ಸಂಪುಟ ವಿಸ್ತರಣೆಯೋ..ಪುನಾರಚನೆಯೋ... ಎಂಬ ಗೊಂದಲಕ್ಕೆ ತೆರೆ ಎಳೆದ ಸಿಎಂ

By Suvarna News  |  First Published Jan 12, 2021, 3:17 PM IST

ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.
 


ಬೆಂಗಳೂರು, (ಜ.12): ಸಂಪುಟ ಸಂಕಟಕ್ಕೆ ಕೊನೆಗೂ ಬಿಜೆಪಿ ಹೈಕಮಾಂಡ್ ಮುಕ್ತಿ ನೀಡಿದೆ. ಆದ್ರೆ, ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವ ಗೊಂದಲಗಳು ಇದ್ದವು. ಇದೀಗ ಆ ಗೊಂದಲಕ್ಕೆ ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೆರೆ ಎಳೆದಿದ್ದಾರೆ.

ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮತನಾಡಿದ ಅವರು, ನಾಳೆ (ಬುಧವಾರ) ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಅಮಾವಾಸ್ಯೆ ಮುಗಿಯಲಿದ್ದು, ನಂತರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.ಈ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದರು. 

Latest Videos

undefined

ರಾಜ್ಯಪಾಲರಿಗೆ ಸಚಿವರ ಪಟ್ಟಿ ನೀಡಿದ ಸಿಎಂ ; ಸಂಭಾವ್ಯರ ಹೆಸರುಗಳಿವು..!

 ಅನಗತ್ಯವಾಗಿ ಸಂಪುಟದಿಂದ ಇಂಥವರನ್ನೇ ಕೈಬಿಡುತ್ತೇವೆ ಅಥವಾ ಇಂಥವರನ್ನೇ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಬಿಂಬಿಸಬೇಡಿ. ಸಂಜೆ ನಾನೇ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗ ಮಾಧ್ಯಮಗಳಲ್ಲಿ ಬರುತ್ತಿರುವ ವದಂತಿಗಳು ಸತ್ಯಾಂಶದಿಂದ ಕೂಡಿಲ್ಲ. ಪುನಾರಚನೆಯೋ, ವಿಸ್ತರಣೆಯೋ ಯಾರನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ನಾನೇ ಬಹಿರಂಗ ಮಾಡುತ್ತೇನೆ. ದಯವಿಟ್ಟು ಊಹಾಪೋಹಗಳನ್ನು ಹಬ್ಬಿಸಬೇಡಿ ಎಂದು ಸಿಎಂ ಮನವಿ ಮಾಡಿದರು.

click me!