದ್ರ ಮೋದಿ ಅವಧಿಯಲ್ಲಿ 2,33,93 ಕೋಟಿ ರೂ. ಅನುದಾನ ಬಂದಿದೆ. ರಾಜ್ಯಕ್ಕೆ ಕೇಂದ್ರ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಕರ್ನಾಟಕಕ್ಕೆ‌  6,012 ಕೋಟಿ ರೂ. ಬಡ್ಡಿ ರಹಿತ ಸಾಲ‌ ನೀಡಿದ್ದು, 50 ವರ್ಷಗಳ ಬಳಿಕ ಸಾಲ ಮರಳಿಸಲು ಅವಕಾಶ ಕಲ್ಪಿಸಲಾಗಿದೆ.

ಚುನಾವಣಾ ಫಲಿತಾಂಶವೇ ಉತ್ತರ ಕೊಡುತ್ತೆ; ಮೋದಿ ದೇಶಕ್ಕೆ ಅಂಟಿದ ಶನಿ ಎಂದ ರಮೇಶ್‌ಕುಮಾರ್‌ಗೆ ಬಿಎಸ್‌ವೈ ತಿರುಗೇಟು

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಎಲ್ಲ ರಾಜ್ಯ ಸರ್ಕಾರಗಳಿಗೆ ಶೇ. 27% ತೆರಿಗೆ ಪಾಲು ಬರುತ್ತಿತ್ತು. ಅದನ್ನು ಯುಪಿಎ ಅವಧಿಯಲ್ಲಿ ಶೇ.37% ಹೆಚ್ಚಿಸಬೇಕೆಂದು ಎಲ್ಲ ರಾಜ್ಯಗಳು ಒತ್ತಾಯ ಮಾಡಿದ್ದವು. ಕಾಂಗ್ರೆಸ್ ಸರ್ಕಾರ ಹೆಚ್ಚಳ ಮಾಡಲಿಲ್ಲ. ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಅದನ್ನು ಶೇ.40ಕ್ಕೆ ಏರಿಸಿದ್ದಾರೆ ಎಂದು ಹೇಳಿದರು.

click me!