'ಗೋವು ಬಿಜೆಪಿಗೆ ವೋಟು ತರುವ ಕಾಮಧೇನು, ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ'

Published : Jan 12, 2021, 03:07 PM IST
'ಗೋವು ಬಿಜೆಪಿಗೆ ವೋಟು ತರುವ ಕಾಮಧೇನು, ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ'

ಸಾರಾಂಶ

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರು, (ಜ.12): ಬಿಜೆಪಿಗೆ ಗೋವು ವೋಟು ತರುವ ಕಾಮಧೇನುವಾಗಿದೆ ಎಂದು ಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ನಳಿನ್ ಕುಮಾರ್ ಕಟೀಲ್‌ಗೆ ತಿರುಗೇಟು ನೀಡಿದ್ದಾರೆ.

 ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರ ಹೇಳಿಕೆಗೆ ದಿನೇಶ್ ಗುಂಡೂರಾವ್ ಅವರು ಟ್ವೀಟ್ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ನಿಜವಾಗಿಯೂ ಬಿಜೆಪಿಯವರಿಗೆ ಗೋವಿನ ಬಗ್ಗೆ ಭಕ್ತಿ ಇದ್ದರೆ ದೇಶಾದ್ಯಂತ ಗೋಹತ್ಯೆ ನಿಷೇಧಿಸುವ ಧೈರ್ಯ ತೋರಲಿ. ಇಲ್ಲವೇ ತಮ್ಮದು ಗೊಡ್ಡು ಭಕ್ತಿ ಎಂದು ಒಪ್ಪಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್‌ಗೆ 3 ಶಾಪಗಳು ಇವೆಯಂತೆ: ಯಾವುವು..? 

ಕಾಂಗ್ರೆಸ್‍ಗೆ ಗೋಹತ್ಯೆ ಶಾಪವಿದೆ ಎಂಬ ನಿಮ್ಮ ಹೇಳಿಕೆ ಅಪಕ್ವ ರಾಜಕಾರಣಿಯ ಬಡಬಡಿಕೆಯಂತಿದೆ. ಗೋ ಶಾಪದ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷರು ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದಲ್ಲಿ ಎಷ್ಟು ಮೆಟ್ರಿಕ್ ಟ್ರನ್ ಗೋಮಾಂಸ ರಫ್ತಾಗಿದೆ ಎಂಬ ಅಂಕಿ ಅಂಶವನ್ನು ತೆರೆದಿಡಲಿ. ಇವರ ಪ್ರಕಾರ ಗೋಮಾಂಸ ತಿಂದರೆ ಶಾಪ. ಮಾಂಸಕ್ಕಾಗಿ ಗೋವುಗಳನ್ನು ಕೊಂದರೆ ಶಾಪವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧ ಸಮರ್ಥಿಸಿಕೊಳ್ಳುವ ಕಟೀಲ್ ಅವರು, ಬಿಜೆಪಿ ಆಡಳಿತವಿರುವ ಗೋವಾದಲ್ಲಿ ಗೋಹತ್ಯೆ ನಿಷೇಧಿಸುವುದಕ್ಕೆ ಯಾಕೆ ಒತ್ತಾಯಿಸುವುದಿಲ್ಲ. ಬಿಜೆಪಿಯವರಿಗೆ ಗೋವು ವೋಟು ತರುವ ಕಾಮಧೇನುವಾಗಿದೆ. ನಳೀನ್‍ಕುಮಾರ್ ಅವರದು ಎಲುಬಿಲ್ಲದ ನಾಲಿಗೆ ಎಂಬುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವ ನೀವು, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ಮಾತನಾಡುವುದು ವರ್ತಮಾನದ ದುರಂತ ಎಂದು ಹೇಳಿದ್ದಾರೆ.ಅಂತರಂಗದಲ್ಲಿ ಗಾಂಧಿ, ಅಂಬೇಡ್ಕರ್‌ ಅವರನ್ನು ದ್ವೇಷಿಸಿ ಸಾರ್ವಜನಿಕರ ಮುಂದೆ ಹೊಳಗುವ ಮುಖವಾಡವೇಕೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ