Karnataka Govt Formation: ಕರ್ನಾಟಕ ಸಿಎಂ ಆಯ್ಕೆಯಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ : ಸುರ್ಜೇವಾಲಾ

Published : May 17, 2023, 03:03 PM ISTUpdated : May 17, 2023, 04:12 PM IST
Karnataka Govt Formation: ಕರ್ನಾಟಕ ಸಿಎಂ ಆಯ್ಕೆಯಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ : ಸುರ್ಜೇವಾಲಾ

ಸಾರಾಂಶ

ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ (ಮೇ.17): ಕರ್ನಾಟಕ ಸಿಎಂ ಆಯ್ಕೆ ಇನ್ನೂ ಆಯ್ಕೆಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಇಂದು ಅಥವಾ ನಾಳೆ ಸಿಎಂ ಆಯ್ಕೆ ಆಗಲಿದೆ. ಸಿಎಂ ಹುದ್ದೆ ಆಯ್ಕೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ. ಆ ರೀತಿಯ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕಳೆದೆರಡು ದಿನಗಳಿಂದ ಚರ್ಚೆ ನಡೆಸುತ್ತಿದ್ದಾರೆ. ಖರ್ಗೆ ಯಾವುದೇ ನಿಧಾರ ತೆಗೆದುಕೊಳ್ಳಬಹುದು.  ಮೋದಿ ಇಂತಹ ವಿಚಾರದಲ್ಲಿ 10 ರಿಂದ 15 ದಿನ ತೆಗೆದುಕೊಳ್ಳುತ್ತಿದ್ದರು. ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಪ್ರತೀ ಯೋಜನೆಗಳನ್ನು ಈಡೇರಿಸುತ್ತೇವೆ.  ಮುಂದಿನ 48ರಿಂದ 78 ಗಂಟೆಯೊಳಗೆ ಹೊಸ ಸರಕಾರ ಅಸ್ತಿತ್ವದಲ್ಲಿ ಇರಲಿದೆ.  ನಾಳೆ ಪ್ರಮಾಣವಚನ ನಡೆಯುವುದಿಲ್ಲ ಎಂದಿದ್ದಾರೆ.

Karnataka CM Announcement: ಡಿಸಿಎಂ ಹುದ್ದೆಗೆ ಒಪ್ಪದ ಡಿಕೆಶಿ, ಮುಂದಿನ ನಡೆ ಬಗ್ಗೆ ಹೆಚ್ಚಾದ

ಕರ್ನಾಟಕ ಸಿಎಂ ಆಯ್ಕೆಯಾಗಿದೆ ಎಂದು ಸಾಕಷ್ಟು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಹತಾಶೆಯಿಂದ ಬಿಜೆಪಿ ಈ ಸುದ್ದಿಯನ್ನು ಹರಿಯಬಿಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಸಿರುವ ಸುರ್ಜೇವಾಲಾ ಇಂತಹ ಯಾವುದೇ ಸುದ್ದಿಯನ್ನು ಯಾರೂ ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Karnataka CM Announcement : ಸಿದ್ದರಾಮಯ್ಯ ಮನೆ ಮುಂದೆ ಸಂಭ್ರಮ, ಡಿಕೆಶಿ ಮನೆ ಮುಂದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ